ಮನೋರಂಜನೆ

ಬಾಲಿವುಡ್ ನಟ ಸುಶಾಂತ್ ಸಾವಿನ ಅಸಲಿ ಕಾರಣ ಬಿಚ್ಚಿಟ್ಟ ಬಾಡಿಗಾರ್ಡ್

Pinterest LinkedIn Tumblr


ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ದಿನಕ್ಕೊಂದರಂತೆ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಏತನ್ಮಧ್ಯೆ, ಸುಶಾಂತ್ ಅವರ ಬಾಡಿಗಾರ್ಡ್ ಚಾನೆಲ್ನೊಂದಿಗಿನ ಸಂಭಾಷಣೆಯಲ್ಲಿ ಹಲವಾರು ವಿಷಯಗಳನ್ನ ಬಹಿರಂಗಪಡಿಸಿದ್ದಾರೆ. ‘ಸುಶಾಂತ್ ಸಿಂಗ್ ರಜಪೂತ್ ಅವರ ಮನೆಯಲ್ಲಿ ಸದಾ ಪಾರ್ಟಿಗಳು ನಡೆಯುತ್ತಿದ್ದವು. ಅವುಗಳಲ್ಲಿ ಅವರು ಭಾಗವಹಿಸುತ್ತಿರಲಿಲ್ಲ. ಮನೆಯಲ್ಲಿ ಸಾಕಷ್ಟು ವ್ಯರ್ಥ ವೆಚ್ಚಗಳು ಇದ್ದವು. ಈ ಖರ್ಚುಗಳಿಗೂ ಸುಶಾಂತ್‌ಗೂ ಯಾವುದೇ ಸಂಬಂಧವಿರಲಿಲ್ಲ. ಅವರು ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ತನ್ನ ಮನೆಯ ಮಹಡಿಯ ಮೇಲೆ ಪಾರ್ಟಿಗಳು ನಡೆಯುತ್ತಿದ್ದಾಗ ಅವರು ತಮ್ಮ ರೂಮ್ ನಲ್ಲೇ ಮಲಗಿರುತ್ತಿದ್ದರು” ಎಂದು ಅವರ ಬಾಡಿಗಾರ್ಡ್ ಹೇಳಿದ್ದಾರೆ

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಈ ಸಂಪೂರ್ಣ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಅನೇಕ ಆ‹ರೋಪ’ಗಳನ್ನು ಎದುರಿಸುತ್ತಿದ್ದಾರೆ. ಸುಶಾಂತ್ ಅವರ ತಂದೆ ಎಫ್ಐಆರ್ ದಾಖಲಿಸಿದ ನಂತರ ರಿಯಾ ಚಕ್ರವರ್ತಿ ಬಣ್ಣ ಬಯಲಾಗಿದೆ. ಬಾಡಿಗಾರ್ಡ್ ಮುಂದೆ ಮಾತನಾಡುತ್ತ ಸುಶಾಂತ್ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಚಾನೆಲ್ಗೆ ತಿಳಿಸಿದರು. ತನ್ನ ಮನೆಯ ಛಾವಣಿಯ ಮೇಲೆ ಪಾರ್ಟಿಗಳು ನಡೆಯುತ್ತಿದ್ದಾಗ ಅವರು ಒಬ್ನರೇ ತಮ್ಮ ರೂಮ್ ನಲ್ಲಿ ಮಲಗಿರುತ್ತಿದ್ದರು. ಈ ಪಾರ್ಟಿಗಳಲ್ಲಿ ರಿಯಾ ಚಕ್ರವರ್ತಿ, ಅವರ ತಂದೆ, ತಾಯಿ, ಸಹೋದರ ಮತ್ತು ಸ್ನೇಹಿತರು ಇರುತ್ತಿದ್ದರು. ರಿಯಾ ಚಕ್ರವರ್ತಿ ವಿ’ರುದ್ಧದ ಆ‹ರೋಪ’ದ ಬಗ್ಗೆ ಬಾಡಿಗಾರ್ಡ್ ಮಾತನಾಡುತ್ತ ಪ್ರ’ಕರಣದ ತನಿ‹ಖೆ ನಡೆಸಬೇಕು ಮತ್ತು ಸುಶಾಂತ್ ಸಿಂಗ್ ರಜಪೂತ್‌ ರವರಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

ರಿಯಾ ಅವರನ್ನು ಭೇಟಿಯಾದ ನಂತರ ಸುಶಾಂತ್ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ರಿಯಾ ಸುಶಾಂತ್ ರವರ ಎಲ್ಲ ಸಿಬ್ಬಂದಿಯನ್ನು ಬದಲಾಯಿಸಿದ್ದರು. ನಾನು ಮಾತ್ರ ಹಳೆಯ ಸಿಬ್ಬಂದಿಯಾಗಿ ಉಳಿದಿದ್ದೆ. ಮುಂದೆ ಮಾತನಾಡಿದ ಅವರು “ರಿಯಾ ಚಕ್ರವರ್ತಿಯ ಕುಟುಂಬ ಮಾತ್ರ ಸುಶಾಂತ್ ಮನೆಗೆ ಬರಬಹುದಾಗಿತ್ತು. ಸುಶಾಂತ್ ಅವರ ಕುಟುಂಬ ಸದಸ್ಯರು ಎಂದಿಗೂ ಬರುತ್ತಿರಲಿಲ್ಲ. ರಿಯಾ ಚಕ್ರವರ್ತಿ ಹಣವನ್ನು ಲೆಕ್ಕ ಹಾಕುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಮನೆಯ ಎಲ್ಲಾ ಖರ್ಚುಗಳು ಸುಶಾಂತ್ ಮೇಲೆಯೇ ಅವಲಂಬಿತವಾಗಿತ್ತು. ಸುಶಾಂತ್ ಅವರ ಖರ್ಚು ತುಂಬಾ ಕಡಿಮೆಯಿತ್ತು, ಆದರೆ ಒಂದು ವರ್ಷದಲ್ಲಿ 15 ಕೋಟಿ ಖರ್ಚು ಮಾಡಿದ್ದಾರೆಂದರೆ ಯಾರಿಗಾಗಿ ಮಾಡಿದ್ದಾರೆ ಯಾಕಾಗಿ ಮಾಡಿದ್ದಾರೆ ಅನ್ನೋದರ ಬಗ್ಗೆ ತ’ನಿಖೆ ಮಾಡಬೇಕು” ಎಂದಿದ್ದಾರೆ.

ಸುಶಾಂತ್‌ಗೆ ಓ’ವರ್ ಡೋ’ಸ್ ಔ‹ಷಧಿಗ’ಳನ್ನ ನೀಡುವ ಬಗ್ಗೆ ಮಾತನಾಡಿದ ಅವರ ಬಾಡಿಗಾರ್ಡ್ “ನಾವು ಅವರನ್ನ ಭೇಟಿಯಾಗಲು ಬಯಸಿದಾಗಲೆಲ್ಲಾ ಸರ್ ಮಲಗಿದ್ದಾರೆ ಎಂದು ಹೇಳುತ್ತಿದ್ದರು. ಮೊದಲಿಗೆ ಎಲ್ಲವೂ ಚೆನ್ನಾಗಿತ್ತು ಆದರೆ ಯುರೋಪ್ ಟ್ರಿಪ್‌ನ ನಂತರ ಅವರ ಆರೋಗ್ಯವು ಹ‹ದಗೆಡ’ಲು ಪ್ರಾರಂಭಿಸಿತು. ಅಂದಿನಿಂದ ಅವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು” ಎಂದಿದ್ದಾರೆ.

Comments are closed.