ಮನೋರಂಜನೆ

ಸ್ಯಾಂಡಲ್​ವುಡ್​ ನಟನ ಅಮ್ಮನಿಗೆ ಕೊರೋನಾ​!

Pinterest LinkedIn Tumblr


ಬಾಲಿವುಡ್​ನಲ್ಲಿ ಖ್ಯಾತ ನಟ ಅಮಿತಾಭ್​ ಬಚ್ಚನ್​ ಹಾಗೂ ಮಗ ಅಭಿಷೇಕ್​ ಬಚ್ಚನ್​ ಅವರಿಗೆ ಕೋರೋನಾ ಸೋಂಕು ಇರುವುದು ದೃಢಪಟ್ಟಿದೆ. ಅದರ ಬೆನ್ನಲ್ಲೇ ಪತ್ನಿ ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯಾ ರೈ ಅವರಿಗೆ ಕೋವಿಡ್​ ಸೋಂಕು ತಗುಲಿರುವುದು ಖಚಿತವಾಗಿದೆ. ಈ ಸುದ್ದಿ ಹೊರಬಂದಂತೆ ಬಾಲಿವುಡ್​ನಲ್ಲಿ ಆತಂಕ ಮನೆಮಾಡಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲೂ ಕೊರೋನಾ ಪ್ರಕರಣಗಳು ಒಂದೊಂದಾಗಿ ಹೊರ ಬರುತ್ತಿದೆ. ಚಿತ್ರನಟ ನೆನಪಿರಲಿ ಪ್ರೇಮ್​ ಅವರ ತಾಯಿಗೆ ಕೊರೋನಾ ಪಾಸಿಟಿವ್​ ಬಂದಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ಪ್ರೇಮ್​ ಅವರ ತಾಯಿಗೆ 65 ವರ್ಷ ವಯಸ್ಸಾಗಿದ್ದು, ಕಾಮಾಕ್ಷಿ ಪಾಳ್ಯದಲ್ಲಿ ನೆಲೆಸಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಕೊರೋನಾ ಟೆಸ್ಟ್​ ಮಾಡಿಸಿದಾಗ ಕೋವಿಡ್​-19 ಸೋಂಕು ಇರುವುದು ದೃಢಪಟ್ಟಿದೆ.

ಇತ್ತೀಚೆಗೆ ಕನ್ನಡದ ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೋನಾ ತಗಲಿತ್ತು. ತೆಲುಗು ಸಿರೀಯಲ್​ನಲ್ಲಿ ತೊಡಗಿಸಿಕೊಂಡಿರುವ ಕನ್ನಡತಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿದ್ದರಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡ ಇತರರು ಆತಂಕಕ್ಕೀಡಾಗಿದ್ದರು. ನಟಿಯೊಂದಿಗೆ ಸಂಪರ್ಕದಲ್ಲಿದ್ದ ಉಳಿದವರು ಕೂಡ ಕೊರೋನಾ ಟೆಸ್ಟ್ ಮಾಡಿಸಿದ್ದರು. ಈ ವೇಳೆ ನವ್ಯಾ ಜೊತೆ ಅಭಿನಯಿಸಿದ್ದ ನಟ ರವಿಕೃಷ್ಣ ಅವರಿಗೂ ಕೋವಿಡ್-19 ವೈರಸ್ ತಗುಲಿರುವುದು ದೃಢಪಟ್ಟಿದೆ.

ಶ್ರೀನಗರ ಕಿಟ್ಟಿ ಸಹೋದರ ಜೂನ್ 29 ರಂದು ಕಾರ್ಡಿಯಾಕ್ ಅರೆಸ್ಟ್ ನಿಂದ ಮೃತ ಪಟ್ಟಿದ್ದರು.
ನಿಯಮದ ಪ್ರಕಾರ ಅವರನ್ನ ಕೋವಿಡ್ 19 ಟೆಸ್ಟ್​​​​ಗೆ ಒಳಪಡಿಸಲಾಗಿತ್ತು. ಅದರಲ್ಲಿ ರಿಪೋರ್ಟ್ ಪಾಸಿಟಿವ್ ಅಂತ ಬಂದಿತ್ತು. ಹೀಗಾಗಿ ಕೋವಿಡ್ ನಿಯಮದಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ.

ಸಂಸದೆ, ನಟಿ ಸುಮಲತಾ ಅಂಬರೀಶ್​ ಅವರಿಗೂ ಕೊರೋನಾ ಪಾಸಿಟಿವ್​ ಬಂದಿತ್ತು. ಈ ಬಗ್ಗೆ ಅವರು ಟ್ವೀಟ್​ ಮಾಡುವ ಮೂಲಕ ಹೇಳಿಕೊಂಡಿದ್ದರು. ಜೊತೆಗೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಕೊರೋನಾ ವಿರುದ್ಧ ಹೋರಾಡುತ್ತೇನೆ ಎಂದಿದ್ದಾರೆ.

ಈವರೆಗೆ ದೇಶದಾದ್ಯಂತ ಒಟ್ಟಾರೆ 8,78,254 ಕೊರೋನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲಿ 5,53471 ಕೋವಿಡ್​ ಸೋಂಕಿನಿಂದ ಗುಣಮುಖರಾಗಿದ್ದಾರೆ. 23, 174 ಜನರು ಸಾವನ್ನಪ್ಪಿದ್ದಾರೆ.

Comments are closed.