ಮನೋರಂಜನೆ

ಮದುವೆ ನಂತರ ಹೊಸ ರೀತಿಯ ಪಾತ್ರವೊಂದರಲ್ಲಿ ನಟಿಸಿದ ಮಯೂರಿ!

Pinterest LinkedIn Tumblr


ಇತ್ತೀಚೆಗೆ ಮದುವೆಯಾಗಿ ಸರ್ಪ್ರೈಸ್ ನೀಡಿದ್ದ ನಟಿ ಮಯೂರಿ ಸದ್ದಿಲ್ಲದೆ ಹೊಸ ಸಿನಿಮಾ ಮಾಡಿ ಅಚ್ಚರಿ ಮೂಡಿಸಿದ್ದಾರೆ. ‘ಆದ್ಯಂತ’ ಎಂಬ ಹೊಸ ಚಿತ್ರದಲ್ಲಿ ಹೊಸ ರೀತಿಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದ್ದು, ಸದ್ಯದಲ್ಲೇ ಟೀಸರ್‌ ರಿಲೀಸ್‌ ಆಗಲಿದೆ.

ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಪುನೀತ್‌ ಶರ್ಮನ್‌ ನಿರ್ದೇಶನ ಮಾಡಿದ್ದಾರೆ. ‘ಚಿತ್ರದ ಕಥೆ ಬಹಳ ಥ್ರಿಲ್ಲಿಂಗ್‌ ಆಗಿದೆ. ನನ್ನ ಪಾತ್ರ ತುಂಬಾನೇ ಚೆನ್ನಾಗಿದೆ. ಮೇಕಿಂಗ್‌ ಎಕ್ಸಲೆಂಟ್‌ ಆಗಿದೆ. ತಾಂತ್ರಿಕತೆ ಕೂಡಾ ಅತ್ಯುತ್ತಮ ಗುಣಮಟ್ಟದಲ್ಲಿದೆ. ನಿರ್ದೇಶಕ ಪುನೀತ್‌ ಶರ್ಮನ್‌ ಅವರು ರಾಜಮೌಳಿ ಸೇರಿದಂತೆ ತೆಲುಗಿನ ಅನೇಕ ಜನಪ್ರಿಯ ನಿರ್ದೇಶಕರ ಬಳಿ ಕೆಲಸ ಮಾಡಿದ್ದಾರೆ. ಟೀಮ್‌ ಟೆಕ್ನಿಕಲಿ ತುಂಬಾ ಸ್ಟ್ರಾಂಗ್‌ ಇದೆ. ಈ ಕಾರಣಕ್ಕೆ ನಾನು ಈ ಸಿನಿಮಾ ಒಪ್ಪಿಕೊಂಡೆ. ನಾನೂ ಕೂಡಾ ಬಹಳ ಕಲಿತೆ’ ಎಂದಿದ್ದಾರೆ ಮಯೂರಿ.

ಒಂದು ಎಸ್ಟೇಟ್‌ನಲ್ಲಿ ನಡೆಯುವ ವಿಚಿತ್ರ ಘಟನೆಗಳ ಸುತ್ತ ಕಥೆ ಹೆಣೆಯಲಾಗಿದೆ. ‘ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವು ಶೇಡ್‌ಗಳಿವೆ. ಇದುವರೆಗೆ ನಾನು ಕಾಣಿಸಿಕೊಳ್ಳದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಬೇರೆ ಬೇರೆ ರೀತಿಯಲ್ಲಿ ನಟಿಸಬೇಕಾಗಿತ್ತು. ಬಗೆಬಗೆ ರೀತಿಯ ಕ್ಯಾರೆಕ್ಟರ್‌ ನಾಯಕಿ ಪಾತ್ರದಲ್ಲಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಎಸ್ಟೇಟ್‌ ಒಂದರಲ್ಲಿ ಶೂಟಿಂಗ್ ಮಾಡಿದ್ದೇವೆ. ಬಹುತೇಕ ರಾತ್ರಿ ಹೊತ್ತು ಚಿತ್ರೀಕರಣ ಮಾಡಿರುವುದು’ ಎಂದಿದ್ದಾರೆ ಮಯೂರಿ. ಚಿತ್ರದಲ್ಲಿ ಲವ್‌ ಸ್ಟೋರಿ ಕೂಡಾ ಇದೆಯಂತೆ.

ಮಹಿಳಾ ಪ್ರಧಾನ ಸಿನಿಮಾ ಹೆಚ್ಚಾಗಿ ಬರುತ್ತಿದ್ದು, ಜನ ಕೂಡ ಅದನ್ನು ಸ್ವೀಕರಿಸಿದ್ದಾರೆ. ‘ಜನ ರಿಯಾಲಿಟಿ ಹೆಚ್ಚು ಇಷ್ಟಪಡುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಜತೆ ಸಬ್ಜೆಕ್ಟ್ ಓರಿಯೆಂಟೆಂಡ್‌ ಚಿತ್ರಗಳು ಹೆಚ್ಚು ಬರಬೇಕಿದೆ. ಇದು ಜನರಿಗೆ ಇಷ್ಟ ಕೂಡಾ ಆಗುತ್ತೆ. ನಾನು ಇಂಥಾ ಕಥೆಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ’ ಎಂದಿದ್ದಾರೆ ಅವರು. ಕಳೆದ 14 ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭವ ಇರುವ ಪುನೀತ್‌ ಶರ್ಮನ್‌ ಅವರು ಈಗಾಗಲೇ 2 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ರಿಲೀಸ್‌ ಆಗಬೇಕಿದೆ. ‘ಆದ್ಯಂತ’ ಚಿತ್ರದಲ್ಲಿ ನವ ನಟ ದಿಲೀಪ್‌ ಹೀರೋ ಆಗಿ ನಟಿಸಿದ್ದಾರೆ.

‘ಚಿತ್ರದಲ್ಲಿಬಹಳ ಸ್ಟ್ರಾಂಗ್‌ ಆಗಿರುವ ನಾಯಕಿಯ ಪಾತ್ರ ಇದೆ. ಪಾತ್ರದಲ್ಲಿ ವೈವಿಧ್ಯತೆ ಇದೆ. ಮಯೂರಿ ಅವರಿಂದಲೇ ಇದು ಸಾಧ್ಯ ಎಂದು ಆಯ್ಕೆ ಮಾಡಿಕೊಂಡೆವು. ಪಾತ್ರದ ವಿವರ ನೀಡಿದರೆ ಕಥೆಯನ್ನು ಬಿಟ್ಟುಕೊಟ್ಟಂತೆ. ಸಿನಿಮಾದಲ್ಲೇ ಇದನ್ನು ನೋಡಬೇಕು. ಯಾರೂ ಎಕ್ಸ್‌ಪ್ಲೋರ್‌ ಮಾಡದ ಜಾಗದಲ್ಲಿ ಶೂಟ್‌ ಮಾಡಿದ್ದೇವೆ. ಒಟ್ಟಿಗೆ 2-3 ಕ್ಯಾಮೆರಾ ಬಳಸಿ ಶೂಟ್‌ ಮಾಡಿದ್ದೇವೆ. ಬಹಳ ಅದ್ಭುತವಾದ ಲೊಕೇಷನ್‌ ಅದು. ಈಗಾಗಲೇ ಮೇಕಿಂಗ್‌ ವಿಡಿಯೋಗೆ ತುಂಬಾ ರೆಸ್ಪಾನ್ಸ್‌ ಸಿಕ್ಕಿದೆ. ಹಿಂದಿ ಡಬ್ಬಿಂಗ್‌ಗೂ ಆಫರ್‌ ಬಂದಿದೆ. ಸದ್ಯದಲ್ಲೇ ಟೀಸರ್‌ ರಿಲೀಸ್‌ ಮಾಡಲಿದ್ದೇವೆ’ ಎಂದಿದ್ದಾರೆ ನಿರ್ದೇಶಕ ಪುನೀತ್‌ ಶರ್ಮನ್‌.

Comments are closed.