ಮನೋರಂಜನೆ

ಜನಪ್ರಿಯ ಟಿಕ್ ಟಾಕ್ ಸ್ಟಾರ್ 16 ವರ್ಷದ ಸಿಯಾ ಕಕ್ಕರ್ ಆತ್ಮಹತ್ಯೆ! ಕಾರಣ ನಿಗೂಢ…

Pinterest LinkedIn Tumblr

ಮುಂಬೈ: 16 ವರ್ಷದ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಟಿಕ್ ಟಾಕ್ ವಿಡಿಯೋಗಳ ಮೂಲಕ ಅಪಾರ ಪ್ರಮಾಣದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದ ಸಿಯಾ ಕಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಮೂರು ತಿಂಗಳುಗಳಿಂದ ಬಣ್ಣದ ಲೋಕ ಸಾಲು ಸಾಲು ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದೆ. ಬಾಲಿವುಡ್​ನಿಂದ ಇರ್ಫಾನ್ ಖಾನ್, ರಿಷಿ ಕಪೂರ್, ವಾಜಿದ್ ಖಾನ್, ಸುಶಾಂತ್ ಸಿಂಗ್ ಮರೆಯಾದರೆ, ಸ್ಯಾಂಡಲ್​ವುಡ್​ನಿಂದ ಮೆಬಿನಾ ಮೈಕಲ್, ಬುಲೆಟ್ ಪ್ರಕಾಶ್, ಚಿರಂಜೀವಿ ಸರ್ಜಾ ಸೇರಿದಂತೆ ಹಲವು ಕಲಾವಿದರನ್ನು ಕಳೆದುಕೊಂಡಿದೆ.

ಅದರಲ್ಲೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿ ಮರೆಯಾಗುವ ಮುನ್ನವೇ ಯುವ ಪ್ರತಿಭೆಯೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಟಿಕ್​ಟಾಕ್ ಮೂಲಕ ಪ್ರಸಿದ್ಧಿ ಪಡೆದಿದ್ದ 16 ವರ್ಷದ ಸಿಯಾ ಕಕ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಯಾ ನವದೆಹಲಿಯ ಪ್ರೀತ್ ವಿಹಾರ್ ನಿವಾಸಿ. ಟಿಕ್‌ಟಾಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಮತ್ತು ಯೂಟ್ಯೂಬ್‌ನಂತಹ ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿದ್ದರು. ಅವರ ಡ್ಯಾನ್ಸಿಂಗ್ ವೀಡಿಯೊಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರು.

ಬುಧವಾರ ಸಂಜೆಯವರೆಗೂ ಆಕೆ ಚೆನ್ನಾಗಿದ್ದಳು. ಸಿಯಾ ಮ್ಯಾನೇಜರ್ ಅರ್ಜುನ್ ಸರಿನ್ ಜೊತೆ ಹಾಡಿನ ಬಗ್ಗೆ ಸಿಯಾ ಚರ್ಚೆ ನಡೆಸಿದ್ದರು. ಆದರೆ ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ತಿಳಿದು ಬಂದಿಲ್ಲ ಎಂದು ಬಾಲಿವುಡ್​ನ ವೈರಲ್ ಬಯಾನಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

Comments are closed.