ಮನೋರಂಜನೆ

ತಮಿಳು ನಟ ವಿಜಯ್​ಗಾಗಿ ಹುಲಾಹೂಪ್​ ಹಿಡಿದು ನಟಿ ಸಂಯುಕ್ತಾ ಹೆಗಡೆಯಿಂದ ನೃತ್ಯ

Pinterest LinkedIn Tumblr


ಸಂಯುಕ್ತಾ ಹೆಗಡೆ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಡ್ಯಾನ್ಸಿಂಗ್​ ವಿಡಿಯೋಗಳಿಂದಲೇ ಹೆಚ್ಚು ಖ್ಯಾತರಾದವರು. ಸಾಮಾಜಿಕ ಜಾಲತಾಣದಲ್ಲಿ ಆಗಾಗ ವಿಭಿನ್ನ ಪ್ರಕಾರದ ನೃತ್ಯಗಳ ವಿಡಿಯೋಗಳಿಂದಲೇ ಸದ್ದು ಮಾಡುತ್ತಿರುತ್ತಾರೆ.

‘ಕಿರಿಕ್​ ಪಾರ್ಟಿ’ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ಸಂಯುಕ್ತಾ ಹೆಗ್ಡೆ, ಹಾಟ್ ಹಾಗೂ ಬೋಲ್ಡ್​ ಫೋಟೋಶೂಟ್​ಗಳಿಂದ ಸುದ್ದಿಯಲ್ಲಿದ್ದರು. ಇನ್ನು ತಮ್ಮ ಬಾಯ್​ಫ್ರೆಂಡ್​ ಜೊತೆಗೆ ಪ್ರವಾಸದಲ್ಲಿ ತೆಗೆದ ಕಿಸ್ಸಿಂಗ್​ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈಗ ಈ ನಟಿಯ ಲೆಟೆಸ್ಟ್​ ಡ್ಯಾನ್ಸಿಂಗ್​ ವಿಡಿಯೋ ಒಂದು ಓಡಾಡುತ್ತಿದೆ.

ಸಂಯುಕ್ತಾ ಹೆಗಡೆ ಹುಲಾಹೂಪ್​ ಹಿಡಿದು ಸಖತ್​ ಸ್ಪೆಪ್​ ಹಾಕಿದ್ದಾರೆ. ಹಲವಾರು ನೃತ್ಯ ಪ್ರಕಾರಗಳನ್ನು ಕಲಿತಿರುವ ನಟಿಗೆ ಹುಲಾಹೂಪ್​ ಕಲಿಯುವುದು ಬಹಳ ಕಷ್ಟವೆನಿಸಿಲ್ಲ ಎಂದೆನಿಸುತ್ತದೆ. ಕಳೆದ ಒಂದು ತಿಂಗಳಿನಿಂದ ಹುಲಾಹೂಪ್​ ಹಿಡಿದು ಅಭ್ಯಾಸ ಮಾಡುತ್ತಿರುವ ಸಂಯುಕ್ತಾ, ಈಗ ತಮ್ಮ ಡ್ಯಾನ್ಸಿಂಗ್​ ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಮಿಳು ನಟ ವಿಜಯ್ ಹುಟ್ಟುಹಬ್ಬದಂದು ಈ ವಿಡಿಯೋ ಮೂಲಕ ವಿಶ್​ ಮಾಡಿದ್ದಾರೆ.

ಲಾಕ್​ಡೌನ್​ನಿಂದಾಗಿ ಬೆಂಗಳೂರಿನಲ್ಲಿರುವ ಅಪ್ಪ-ಅಮ್ಮನ ಬಳಿ ಬಂದ ಸಂಯುಕ್ತಾ ಹೆಗಡೆ, ಮನೆಯಲ್ಲಿ ವ್ಯಾಯಾಮ, ಡ್ಯಾನ್ಸ್​​, ಯೋಗ ಹಾಗೂ ಫೋಟೋಶೂಟ್​ ಅಂತ ಸಖತ್ ಟೈಮ್​ಪಾಸ್​ ಮಾಡಿದ್ದಾರೆ.

ಸಂಯುಕ್ತಾ ಬೆರಳೆಣಿಕೆ ಸಿನಿಮಾಗಳಲ್ಲಿ ನಟಿಸಿದ್ದರೂ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಾ ಬ್ಯುಸಿಯಾಗಿರುತ್ತಾರೆ. ತಮ್ಮ ಪ್ರವಾಸದ ನಡುವೆಯೇ ಸಿನಿಮಾಗಳಲ್ಲಿ ಅಭಿನಯಿಸುವ ಆಫರ್​ ಬಂದರೆ ಸಾಕು ಅದನ್ನೂ ಒಪ್ಪಿಕೊಳ್ಳುತ್ತಾರೆ.

Comments are closed.