ಮನೋರಂಜನೆ

ಬಾಲಿವುಡ್ ನಟ ಸುಶಾಂತ್​ ಗೆ ವಿಚಿತ್ರ ಕಾಯಿಲೆಯಿತ್ತು; ಸೈಕಿಯಾಟ್ರಿಸ್ಟ್!

Pinterest LinkedIn Tumblr


ಸುಶಾಂತ್​ ಸಿಂಗ್​ ಆತ್ಮಹತ್ಯೆ ಬಗ್ಗೆ ಬಾಲಿವುಡ್​ ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 30ಕ್ಕೂ ಅಧಿಕ ಮಂದಿಯನ್ನು ಮುಂಬೈ ಪೊಲೀಸ್​ ಮಾಹಿತಿ ಕಲೆಹಾಕುವಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತಗೆ ಮಾನಸಿಕ ಖಿನ್ನತೆಯಿಂದ ಸುಶಾಂತ್​ ಆತ್ಮಹತ್ಯೆಗೆ ಶರಣಾಗಿದ್ದರು ಎಂಬ ಸುದ್ದಿ ಹರಿದಾಡಿದ್ದೇ ತಡ, ಹಲವು ಮನೋವೈದ್ಯರನ್ನೂ ವಿಚಾರಣೆ ಮಾಡಲಾಗಿತ್ತು. ಇದೀಗ ಆ ಮನೋವೈದ್ಯರು ಸುಶಾಂತ್​ಗಿದ್ದ ಕಾಯಿಲೆ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ಸತತ ಸೋಲು ಮತ್ತು ಒತ್ತಡದಿಂದಾಗಿ ಸುಶಾಂತ್​ ಡಿಪ್ರೆಷನ್​ಗೆ ಒಳಗಾಗಿದ್ದರು. ಆ ಖಿನ್ನತೆ ವಿಪರೀತ ಮಟ್ಟಕ್ಕೆ ಹೋಗಿತ್ತು. ಆ ಬಗ್ಗೆ ಮಾಹಿತಿ ನೀಡಿರುವ 3 ಜನರ ಮನೋವೈದ್ಯರ ತಂಡ, ಸುಶಾಂತ್​ಗೆ ಬೈಪೋಲಾರ್​ ಡಿಸಾರ್ಡರ್​ ಇರುವುದನ್ನು ತಿಳಿಸಿದ್ದಾರೆ. ಈ ಕಾಯಿಲೆಗೆ ತುತ್ತಾದರೆ, ಖಿನ್ನತೆಯ ಪ್ರಮಾಣ ಮತ್ತು ಆರೋಗ್ಯದಲ್ಲಿ ತೀವ್ರ ಸ್ವರೂಪದ ಏರಿಳಿತ ಕಂಡುಬರುತ್ತದೆ. ಇದಕ್ಕೆ ಮ್ಯಾನಿಕ್​ ಡಿಪ್ರೆಷನ್​ ಎಂದೂ ಕರೆಯುತ್ತಾರೆ. ಈ ಕಾಯಿಲೆ ಬಗ್ಗೆ ಸುಶಾಂತ್​ಗೆ ಗೊತ್ತಿದ್ದರೂ, ಕೇವಲ ಎರಡರಿಂದ ಮೂರು ಸಲ ಮಾತ್ರ ಚಿಕಿತ್ಸೆಗೆ ಬಂದಿದ್ದರು ಎಂದು ವೈದ್ಯರು ಸುಶಾಂತ್​ ಹೆಲ್ತ್ ಕಂಡಿಷನ್​ ಬಗ್ಗೆ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ ಸುಶಾಂತ್​ ಶೂಟಿಂಗ್​ನಲ್ಲಿ ಭಾಗವಹಿಸುತ್ತಿದ್ದರಿಂದ ಮೆಡಿಸಿನ್​ ತೆಗೆದುಕೊಳ್ಳುವುದನ್ನೂ ಬಿಟ್ಟಿದ್ದರಂತೆ. ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳದೆ ಇರುತ್ತಿದ್ದರು. ಇತ್ತೀಚಿನ ಮುರ್ನಾಲ್ಕು ತಿಂಗಳಿಂದ ಅವರು ಮೆಡಿಸಿನ್​ ತೆಗೆದುಕೊಳ್ಳುವುದನ್ನೇ ಬಿಟ್ಟಿದ್ದರು ಎಂದೂ ಮನೋವೈದ್ಯರು ಹೇಳಿಕೆ ನೀಡಿದ್ದಾರೆ. ಲಾಕ್​ಡೌನ್​ ಶುರುವಾದ ಬಳಿಕ ಫೋನ್​ ಮೂಲಕವೇ ಖಿನ್ನತೆ ಬಗ್ಗೆ ಸುಶಾಂತ್​ ವೈದ್ಯರಿಂದ ಸಲಹೆ ಪಡೆದುಕೊಳ್ಳುತ್ತಿದ್ದದ್ದು ಗೊತ್ತಾಗಿದೆ.

Comments are closed.