ಮನೋರಂಜನೆ

ಶಾಲೆಗೆ ಹೋಗಿ ಸಮಯ ಮತ್ತು ಹಣ ಹಾಳು ಮಾಡಿದೆ: ‘ಕಿರಾತಕ’ ನಟಿ ಓವಿಯಾ!

Pinterest LinkedIn Tumblr


‘ಬಿಗ್ ಬಾಸ್ ತಮಿಳು’ ಸೀಸನ್ 1ರಲ್ಲಿ ಭಾಗವಹಿಸಿ ಸಾಕಷ್ಟು ಮಂದಿ ಅಭಿಮಾನಿಗಳನ್ನು ಸಂಪಾದನೆ ಮಾಡಿದ ನಟಿ ಓವಿಯಾ ಟ್ವಿಟರ್‌ನಲ್ಲಿ ಇತ್ತೀಚೆಗಷ್ಟೇ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಶಾಲೆ, ಮದುವೆ ಬಗ್ಗೆ ಓವಿಯಾ ಮಾತನಾಡಿದ್ದಾರೆ. ಅಭಿಮಾನಿಗಳು ತುಂಬ ಆಸಕ್ತಿಕರವಾದ ಪ್ರಶ್ನೆಗಳನ್ನು ಓವಿಯಾಗೆ ಕೇಳಿದ್ದರು.

ಅಭಿಮಾನಿಗಳ ಪ್ರಶ್ನೆ ಹಾಗೂ ಓವಿಯಾ ಉತ್ತರ ಹೀಗಿದೆ ನೋಡಿ

1. ಲಾಕ್‌ಡೌನ್‌ನಲ್ಲಿ ಹೊಸದೇನನ್ನು ಮಾಡಿದ್ರಿ? ಕಲಿತ್ರಿ?
ಆತ್ಮಾವಲೋಕನ ಮಾಡಿಕೊಂಡೆ

2. ಬಿಗ್ ಬಾಸ್‌ನಲ್ಲಿ ನಿಮ್ಮ ಫೇವರಿಟ್ ಸ್ಪರ್ಧಿ ಯಾರಾಗಿದ್ದರು?
ನನಗೆ ನಾನೇ ಫೇವರಿಟ್

3. ನೆಪೋಟಿಸಂ ಬಗ್ಗೆ ನಿಮ್ಮ ಅಭಿಪ್ರಾಯ
ರಾಜಕೀಯ ಎಲ್ಲ ಕಡೆಗಿದೆ.

4. ಶಾಲೆಯಲ್ಲಿ ಕಲಿತಿರುವ ವಿಷಯವನ್ನು ನೀವು ನಿಮ್ಮ ಜೀವನದಲ್ಲಿ ಸದಾ ಬಳಕೆ ಮಾಡುತ್ತೀರಿ?
ಶಾಲೆಗೆ ಹೋಗಿ ನನ್ನ ಸಮಯ ಹಾಗೂ ಹಣ ಹಾಳು ಮಾಡಿಕೊಂಡೆ ಎಂದೆನಿಸುತ್ತದೆ

5. ಮದುವೆ ಬಗ್ಗೆ ಹೇಳಿ
ಮದುವೆ ನನ್ನ ಲಿಸ್ಟ್‌ನಲ್ಲಿ ಇಲ್ಲ

ನಟಿ ಓವಿಯಾ ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತ ಓವಿಯಾ ಇಂದು ಹೀರೋಯಿನ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇರಳದ ಈ ಚೆಲುವೆ 2007ರಿಂದ ಇಲ್ಲಿಯವರೆಗೆ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ. ಓವಿಯಾ ಗಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. 2014ರ ನಂತರ ಓವಿಯಾಗೆ ಸಣ್ಣ ಸಣ್ಣ ಸಿನಿಮಾಗಳಲ್ಲಿ ಗ್ಲಾಮರಸ್ ಪಾತ್ರ ಮಾಡುವ ಅವಕಾಶ ಸಿಕ್ಕಿತೇ ವಿನಃ ಇವರಿಗೆ ದೊಡ್ಡ ಬಜೆಟ್‌ ಸಿನಿಮಾಗಳಲ್ಲಿ ನಟಿಸಲು ಅಷ್ಟಾಗಿ ಸಾಧ್ಯವಾಗಲಿಲ್ಲ. 2019ರಲ್ಲಿ ಇವರ ನಟನೆಯ ‘ಕಲಾವಾಣಿ 2’ ಸಿನಿಮಾ ರಿಲೀಸ್ ಆಗಿತ್ತು.
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ ಸಿನಿಮಾದಲ್ಲಿ ಇವರು ನಾಯಕಿಯಾಗಿ ನಟಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಓವಿಯಾ ಜೀವನಕ್ಕೆ ಸಂಬಂಧಪಟ್ಟಂತೆ ಅನೇಕ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಹೀಗಾಗಿ ಅವರಿಗೆ ಖಿನ್ನತೆ ಕಾಡುತ್ತಿರಬಹುದು ಎಂದು ಕೂಡ ಹೇಳಲಾಗಿತ್ತು. ಬಿಗ್ ಬಾಸ್ ನಂತರದಲ್ಲಿ ಓವಿಯಾಗೆ ಸಾಕಷ್ಟು ಅವಕಾಶಗಳು ಸಿಗುತ್ತಿದೆ. ಆದರೆ ಶಾಲೆ ವಿಚಾರವಾಗಿ ಓವಿಯಾ ಯಾಕೆ ಈ ರೀತಿ ಹೇಳಿದರು ಎಂಬುದು ಮಾತ್ರ ಗೊಂದಲವಾಗಿ ಉಳಿದಿದೆ.

Comments are closed.