ಮನೋರಂಜನೆ

ನನಗೆ ಕೊರೋನಾ ನೆಗೆಟಿವ್ ಬಂದಿಲ್ಲ, ಇನ್ನೂ ಕೊರೋನಾ ಪಾಸಿಟಿವ್ ಇದೆ: ಬಿಗ್ ಬಿ ಅಮಿತಾಬ್ ಬಚ್ಚನ್ ಸ್ಪಷ್ಟನೆ

Pinterest LinkedIn Tumblr

ಮುಂಬೈ: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಹೊಸದಾಗಿ ನಡೆಸಲಾದ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂಬ ಮಾಧ್ಯಮಗಳ ವರದಿಗಳನ್ನು ಅವರು ಖಂಡಿಸಿದ್ದಾರೆ.

ತಾವು ಇನ್ನೂ ಮುಂಬೈ ನಾನಾವತಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಬಿಗ್ ಬಿ ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿರುವ ಅಮಿತಾಬ್ ಬಚ್ಚನ್, ಹೊಸದಾಗಿ ನಡೆಸಲಾದ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಮಾಧ್ಯಮಗಳಲ್ಲಿ ಬಿತ್ತರಿಸಿರುವ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಇಂತಹ ವರದಿಗಳನ್ನು ಪ್ರಸಾರ ಮಾಡುವುದು ಮಾಧ್ಯಮಗಳಿಗೆ ಶೋಭೆ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾವೂ ಇನ್ನೂ ಕೊರೋನಾ ಪಾಸಿಟಿವ್ ನಿಂದಾಗಿ ಬಳಲುತ್ತಿರುವುದಾಗಿ ಅಮಿತಾಬ್ ಬಚ್ಚನ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಹೊಣೆಗೇಡಿ ಸುದ್ದಿಗಳನ್ನು ಬಿತ್ತರಿಸುವುದು ಸರಿಯಲ್ಲ ಎಂದು ಮಾಧ್ಯಮಗಳಿಗೆ ಕಿವಿ ಮಾತು ಹೇಳಿದ್ದಾರೆ. ಆದರೆ ತಮ್ಮ ನೆಚ್ಚಿನ ನಟನ ಆರೋಗ್ಯ ಸುಧಾರಿಸಲಿ ಎಂದು ಅವರ ಅಭಿಮಾನಿಗಳು ಪೂಜೆ, ಹೋಮ ಮತ್ತಿತರ ಕೈಂಕರ್ಯಗಳನ್ನು ಮುಂದುವರಿಸಿದ್ದಾರೆ.

Comments are closed.