ಮನೋರಂಜನೆ

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್​ ಕದ್ರಿಗೆ ಕೊರೋನಾ​!

Pinterest LinkedIn Tumblr

​​
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್​ ಕದ್ರಿಗೆ ಕೊರೋನಾ ಪಾಸಿಟಿವ್​ ಕಂಡುಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು ಶೀಘ್ರದಲ್ಲೇ ಗುಣಮುಖನಾಗಿ ಹೊರಬರಲಿದ್ದೇನೆ ಎಂದಿದ್ದಾರೆ.

ಫೇಸ್​​ಬುಕ್​​ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಾಕಿಕೊಂಡಿರುವ ಮಣಿಕಾಂತ್​​ ಕದ್ರಿ, ‘ನನಗೆ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಕ್ವಾರಟೈನ್​ ಆಗಿ ಗುಣಮುಖನಾಗುತ್ತಿದ್ದೇನೆ. ಕೊರೋನಾ ಪರೀಕ್ಷೆ ಮತ್ತು ತಪಾಸಣೆಯ ಬಗ್ಗೆ ಸರ್ಕಾರ ನೀಡಿರುವ ಸೌಲಭ್ಯವನ್ನು ಪ್ರಶಂಸಿಸಬೇಕು!!, ಸುಲಭ, ಸ್ನೇಹಪರ, ಸ್ವಚ್ಛ ಮತ್ತು ಕಾಳಜಿ!! ಎಂದು ಬರೆದುಕೊಂಡಿದ್ದಾರೆ.

ಅದರ ಜೊತೆಗೆ ಕೊರೋನಾದ ಬಗ್ಗೆ ಜನರಿಗೆ ಟಿಪ್ಸ್​ ನೀಡಿದ್ದಾರೆ. ಚಿಂತಿಸಬೇಡಿ, ಭಯಪಡಬೇಡಿ. ಆದರೆ ನಿರ್ಲಕ್ಷಿಸಬೇಡಿ. ಎಲ್ಲಾ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ, ಸುರಕ್ಷಿತವಾಗಿರಿ. ಎಂದು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್​ವುಡ್​ ನಟ ಧ್ರುವಾ ಸರ್ಜಾ, ಸುಮಲತಾ ಅಂಬರೀಶ್​​, ರಾಕ್​ಲೈನ್​ ವೆಂಕಟೇಶ್​​ ಅವರಿಗೆ ಕೊರೋನಾ ಪಾಸಿಟಿವ್​ ಬಂದಿತ್ತು. ಇವರೆಲ್ಲರು ಕ್ವಾರಂಟೈನ್​ ಆಗುವ ಮೂಲಕ ಸರಿಯಾದ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿದ್ದಾರೆ. ಇದೀಗ ಮಣಿಕಾಂತ್​ ಕದ್ರಿ ಅವರಿಗೂ ಕೊರೋನಾ ತಗುಲಿದೆ. ಅನೇಕರು ಇವರ ಫೇಸ್​ಬುಕ್​ ಪೋಸ್ಟ್​ ನೋಡಿ ಬೇಗ ಗುಣಮುಖರಾಗಿ ಎಂದು ಕಾಮೆಂಟ್​ ಬರೆಯುತ್ತಿದ್ದಾರೆ.

ಮಣಿಕಾಂತ್​ ಕದ್ರಿ ಮಂಗಳೂರಿನವರಾಗಿದ್ದು, ಸ್ಯಾಂಡಲ್​ವುಡ್​ನ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಹಿಂದಿ, ತೆಲುಗು, ಮಲಯಾಳಂ, ತಮಿಳು, ತುಳು ಸಿನಿಮಾಗಳಿಗೆ ಸಂಗೀತದ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ಜಾತ್ರೆ, ರನ್​ ಆ್ಯಂಟೋನಿ, ಮೀನಾ ಬಜಾರ್​ಮ ಮೂಕ ಹಕ್ಕಿ, ಮಾರ್ಚ್​ 22, ವರ್ಜಿನ್​, ಆಡಿಸಿದಾತ ಸಿನಿಮಾಗೆ ಸಂಗೀತ ನೀಡಿದ್ದಾರೆ.

Comments are closed.