ಮನೋರಂಜನೆ

ಸುಶಾಂತ್​ ಮತ್ತು ಮಾಜಿ ಮ್ಯಾನೇಜರ್ ನಡುವಿನ ವಾಟ್ಸಾಪ್​ ಚಾಟ್​ ಬಹಿರಂಗ

Pinterest LinkedIn Tumblr


ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇದಿನೆ ಹೊಸ ಹೊಸ ಬೆಳವಣಿಗೆಗಳು ಎದುರಾಗುತ್ತಿದೆ. ಈ ನಡುವೆ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್​ ಸಾವಿಗೂ ಸುಶಾಂತ್​ಗೂ ಸಂಬಂಧವಿದೆಯೇ ಎಂಬ ಪ್ರಶ್ನೆ ಉದ್ಭವ ವಾಗಿತ್ತು. ಇದೀಗ ಆ ಪ್ರಶ್ನೆಗೆ ತಕ್ಕಂತೆ ದಿಶಾ ಮತ್ತು ಸುಶಾಂತ್ ನಡುವಿನ ವಾಟ್ಸಾಪ್ ಚಾಟ್​ ಬಹಿರಂಗವಾಗಿದೆ. ಒಂದಷ್ಟು ಅಚ್ಚರಿಯ ಉತ್ತರಗಳು ಲಭಿಸಿದ್ದು, ಕಾಡಿದ್ದ ಪ್ರಶ್ನೆಗಳಿಗೆ ಉತ್ತರವೂ ಸಿಕ್ಕಿದೆ.

ಜೂನ್​ 8ರಂದು ದಿಶಾ ಆತ್ಮಹತ್ಯೆ ಮಾಡಿಕೊಂಡರೆ, ಜೂನ್​ 14ರಂದು ಸುಶಾಂತ್ ನೇಣಿಗೆ ಶರಣಾಗಿದ್ದರು. ಇದೀಗ ಇವರಿಬ್ಬರ ನಡುವಿನ ವಾಟ್ಸಾಪ್​ ಚಾಟ್​ ಬಹಿರಂಗವಾಗಿದ್ದು, ಒಬ್ಬ ಮ್ಯಾನೇಜರ್​ ಆಗಿ ಏನೆಲ್ಲ ಚರ್ಚೆ ಮಾಡಬಹುದಿತ್ತೋ ಅದಷ್ಟೇ ಇವರಿಬ್ಬರ ಚಾಟ್​ನಲ್ಲಿ ಕಾಣಿಸಿದೆ. ಏಪ್ರಿಲ್​ನಲ್ಲಿ ಇಬ್ಬರ ನಡುವೆ ಸಿನಿಮಾ ಮತ್ತು ಒಂದಷ್ಟು ಹೊಸ ಪ್ರಾಜೆಕ್ಟ್​ ಕುರಿತು ಮಾತುಕತೆ ನಡೆದಿದೆ. ಅದೇ ರೀತಿ ಟಿವಿ ಜಾಹೀರಾತುಗಳಿಗೂ ಆಫರ್​ ಬಂದಿದ್ದು, ಆ ವಿಚಾರವೂ ವಾಟ್ಸಾಪ್​ ಚಾಟ್​ನಲ್ಲಿ ಗೊತ್ತಾಗಿದೆ.

ಇನ್ನು ಇತ್ತ ಸುಶಾಂತ್​ ಸಾವಿನ ದಿನ ಕಾಣಿಸಿದ ಅಪರಿಚಿತ ಮಹಿಳೆ ಬಗ್ಗೆಯೂ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಇನ್ನೂ ಆ ಮಹಿಳೆಯನ್ನು ವಿಚಾರಣೆ ನಡೆಸದೆ ಸುಮ್ಮನೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮುಂಬೈ ಪೊಲೀಸ್​ ಇಲಾಖೆಯ ಈ ನಿರ್ಲಕ್ಯಕ್ಕೆ ಬಿಜೆಪಿ ಮುಖಂಡ ಸುಬ್ರಮಣಿಯನ್​ ಸ್ವಾಮಿ ಸಹ ಖಂಡಿಸಿದ್ದಾರೆ.

Comments are closed.