ಮನೋರಂಜನೆ

ಜಿಮ್‌ಗಳು ಬಾಗಿಲು ಮುಚ್ಚಿದರೂ ಬಾಡಿ ವರ್ಕೌಟ್‌ ಮಾಡಿ ದಂಗು ಬಡಿಸಿದ ನಟ ರಣವೀರ್‌ ಸಿಂಗ್‌!

Pinterest LinkedIn Tumblr

ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಬೇಕು ಎಂದು ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ ಸೆಲೆಬ್ರಿಟಿಗಳು. ಪಾತ್ರಕ್ಕೆ ತಕ್ಕಂತೆ ದೇಹವನ್ನು ಹುರಿಗೊಳಿಸಿಕೊಳ್ಳುತ್ತಾರೆ. ಅದಕ್ಕಾಗಿ ಹೆಚ್ಚು ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಾರೆ. ಆದರೆ ಲಾಕ್‌ಡೌನ್‌ನಲ್ಲಿ ಜಿಮ್‌ಗಳು ಬಾಗಿಲು ಮುಚ್ಚಿರುವುದರಿಂದ ವರ್ಕೌಟ್‌ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿತ್ತು. ಈ ಸಮಯದಲ್ಲೂ ರಣವೀರ್‌ ಸಿಂಗ್ ಮೋಡಿ ಮಾಡಿದ್ದಾರೆ.

 

ಫಿಟ್ನೆಸ್‌ ವಿಚಾರದಲ್ಲಿ ರಣವೀರ್‌ ಸಿಂಗ್ ಯಾವುತ್ತೂ ರಾಜಿ ಆದವರೇ ಅಲ್ಲ. ಅಗತ್ಯ ಇದ್ದಾಗ ಪ್ರತಿ ಬಾರಿಯೂ ತೆರೆಮೇಲೆ ಶರ್ಟ್‌ಲೆಸ್‌ ಆಗಿ ಕಾಣಿಸಿಕೊಂಡು ಅವರು ಅಚ್ಚರಿ ಮೂಡಿಸುತ್ತಾರೆ. ವಿಶೇಷ ಏನೆಂದರೆ, ಈ ಲಾಕ್‌ಡೌನ್‌ ಸಮಯವನ್ನೂ ಅವರು ವರ್ಕೌಟ್‌ಗಾಗಿಯೇ ಹೆಚ್ಚು ಬಳಸಿಕೊಂಡಿದ್ದಾರೆ. ಇಷ್ಟು ದಿನ ಆ ಬಗ್ಗೆ ಸೈಲೆಂಟ್‌ ಆಗಿದ್ದ ಅವರು ಈಗ ಏಕಾಏಕಿ ಒಂದು ಫೋಟೋ ಅಪ್‌ಲೋಡ್‌ ಮಾಡಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ರಣವೀರ್‌ ಸಿಂಗ್‌ ಕಠಿಣ ವರ್ಕೌಟ್‌ ಮಾಡಿದ್ದಾರೆ. ಮನೆಯಲ್ಲೇ ಜಿಮ್‌ ಇರುವುದರಿಂದ ಅವರಿಗೆ ವ್ಯಾಯಾಮ ತಪ್ಪಿಸುವ ಪ್ರಸಂಗ ಎದುರಾಗಲಿಲ್ಲ. ಶೂಟಿಂಗ್‌, ಡಬ್ಬಿಂಗ್‌ ಮುಂತಾದ ಬೇರೆನೂ ಕೆಲಸ ಇಲ್ಲದ ಕಾರಣ ಪೂರ್ತಿ ಸಮಯವನ್ನು ವರ್ಕೌಟ್‌ಗೆ ಮೀಸಲಿಟ್ಟಿದ್ದಾರೆ. ಪರಿಣಾಮವಾಗಿ ಅವರ ದೇಹ ಇನ್ನಷ್ಟು ಹುರಿಗೊಂಡಿದೆ. ಅದನ್ನು ತೋರಿಸಲೆಂದೇ ಒಂದು ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

ಖಡಕ್‌ ಆಗಿ ಪೋಸ್‌ ನೀಡಿರುವ ರಣವೀರ್‌ ಸಿಂಗ್ ಅವರನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಅಭಿಮಾನಿಗಳು ಮಾತ್ರವಲ್ಲದೆ, ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. 8-ಪ್ಯಾಕ್‌ ಮಾಡಿ ಸೈ ಎನಿಸಿಕೊಂಡ ನಟ ಟೈಗರ್‌ ಶ್ರಾಫ್‌ ಕೂಡ ಈಗ ರಣವೀರ್‌ ಸಿಂಗ್‌ ಅವರ ಫೋಟೋ ಕಂಡು ಬೆರಗಾಗಿದ್ದಾರೆ. ಈ ಫೋಟೋಗೆ ಸಾವಿರಾರು ಮಂದಿ ಕಾಮೆಂಟ್‌ ಮಾಡಿದ್ದು, ಮಿಲಿಯನ್‌ಗಟ್ಟಲೆ ಲೈಕ್ಸ್‌ ಬಂದಿದೆ.

 

Comments are closed.