ಮನೋರಂಜನೆ

ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪೂನಂ ಪಾಂಡೆ

Pinterest LinkedIn Tumblr


ಮಾಡೆಲ್, ಮಾದಕ ನಟಿ ಪೂನಂ ಪಾಂಡೆ ಅವರ ಬಹುಕಾಲದ ಗೆಳೆಯನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಕುರಿತು ಅವರ ಗೆಳೆಯ ಸ್ಯಾಮ್ ಬೊಂಬೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದಕ್ಕೆ ಪೂನಂ ‘ಬೆಸ್ಟ್ ಫೀಲಿಂಗ್’ ಎಂದು ಕಾಮೆಂಟ್ ಮಾಡಿದ್ದಾರೆ.

ಸ್ಯಾಮ್ ಬೊಂಬೆ ಜೊತೆ ಪೂನಂ ಪಾಂಡೆ ನಿಶ್ಚಿತಾರ್ಥ
ಈ ಪೋಸ್ಟ್‌ಗೆ ನೆಟ್ಟಿಗರು ಸಾಕಷ್ಟು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ‘ದೊಡ್ಡ ನಿರ್ಧಾರಕ್ಕೆ ದೊಡ್ಡ ಶುಭಾಶಯ’ ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು ‘ಧನ್ಯವಾದಗಳು, ಉತ್ತಮ ಜೀವನ ನಿಮ್ಮದಾಗಲಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ‘ನೀವು ಅದೃಷ್ಟವಂತ ವ್ಯಕ್ತಿ, ಏಕೆಂದರೆ ಪೂನಂ ಪಾಂಡೆ ನಿಮ್ಮವರಾಗಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ. ಹಲವು ಸಮಯದಿಂದ ಪೂನಂ ಹಾಗೂ ಸಾಮ್ ಅಹ್ಮದ್ ಡೇಟಿಂಗ್‌ನಲ್ಲಿದ್ದಾರೆಂಬ ಮಾತುಗಳು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿತ್ತು, ಈಗ ಇದು ನಿಜ ಆಗಿದೆ.

ಮೇ ತಿಂಗಳಲ್ಲಿ ಪೂನಂ ಲಾಕ್‌ಡೌನ್ ನಿಯಮ ಮೀರಿದ್ರಾ?
ಕಳೆದ ಮೇ ತಿಂಗಳಲ್ಲಿ ಲಾಕ್‌ಡೌನ್ ನಿಯಮ ಮುರಿದು, ಡ್ರೈವ್ ಹೋಗಿದ್ದಾರೆ, ಮುಂಬೈ ಪೊಲೀಸರು ಇವರನ್ನು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆಮೇಲೆ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದ ಪೂನಂ, ನಾನು ಮನೆಯಲ್ಲಿ ಸಿನಿಮಾ ನೋಡುತ್ತಿದ್ದೆ ಎಂದು ಹೇಳಿದ್ದಾರೆ. ‘ಕಳೆದ ರಾತ್ರಿ ಮೂರು ಸಿನಿಮಾ ಬ್ಯಾಕ್ ಟು ಬ್ಯಾಕ್ ನೋಡಿದೆ. ತುಂಬ ಮಜವಾಗಿತ್ತು. ಕಳೆದ ರಾತ್ರಿಯಿಂದ ನನ್ನನ್ನು ಅರೆಸ್ಟ್ ಮಾಡಿದ್ದಾರೆ ಎಂಬ ಬಗ್ಗೆಯೇ ಫೋನ್ ಕರೆ ಬರುತ್ತಿದೆ. ನಾನು ಮನೆಯಲ್ಲಿ ಆರಾಮಾಗಿದ್ದೇನೆ, ಪ್ಲೀಸ್ ಈ ರೀತಿಯಲ್ಲಿ ಬರೆಯಬೇಡಿ’ ಎಂದು ಪೂನಂ ಪಾಂಡೆ ಹೇಳಿದ್ದಾರೆ.

ಬೆತ್ತಲಾಗಿ ನಿಲ್ಲುತ್ತೇನೆ ಎಂದಿದ್ದ ಪೂನಂ ಪಾಂಡೆ!
2011ರಲ್ಲಿ ಟೀಂ ಇಂಡಿಯಾ ಒನ್ ಡೇ ಕ್ರಿಕೆಟ್ ವಿಶ್ವಕಪ್ ಗೆದ್ದರೆ ಬೆತ್ತಲಾಗಿ ನಿಲ್ಲುತ್ತೇನೆ ಎಂದು ಹೇಳಿದ ನಂತರವೇ ಅವರು ಜಗತ್ತಿನಲ್ಲಿಯೇ ಫೇಮಸ್ ಆದರು. ಆ ನಂತರ ಅವರು ಸಾಕಷ್ಟು ಬೋಲ್ಡ್ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಸುದ್ದಿಯಾಗಿದ್ದರು. ಅವರು ಹಲವು ಬಾರಿ ಸಾಕಷ್ಟು ಸಲ ವಿವಾದಾತ್ಮಕ ಹೇಳಿಕೆಗಳಿಂದ ಮಾಧ್ಯಮಗಳ ಗಮನಸೆಳೆದಿದ್ದರು. ಗಯಾ ಹೀರೋ, ಲವ್ ಈಸ್ ಪಾಯಿಸನ್, ನಶಾ, ಮಾಲಿನಿ ಅಂಡ್ ಕೋ, ಆದಿ ಜರ್ನಿ ಆಫ್ ಕರ್ಮ ಮುಂತಾದ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ.

Comments are closed.