ಮನೋರಂಜನೆ

ತಾಯಿಯಾದ ಖುಷಿಯಲ್ಲಿ ‘ಜೋಡಿ ಹಕ್ಕಿ’ ಧಾರಾವಾಹಿ ನಟಿ!

Pinterest LinkedIn Tumblr


ಆರೂರು ಜಗದೀಶ್ ನಿರ್ದೇಶನದ ‘ಜೋಡಿ ಹಕ್ಕಿ’ ಧಾರಾವಾಹಿ ಮುಕ್ತಾಯವಾಗಿ ಹಲವು ತಿಂಗಳುಗಳು ಕಳೆದಿವೆ. ಈ ಸೀರಿಯಲ್ ಸಾಕಷ್ಟು ಜನರ ಮೆಚ್ಚುಗೆ ಪಡೆದಿತ್ತು. ಈ ಧಾರಾವಾಹಿ ನಟಿಯೋರ್ವರು ರಿಯಲ್ ಲೈಫ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.

‘ಜೋಡಿಹಕ್ಕಿ’ ಧಾರಾವಾಹಿ ತಾರಾಗಣ
ತಾಂಡವ ರಾಮ್ ಮತ್ತು ಚೈತ್ರಾ ರಾವ್ ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ‘ಜೋಡಿ ಹಕ್ಕಿ’ ಧಾರಾವಾಹಿಯಲ್ಲಿ ಜಾನಕಿ ಗೆಳತಿಯಾಗಿ ನಟಿಸಿದ್ದ ಮಧುಶ್ರೀ ಅಯ್ಯರ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ‘ಜೋಡಿ ಹಕ್ಕಿ’ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ಮಧುಶ್ರೀ ನಟಿಸಿದ್ದರು. ಈ ಮೂಲಕ ಮಧುಶ್ರೀ ಫೇಮಸ್ ಆಗಿದ್ದರು.

2018ರಲ್ಲಿ ಮದುವೆಯಾಗಿದ್ದ ಮಧುಶ್ರೀ ಅಯ್ಯರ್
2018ರಲ್ಲಿ ಮಧುಶ್ರೀ ಅವರು ಯಶ್ ಅಯ್ಯರ್ ಜೊತೆಗೆ ಸಪ್ತಪದಿ ತುಳಿದಿದ್ದರು. ಇವರ ಪತಿ ಯಶ್ ಟಿಕ್ ಟಾಕ್ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಮಧು ಮತ್ತು ಯಶ್ ದಂಪತಿ ಹಲವು ಟಿಕ್ ಟಾಕ್ ವಿಡಿಯೋ ಮಾಡಿದ್ದಾರೆ. ತಾಯಿಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಮಧುಶ್ರೀ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಸೀಮಂತದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಜುಲೈ 3ರಂದು ಮಧುಶ್ರೀ ಹೆಣ್ಣುಮಗುವಿಗೆ ಜನನ ನೀಡಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಧುಶ್ರೀಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಮಧುಶ್ರೀ ನಟನೆಗೆ ಬಂದಿದ್ದು ಹೇಗೆ?
ಬಿಕಾಂ ಪದವಿ ಪಡೆದಿದ್ದ ಮಧುಶ್ರೀ ಶಿವಮೊಗ್ಗದಿಂದ ಬೆಂಗಳೂರಿಗೆ ಬ್ಯಾಂಕ್ ಎಕ್ಸಾಂ ಬರೆಯಲು ಬಂದಿದ್ದರು. ಮಧುಶ್ರೀಗೆ ಸಂಬಂಧಿಕರೊಬ್ಬರು ‘ಜೋಡಿಹಕ್ಕಿ’ ಧಾರಾವಾಹಿಯೊಂದಕ್ಕೆ ಆಡಿಷನ್ ನೀಡಲು ಹೇಳಿದರು. ಹೀಗೆ ಆಡಿಶನ್‌ ನೀಡುತ್ತಿದ್ದಾಗ, ಒಮ್ಮೆ ಆಡಿಶನ್‌ನಲ್ಲಿಯೂ ಅವರು ಆಯ್ಕೆಯಾದರು. ಇದೇ ಆಮೇಲೆ ಅವರಿಗೆ ಮುಂದಿನ ದಿನಗಳಲ್ಲಿ ‘ಜೋಡಿ ಹಕ್ಕಿ’, ‘ರಾಧಾ ರಮಣ’, ‘ಅವಳು’ ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡಲು ಅನುಕೂಲವಾಯಿತು. ‘ರಾಧಾ ರಮಣ’ದ ನಟಿ ಶ್ವೇತಾ ಪ್ರಸಾದ್ ಅವರು ಮಧುಶ್ರೀಗೆ ದೂರದ ಸಂಬಂಧಿಕರಂತೆ.

Comments are closed.