ಮನೋರಂಜನೆ

ಚಲನಚಿತ್ರ ಬಿಟ್ಟು ಬಲೂನ್​ ಮಾರಾಟ ಮಾಡಲು ಹೋದ ನಟಿ ಹನ್ಸಿಕಾ ಮೋಟ್ವಾನಿ!

Pinterest LinkedIn Tumblr


ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಹನ್ಸಿಕಾ ಮೋಟ್ವಾನಿ ಅವರದ್ದು ದೊಡ್ಡ ಹೆಸರು. ಕಳೆದೊಂದು ದಶಕದಿಂದ ರಂಜಿಸುತ್ತ ಬಂದಿರುವ ಹನ್ಸಿಕಾ ಈಗಾಗಲೇ ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗಲೂ ಹಲವು ಸಿನಿಮಾ ಅವಕಾಶಗಳನ್ನು ಕೈಯಲ್ಲಿ ಹಿಡಿದುಕೊಂಡು ಬಿಜಿಯಾಗಿದ್ದಾರೆ. ಆದರೆ, ಈ ನಡುವೆ ಹನ್ಸಿಕಾ ಬೇರೊಂದು ಉದ್ಯಮದತ್ತ ಮುಖಮಾಡಿದ್ದಾರೆ.

ಹೌದು, ಸಿನಿಮಾ ಜತೆಗೆ ಒಂದಿಲ್ಲೊಂದು ಕೆಲಸಗಳಲ್ಲಿ ಸಿನಿಮಾ ನಟಿಯರು ತೊಡಗಿಸಿಕೊಂಡಿದ್ದಾರೆ. ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಪೂರಕ ಉದ್ಯಮಗಳಲ್ಲೂ ಭಾಗಿಯಾಗಿದ್ದಾರೆ. ಈಗ ಹನ್ಸಿಕಾ ಬಲೂನ್​ ಬಿಜಿನೆಸ್​ ಶುರುಮಾಡಿದ್ದಾರೆ. ಈಗಾಗಲೇ ಆ ಬಿಜಿನೆಸ್​ ಪ್ರಗತಿಯಲ್ಲಿಯೂ ಸಾಗುತ್ತಿದೆ.

ಬಲೂನ್​ ಸ್ಟೈಲಿಸ್ಟ್ ಹೆಸರಿನ ಸಂಸ್ಥೆ ತೆರೆದಿರುವ ಅವರು ಅದರ ಪ್ರಚಾರಾರ್ಥವಾಗಿ ಸಾಕಷ್ಟು ಬಲೂನ್​ಗಳಿರುವ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಹನ್ಸಿಕಾ ಅವರ ಈ ಕಾರ್ಯಕ್ಕೆ ಸೆಲೆಬ್ರಿಟಿ ವಲಯ ಮೆಚ್ಚುಗೆ ವ್ಯಕ್ತಪಡಿಸಿದೆ.

Comments are closed.