
ಬಾಲಿವುಡ್ನ ಎವರ್ಗ್ರೀನ್ ಬ್ಯೂಟಿ ನಟಿ ರೇಖಾ ಕೊರೋನಾ ಪರೀಕ್ಷೆಗೆ ನಿರಾಕರಿಸಿದ ಘಟನೆ ನಡೆದಿದೆ. ನಟಿ ನೆಲೆಸಿರುವ ಸೀ ಸ್ಪ್ರಿಂಗ್ಸ್ ಬಂಗಲೆಯ ಭದ್ರತಾ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇದೇ ಹಿನ್ನೆಲೆಯಲ್ಲಿ ನಟಿಯನ್ನು ಪರೀಕ್ಷೆಗೆ ಒಳಪಡಿಸಲು ಮುಂದದಾಗ ಕೋವಿಡ್ ಟೆಸ್ಟ್ಗೆ ನಟಿ ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.
ನಟಿ ರೇಖಾ ನೆಲೆಸಿರುವ ಮುಂಬೈನ ಬಾಂದ್ರಾ ಏರಿಯಾದ ನಾಲ್ಕು ಸೆಕ್ಯೂರಿಟಿ ಗಾರ್ಡ್ ಗಳಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಈ ನಾಲ್ವರು ಕೂಡ ಸಂಪರ್ಕದಲ್ಲಿದ್ದರು. ಇನ್ನು ಭದ್ರತಾ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದ್ದರಿಂದ ಅವರು ಕೆಲಸ ಮಾಡುತ್ತಿದ್ದ ಮನೆಯವರನ್ನು ಪರೀಕ್ಷೆಗೆ ಒಳಪಡಿಸಲು ಆರೋಗ್ಯಾಧಿಕಾರಿಗಳು ಸೂಚಿಸಿದ್ದರು.
ಅದರಂತೆ ನಟಿ ರೇಖಾ, ಮ್ಯಾನೇಜರ್ ಫರ್ಜನಾ ಸೇರಿದಂತೆ ಮನೆಯ ಕೆಲಸದವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಿಳಿಸಲಾಗಿತ್ತು. ಆದರೆ ಆರೋಗ್ಯಧಿಕಾರಿಗಳು ತೆರಳಿದಾಗ ಮನೆಯ ಬಾಗಿಲು ತೆರೆಯಲು ನಿರಾಕರಿಸಿದ್ದಾರೆ. ಅಲ್ಲದೆ ಮ್ಯಾನೇಜರ್ ಮುಂಬೈ ಮಹಾನಗರ ಪಾಲಿಕೆ ಹಿರಿಯ ಆರೋಗ್ಯಧಿಕಾರಿಗೆ ಫೋನ್ ನೀಡಿ, ಮೇಡಂ ಅವರ ಜೊತೆ ಮಾತನಾಡಿ ಎಂದಿದ್ದಾರೆ.
ರೇಖಾ ಮೇಡಂ ಕಳೆದ ಕೆಲ ದಿನಗಳಿಂದ ಮನೆಯಿಂದ ಹೊರಗೆ ಹೋಗಿಲ್ಲ. ಯಾರೊಂದಿಗೂ ಸಂಪರ್ಕಕ್ಕೂ ಕೂಡ ಹೊಂದಿರಲಿಲ್ಲ. ಅವರು ಫಿಟ್ ಅ್ಯಂಡ್ ಫೈನ್ ಆಗಿದ್ದಾರೆ. ಹೀಗಾಗಿ ಸುಮ್ಮನೆ ಕೋವಿಡ್ ಪರೀಕ್ಷೆ ಮಾಡುವುದೇಕೆ ಎಂದು ಹಿಂದೇಟು ಹಾಕಿದ್ದಾರೆ ಎಂದು ಮ್ಯಾನೇಜರ್ ಫರ್ಜನಾ ತಿಳಿಸಿದ್ದಾರೆ.
ಸದ್ಯ ನಟಿ ರೇಖಾ ಅವರಿರುವ ಮನೆಯನ್ನು ಸ್ಯಾನಿಟೈಸ್ ಮಾಡಿರುವ ಮುಂಬೈ ಮಹಾನಗರ ಪಾಲಿಕೆ ಆರೋಗ್ಯಧಿಕಾರಿಗಳು, ಆ ಪ್ರದೇಶವನ್ನು ಸೀಲ್ಡೌನ್ ಮಾಡಿದ್ದಾರೆ.
ಸಿಲ್ಸಿಲಾ, ಉಮ್ರಾವೊ ಜಾನ್ ಸೇರಿದಂತೆ ಸೂಪರ್ ಡೂಪರ್ ಹಿಟ್ ಚಿತ್ರಗಳಲ್ಲಿ ನಾಯಕಿಯಾಗಿ ಮೆರೆದಿದ್ದ ರೇಖಾ ಅವರು ಸದ್ಯ ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಸೂಪರ್ ನಾನಿ, ಕ್ರಿಶ್-3, ಶಮಿತಾಭ್ ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ಎವರ್ಗ್ರೀನ್ ನಟಿ ಬಣ್ಣ ಹಚ್ಚಿದ್ದಾರೆ.
Comments are closed.