ಬ್ರೀತ್: ಇನ್ ಟು ದಿ ಶಾಡೋ. ಅಭಿಷೇಕ್ ಬಚ್ಚನ್ ನಟನೆಯ ಈ ವೆಬ್ ಸೀರೀಸ್ ಸದ್ಯ ಭಾರೀ ಸದ್ದು ಮಾಡುತ್ತಿದೆ. ಜುಲೈ 10 ರಂದು ಅಮೆಜಾನ್ ಪ್ರೈಂ ನಲ್ಲಿ ಈ ಸೀರೀಸ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಇದೇ ಮೊದಲ ಬಾರಿ ಅಭಿಷೇಕ್ ಸಣ್ಣ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ಗೆ ಜೊತೆಯಾಗಿ ಈ ಸೀರೀಸ್ನಲ್ಲಿ ಬಹುಭಾಷಾ ನಟಿ, ಕನ್ನಡತಿ ನಿತ್ಯಾ ಮೆನನ್ ಕೂಡ ನಟಿಸಿದ್ದು ಇವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸೆವೆನ್ ಒ ಕ್ಲಾಕ್’ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ವೃತ್ತಿ ಬದುಕನ್ನು ಆರಂಭಿಸಿದ ನಿತ್ಯಾ ಮೆನನ್, ಜೋಷ್, ಮೈನಾ, ಕೋಟಿಗೊಬ್ಬ 3 ಸೇರಿ ತಮಿಳು, ಹಿಂದಿ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯ ನಿತ್ಯಾ ಮೆನನ್ ಅವರ ಲಿಪ್ ಲಾಕ್ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದೆ.
ಲೆಸ್ಬಿಯನ್ ಪಾತ್ರ ನಿರ್ವಹಿಸುವುದು ನಿತ್ಯಾ ಮೆನೆನ್ಗೆ ಹೊಸದೇನಲ್ಲ. ತೆಲುಗು ಚಿತ್ರ ‘ವಿಸ್ಮಯ’ ದಲ್ಲಿ ಸಹ ನಿತ್ಯಾ ಇನ್ನೊಬ್ಬ ಮಹಿಳೆಯತ್ತ ಆಕರ್ಷಿತರಾಗುವ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಬ್ರೀತ್: ಇನ್ ಟು ದಿ ಶಾಡೋ ವೆಬ್ ಸರಣಿಯಲ್ಲಿ ನಿತ್ಯಾ ಮನೆನ್ ಇನ್ನೊಬ್ಬ ಹುಡುಗಿಯ ಜೊತೆ ಲಿಪ್ಲಾಕ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೀತ್: ಇನ್ ಟು ದಿ ಶಾಡೋ ವೆಬ್ ಸರಣಿಯಲ್ಲಿ ಶ್ರುತಿ ಬಾಪ್ನ ಹಾಗೂ ನಿತ್ಯಾ ಮೆನನ್ ಕಿಸ್ ಮಾಡಿದ್ದು, ಸದ್ಯ ಈ ವಿಡಿಯೋ ಸದ್ದು ಮಾಡುತ್ತಿದೆ. ಪ್ರತಿಭಾವಂತ ನಟಿ ನಿತ್ಯಾ ಮೆನೆನ್ ತಮ್ಮ ಅತ್ಯುತ್ತಮ ನಟನೆಗೆ ಹೆಸರುವಾಸಿ. ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿರ್ವಹಿಸುವ ನಿತ್ಯಾ ಅವರ ವೃತ್ತಿಜೀವನವನ್ನು ಗಮನಿಸಿದರೆ, ಅವರು ಅನೇಕ ಪ್ರಾಯೋಗಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನಟನಾ ಕೌಶಲ್ಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.
ನಿತ್ಯಾ ಇದೀಗ ಸಿನಿಮಾವನ್ನು ನಿರ್ದೇಶಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎಂಬ ವರದಿ ಕೆಲವು ಮೂಲಗಳಿಂದ ತಿಳಿದುಬಂದಿದೆ. ಲಾಕ್ ಡೌನ್ ಸಮಯ ನಿತ್ಯಾ ಅವರಿಗೆ ಸಿನಿಮಾ ಸ್ಕ್ರಿಪ್ಟ್ ಕೆಲಸದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಿದೆ ಎನ್ನಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಹ ನಿತ್ಯಾ ಅವರು ಸ್ಕ್ರಿಪ್ಟ್ ಬರೆಯಲು ಪ್ರಾರಂಭಿಸಿದ್ದೇನೆ ಎಂದು ಹೇಳಿದ್ದರು.
Comments are closed.