ಮನೋರಂಜನೆ

’ಬೆಲ್​ ಬಾಟಂ’ ಸಿನಿಮಾದ ಕಲಾ ನಿರ್ದೇಶಕ ಲೋಕೇಶ್​ ಆತ್ಮಹತ್ಯೆ!

Pinterest LinkedIn Tumblr


ಮಹಾಮಾರಿ ಕೊರೋನಾ ಸಾಕಷ್ಟು ಜನರ ಬದುಕನ್ನು ಕತ್ತಲೆಗೆ ದೂಡಿದೆ. ಅನೇಕರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಅದರಂತೆ ಸ್ಯಾಂಡಲ್​​ವುಡ್​​ನ ಪ್ರತಿಭಾನ್ವಿತ ಕಲಾ ನಿರ್ದೇಶಕ ಲೋಕೇಶ್​ ಆತ್ಮಹತ್ಯೆ ಮಾಡುವ ಮೂಲಕ ಬದುಕು ಮುಗಿಸಿದ್ದಾರೆ.

ಕೊರೋನಾ ಸಮಯದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿ ಲೋಕೇಶ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕ ಸಿನಿಮಾದಲ್ಲಿ ಲೋಕೇಶ್​ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವನೇ ಶ್ರೀಮನ್ನಾರಾಯಣ, ಬೆಲ್ ​ಬಾಟಂ ಸಿನಿಮಾದಲ್ಲಿ ಭಿನ್ನವಾಗಿ ಕಲಾ ನಿರ್ದೇಶನ ಮಾಡಿದ್ದರು.

ಲೋಕೇಶ್​​​​ ನಾಗಮಂಡಲದವರಾಗಿದ್ದು, ಅಣ್ಣನ ಜೊತೆಗೆ ವಾಸವಿದ್ದರು. ಆದರೆ ಕೊರೋನಾ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಾದ ಹಿನ್ನಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೆಲ್​​ ಬಾಟಂ ಸಿನಿಮಾ ನಿರ್ಮಾಪಕ ಸಂತೋಷ್​ ಅವರು ಮಾತನಾಡಿದ್ದು, ಲೋಕೇಶ್​​ ತುಂಬಾ ಒಳ್ಳೆಯ ಹುಡುಗ. ಅನೇಕ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ರಕ್ಷಿತ್​ ಮತ್ತು ರಿಷಭ್​ ಶೆಟ್ಟಿ ಅವರ ಬಹತೇಕ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದರು. ಆದರೆ ಕೊರೋನಾ ಸಮಯದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಸ್ವಾಭಿಮಾನಿಯಾದ ಆತ ಯಾರ ಬಳಿಯೂ ಸಹಾಯ ಕೇಳಿಲ್ಲ. ಆತನಿಗೆ ಕಷ್ಟವಿದೆ ಎಂದು ತಿಳಿದಿದ್ದರೆ ನಾನೇ ಆತನಿಗೆ ಸಹಾಯ ಮಾಡುತ್ತಿದೆ. ನಮ್ಮ ಕುಟುಂಬದವರಿಗೂ ಲೋಕೇಶ್​ ಎಂದರೆ ತುಂಬಾ ಪ್ರೀತಿ. ಆದರೆ ಈ ರೀತಿ ನಿರ್ಣಯವನ್ನು ಲೋಕೇಶ್​​ ತೆಗೆದುಕೊಳ್ಳಬಾರದಿತ್ತು ಎಂದು ನಿರ್ಮಾಪಕ ಸಂತೋಷ್​ ಹೇಳಿದ್ದಾರೆ.

Comments are closed.