ಮನೋರಂಜನೆ

5 ವರ್ಷದ ಬಳಿಕ ಒಂದಾಗುತ್ತಿರುವ ಬಾಲಿವುಡ್​ ಜೋಡಿ.!

Pinterest LinkedIn Tumblr


ಬಿ-ಟೌನ್​​ ಫೇಮಸ್ ಆನ್​​ ಸ್ಕ್ರೀನ್​​ ಜೋಡಿಗಳ ಪೈಕಿ ಇವರು ಕೂಡ ಒಬ್ಬರು. ಗ್ಲಾಮರ್ ಮತ್ತು ಡಿ-ಗ್ಲಾಮರ್​​ ಪಾತ್ರಗಳಿಂದ ಜನರನ್ನ ಮೋಡಿ ಮಾಡಿದ್ದ ಈ ಇಬ್ಬರು ಸ್ಟಾರ್​ಗಳು, ಮತ್ತೆ ಒಂದೇ ತೆರೆ ಮೇಲೆ ಮಿಂಚ್ಬೇಕು ಅನ್ನೋದು ಫ್ಯಾನ್ಸ್​ಗಳ ಬೇಡಿಕೆಯಾಗಿತ್ತು. ಹೀಗಾಗಿ ಬಾಲಿವುಡ್​​ನ ‘ಆ’ ಬಾದ್‌ಶಾ ಮತ್ತು ಮಂಗಳೂರಿನ ಆ ಬೆಡಗಿ ಮತ್ತೆ ಸ್ಕ್ರೀನ್​ ಮೇಲೆ ರೊಮ್ಯಾನ್ಸ್​ ಮಾಡಲು ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ದೀಪಿಕಾ ಪಡುಕೋಣೆ.. ಕೋಟ್ಯಾಂತರ ಪಡ್ಡೆ ಹುಡುಗರ ನಿದ್ದೆ ಕದ್ದು, ಬಾಲಿವುಡ್​​​​ನಲ್ಲಿ ಮಿಂಚು ಹರಿಸುತ್ತಿರುವ ಚೆಂದುಳ್ಳಿ ಚೆಲುವೆ. ಇನ್ನು ಶಾರೂಖ್​​ ಖಾನ್​​ ಬಾಲಿವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ಕೊಟ್ಟು ಬಾಲಿವುಡ್​ ಬಾದ್​ಶಾ ಅಂತನೇ ಖ್ಯಾತಿ ಪಡೆದಿರುವ ನಟ.. ಇವರಿಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಬರುತ್ತೆ ಅಂದ್ರೆ ಅದರ ನಿರೀಕ್ಷೆ ಜಾಸ್ತಿನೇ ಇರುತ್ತೆ..

ಶಾರೂಖ್​ ಮತ್ತು ದೀಪಿಕಾ ಕಾಂಬೋದಲ್ಲಿ ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್​ಪ್ರೆಸ್​’ ಹಾಗೂ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗಳು ಈಗಾಗಲೇ ತೆರೆ ಮೇಲೆ ಅಪ್ಪಳಿಸಿವೆ. ಅದರಲ್ಲೂ ಚೆನ್ನೈ ಎಕ್ಸ್​ಪ್ರೆಸ್ ನಲ್ಲಿ ಈ ಜೋಡಿಯ ಕೆಮಿಸ್ಟ್ರಿ​ಗೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ರು. ಇದೀಗ ಸತತ ಐದು ವರ್ಷಗಳ ನಂತರ ಇವರಿಬ್ಬರೂ ಮತ್ತೊಮ್ಮೆ ನಾಯಕ-ನಾಯಕಿಯಾಗಿ ಹೈವೋಲ್ಟೇಜ್ ಆಕ್ಷನ್​ ಸಿನಿಮಾ ‘ಪಠಾಣ್’​​ ಮೂಲಕ ಡ್ಯುಯೇಟ್​ ಮಾಡಲಿದ್ದಾರೆ..

ಶಾರೂಖ್-ದೀಪಿಕಾ ಐದು ವರ್ಷಗಳಾದ್ಮೇಲೆ ಒಂದಾಗುತ್ತಿದ್ದಾರೆ ಅನ್ನೋದು ಒಂದು ಕಡೆಯಾದ್ರೆ.. ಶಾರೂಖ್​​ ಎರಡು ವರ್ಷದ ಗ್ಯಾಪ್​ನ ನಂತ್ರ ಗ್ರೀನ್​ ಸಿಗ್ನಲ್​ ಕೊಟ್ಟಿರುವ ಸಿನಿಮಾವಿದು. ಹೀಗಾಗಿ ಈ ಸಿನಿಮಾದ ಮೇಲೆ ಜಾಸ್ತಿನೇ ನಿರೀಕ್ಷೆ ಇದೆ. ಈ ಹಿಂದೆ ‘ವಾರ್​’ ಚಿತ್ರವನ್ನ ನಿರ್ದೇಶಿಸಿದ್ದ ಸಿದ್ಧಾರ್ಥ್​ ಆನಂದ್​ ಈ ಚಿತ್ರವನ್ನು ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಏನಿವೇ ಇವರಿಬ್ಬರ ಕೆಮಿಸ್ಟ್ರಿಯನ್ನ ಮತ್ತೆ ತೆರೆ ಮೇಲೆ ನೋಡಲು ಫ್ಯಾನ್ಸ್​ಗಳು ಕಾತುರದಿಂದ ಕಾಯುತ್ತಿದ್ದಾರೆ.

Comments are closed.