ಮನೋರಂಜನೆ

ಆಗಸ್ಟಾ, ವಿಜಯ್ ಮಲ್ಯ ಪ್ರಕರಣದ ತನಿಖೆ ನಡೆಸಿದ್ದ ತಂಡಕ್ಕೆ ಸುಶಾಂತ್ ಸಾವು ಪ್ರಕರಣ ಹಸ್ತಾಂತರ

Pinterest LinkedIn Tumblr


ನವದೆಹಲಿ: ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ಸಿಬಿಐ ಗೆ ವಹಿಸಲಾಗಿದ್ದು, ಆಗಸ್ಟಾ ವೆಸ್ಟ್ ಲ್ಯಾಂಡ್, ಮಲ್ಯ ಸಾಲ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಬಿಐ ನ ತಂಡಕ್ಕೇ ಈ ಪ್ರಕರಣವನ್ನೂ ವಹಿಸಲಾಗಿದೆ.

ಸಿಬಿಐ ತನ್ನ ಭ್ರಷ್ಟಾಚಾರ ವಿರೋಧಿ ವಿಭಾಗ VI ವಿಶೇಷ ತನಿಖಾ ತಂಡದ ಮೂಲಕ ಸುಶಾಂತ್ ಸಾವು ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಸಿಬಿಐ ನಿರ್ದೇಶಕ ಆರ್ ಕೆ ಶುಕ್ಲಾ ಅವರನ್ನೊಳಗೊಂಡ ಸಿಬಿಐ ನ ಹಿರಿಯ ಅಧಿಕಾರಿಗಳ ತಂಡದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬಿಹಾರ ಸರ್ಕಾರದ ಶಿಫಾರಸ್ಸಿನ ಆಧಾರದಲ್ಲಿ ಸುಶಾಂತ್ ಸಾವಿನ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದ್ದು ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ, ಆಕೆಯ ತಂದೆ ಇಂದ್ರಜೀತ್ ಚಕ್ರವರ್ತಿ, ತಾಯಿ ಸಂಧ್ಯಾ ಚಕ್ರವರ್ತಿ, ಸಹೋದರ ಶೋವಿಕ್ ಚಕ್ರವರ್ತಿ, ಶೃತಿ ಮೋದಿ, ಮನೆಯ ವ್ಯವಸ್ಥಾಪಕರಾಗಿದ್ದ ಸ್ಯಾಮ್ಯುಯಲ್ ಮಿರಾಂಡ ಹಾಗೂ ಇನ್ನಿತರ ಅನಾಮಿಕರ ಹೆಸರನ್ನು ಸಿಬಿಐ ತನಿಖೆಯ ಪಟ್ಟಿಯಲ್ಲಿ ಸೇರ್ಪಡೆ ಮಾಡಿದೆ.

1994 ರ ಬ್ಯಾಚ್ ನ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಜಂಟಿ ನಿರ್ದೇಶಕ ಮನೋಜ್ ಶಶಿಧರ್, ಡಿಐಜಿ ಗಗನ್ ದೀಪ್ ಗಂಭೀರ್ (ಗುಜರಾತ್ ಕೇಡರ್) ಎಸ್ ಪಿ ನೂಪುರ್ ಪ್ರಸಾದ್ ಅವರಿರುವ ತಂಡ ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆ.

Comments are closed.