ಮನೋರಂಜನೆ

ಬಾಲ್ಯದಲ್ಲಿ ಆಗಬಾರದು ಆಗಿದೆ… ಸಾಯಬೇಕು ಅಂತ ಪೋಸ್ಟ್ ಮಾಡಿದ ನಟಿ ಜಯಶ್ರೀ

Pinterest LinkedIn Tumblr


ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಮತ್ತೊಮ್ಮೆ ಫೇಸ್​​ಬುಕ್​ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಾನು ಪಬ್ಲಿಸಿಟಿಗೋಸ್ಕರ ಇದನ್ನ ಮಾಡುತ್ತಿಲ್ಲ. ನಾನು ಸುದೀಪ್ ಕಡೆಯಿಂದ ಆರ್ಥಿಕ ಸಹಾಯಕ್ಕಾಗಿ ಈ ರೀತಿ ನಾಟಕ ಮಾಡುತ್ತಿದ್ದೇನೆ ಅನ್ನೋದು ಸುಳ್ಳು. ನಾನು ಹಣಕಾಸಿನ ವಿಚಾರದಲ್ಲಿ ಚೆನ್ನಾಗಿದ್ದೇನೆ. ಆದರೆ ಮಾನಸಿಕವಾಗಿ ನೊಂದಿದ್ದೇನೆ.‌ ಡಿಪ್ರೆಶನ್ ನಿಂದ ಬಳಲುತ್ತಿದ್ದೇನೆ. ಡಿಪ್ರೆಶನ್ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಸಾಯಬೇಕು ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ಚಿಕ್ಕವಯಸ್ಸಿನಲ್ಲಿ ಜಯಶ್ರೀಗೆ ಏನೋ ಮೋಸ ಆಗಿದೆಯಂತೆ. ಆಗಬಾರದು ಆಗಿದೆಯಂತೆ. ಹೀಗಾಗಿ ಅದು ಪದೇ ಪದೇ ಕಾಡುತ್ತಿದೆಯಂತೆ. ಡಿಪ್ರೆಶನ್ ಗೂ ಇದೇ ಕಾರಣವಂತೆ. ಫೇಸ್​ಬುಕ್​​ ಲೈವ್ ನಲ್ಲಿ ಜಯಶ್ರೀ ರಾಮಯ್ಯ ಹೀಗಂತ ಹೇಳಿಕೊಂಡಿದ್ದಾರೆ.

ಪದೇ ಪದೇ ನಟಿ ಜಯಶ್ರೀ ಸಾಯಬೇಕು ..ಸಾಯಬೇಕು ಅಂತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ನಿಜಕ್ಕೂ ಖಿನ್ನತೆ ಅನ್ನೋದು ಸಿಂಪಲ್ ಆಗಿ ವಿಮರ್ಶೆ ಮಾಡೋ ಖಾಯಿಲೆ ಅಲ್ಲ. ಬಾಲಿವುಡ್​ನ ಖ್ಯಾತ ನಟ ಸುಶಾಂತ್ ಸಿಂಗ್ ಖಿನ್ನತೆಯಿಂದಲೇ ಪ್ರಾಣ ಬಿಟ್ಟಿರೋದು ಇನ್ನೂ ಮಾಸಿಲ್ಲ. ಹೀಗಾಗಿ ಜಯಶ್ರೀ ಕುಟುಂಬದವರು ಸರಿಯಾದ ಸಲಹೆ ಸೂಚನೆ ಕೊಡುವುದರ ಜೊತೆ ಮಾನಸಿಕ ತಜ್ಞರಿಂದ ಆಪ್ತ ಸಲಹೆ ಕೊಡಿಸಬೇಕಿದೆ.

ಜಯಶ್ರೀ ರಾಮಯ್ಯ ಇನ್ನೂ ಬದುಕಿ ಬಾಳಬೇಕಾದವರು. ಯಾವುದೇ ಸಮಸ್ಯೆ ಇರಲಿ, ಅದಕ್ಕೆಲ್ಲಾ ಪರಿಹಾರಗಳು ಇದ್ದೇ ಇರುತ್ತವೆ. ಎಲ್ಲವನ್ನೂ ಎದುರಿಸಿ ನಿಲ್ಲಬೇಕು‌ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಬರೆಯುವ ಮೂಲಕ ಜಯಶ್ರೀಗೆ ಧೈರ್ಯ ತುಂಬುತ್ತಿದ್ದಾರೆ.

Comments are closed.