ಸುಶಾಂತ್ ಸಾವಿನ ತನಿಖೆ ಬಗೆಬಗೆ ಕೋನಗಳಲ್ಲಿ ವಿಚಾರಣೆಗೊಳಪಡುತ್ತಿದ್ದಂತೆ ಈ ಪ್ರಕರಣ ದಿನದಿಂದ ದಿನಕ್ಕೆ ಕುತೂಹಲಕ್ಕೆ ಕಾರಣವಾಗುತ್ತಿದೆ. ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ರಿಯಾ ವಿರುದ್ಧ ದೂರು ನೀಡುತ್ತಿದ್ದಂತೆ, ಸಾಕಷ್ಟು ಬೆಳವಣಿಗೆಗಳು ನಡೆದವು. ತನಿಖೆಯ ಮಗ್ಗಲು ಬದಲಾಯಿತು. ವಿಚಾರಣೆಗೆ ಹೊಸಬರ ಆಗಮನವೂ ಆಗುತ್ತಿದೆ. ಇದೀಗ ಈ ಸಾವಿನ ಹಿಂದೆ ಮಾಟ ಮಂತ್ರದ ಜಾಲವೂ ಇದೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ!
ಸುಶಾಂತ್ ಸಿಂಗ್ ಆಪ್ತ ಸ್ನೇಹಿತೆ ಕ್ರಿಸನ್ ಬರೆಟ್ಟೋ ಇಂಥದ್ದೊಂದು ಮಾತನ್ನು ಹೇಳಿ, ಪ್ರಕರಣದ ಬಗೆಗಿನ ಕುತೂಹಲ ಹೆಚ್ಚಿಸಿದ್ದಾರೆ. ‘ರಿಯಾ ಮತ್ತು ಸುಶಾಂತ್ ನಡುವಿನ ನಂಟು ಯಾವಾಗ ಹೆಚ್ಚಾಗುತ್ತ ಹೋಯಿತೋ ಆಗಿನಿಂದ ಸ್ನೇಹಿತರು ಸೇರಿ ಮನೆಯವರನ್ನೇ ಸುಶಾಂತ್ ದೂರವಿಟ್ಟರು. ಅದಕ್ಕೆಲ್ಲ ರಿಯಾ ಕಾರಣ. ಆಕೆಯೇ ಬ್ಲಾಕ್ ಮ್ಯಾಜಿಕ್ ಮೂಲಕ ಇದೆಲ್ಲವನ್ನೂ ಮಾಡಿದ್ದಾಳೆ’ ಎಂದು ಕ್ರಿಸನ್ ಆರೋಪಿಸಿದ್ದಾರೆ.
ಈ ಮೊದಲು ಸಿಂಗ್ ಸಾವಿನ ತನಿಖೆಗೆ ಹಾಜರಾಗಿದ್ದ ಸುಶಾಂತ್ ಮನೆಕೆಲಸದ ವ್ಯಕ್ತಿ ಸಹ, ಸುಶಾಂತ್ ಮೇಲೆ ರಿಯಾ ಬ್ಲಾಕ್ ಮ್ಯಾಜಿಕ್ ಮಾಡಿಸಿದ್ದಾರೆ. ಕುಟುಂಬದಿಂದ ದೂರ ಮಾಡಲು ಈ ರೀತಿ ಮಾಡಿದ್ದರು ಎಂಬ ಹೇಳಿಕೆ ನೀಡಿದ್ದ. ಇದೀಗ ಅದೇ ಮಾತನ್ನು ಸುಶಾಂತ್ ಆಪ್ತ ಸ್ನೇಹಿತೆ ಕ್ರಿಸನ್ ಸಹ ಹೇಳುತ್ತಿದ್ದಾರೆ.
‘ಯಾವಾಗ ರಿಯಾ ಜತೆ ಡೇಟಿಂಗ್ ಮಾಡಲು ಶುರುಮಾಡಿದನೋ, ಆವತ್ತಿನಿಂದ ನಮ್ಮ ಇಡೀ ಸಂಗವನ್ನೇ ಕೈಬಿಟ್ಟ. ಮನೆಯವರನ್ನೂ ಸಂಪರ್ಕಿಸಲಿಲ್ಲ. ಆತನ ಫೋನ್ ನಂಬರ್ ಸಹ ಬದಲಾಯಿತು. ಸುಮಾರು ಸಲ ಸಂಪರ್ಕಿಸಲು ಪ್ರಯತ್ನ ಪಟ್ಟರೂ, ಮಾತಿಗೆ ಸಿಗಲಿಲ್ಲ. ಇದೆಲ್ಲದಕ್ಕೆ ರಿಯಾ ಮಾಟ ಮಂತ್ರದ ಮೊರೆ ಹೋಗಿ ಆತನನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಳು’ ಎಂದಿದ್ದಾರೆ.
Comments are closed.