ಮನೋರಂಜನೆ

ರಜನಿಕಾಂತ್‌ ಮನೆಗೆ ಹುಸಿ ಬಾಂಬ್‌ ಕರೆ ಮಾಡಿದವನನ್ನು ಕಂಡು ಶಾಕ್ ಆದ ಪೊಲೀಸರು ! ಅಷ್ಟಕ್ಕೂ ಕರೆ ಮಾಡಿದ್ದು ಯಾರು ಗೊತ್ತೇ…?

Pinterest LinkedIn Tumblr

ರಜನಿಕಾಂತ್‌ ಅವರ ಮನೆಗೆ ಬಾಂಬ್‌ ಇಟ್ಟಿರುವುದಾಗಿ ಅನಾಮಿಕನೊಬ್ಬ ಚೆನ್ನೈ ಪೊಲೀಸರಿಗೆ ಕರೆ ಮಾಡಿದ ಘಟನೆ ಜೂ.18ರಂದು ನಡೆದಿತ್ತು. ಈ ಸುದ್ದಿ ಹರಡುತ್ತಿದ್ದಂತೆಯೇ ‘ಸೂಪರ್‌ ಸ್ಟಾರ್‌’ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಕೂಡಲೇ ಕಾರ್ಯಾಚರಣೆ ಕೈಗೊಂಡ ಪೊಲೀಸರು ರಜನಿಕಾಂತ್‌ ನಿವಾಸಕ್ಕೆ ತೆರಳಿ ಬಾಂಬ್‌ ಶೋಧ ಆರಂಭಿಸಿದ್ದರು.

ಕೊರೊನಾ ವೈರಸ್‌ ಹರಡುವ ಭೀತಿ ಇರುವುದರಿಂದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದವರು ಮನೆಯೊಳಗೆ ಪ್ರವೇಶಿಸುವುದು ಬೇಡ ಎಂದು ರಜನಿಕಾಂತ್‌ ಕುಟುಂಬ ಆರಂಭದಲ್ಲಿ ಹೇಳಿತು. ಹಾಗಿದ್ದರೂ ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಶೋಧ ಕಾರ್ಯ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್‌ ಕರೆ ಎಂದು ತಂಡ ಘೋಷಿಸಿತು. ಹಾಗಾದರೆ ಹುಸಿ ಬೆದರಿಕೆ ಹಾಕಿದ ಆ ವ್ಯಕ್ತಿ ಯಾರು ಎಂಬುದು ಎಲ್ಲರ ತಲೆಯಲ್ಲಿ ಕೊರೆಯುತ್ತಿದ್ದ ಪ್ರಶ್ನೆ ಆಗಿತ್ತು.

ತಮಿಳುನಾಡು ಮಾತ್ರವಲ್ಲದೆ, ವಿಶ್ವಾದ್ಯಂತ ರಜನಿಕಾಂತ್‌ಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಈ ಹುಸಿ ಬಾಂಬ್‌ ಕರೆ ಪ್ರಕರಣದಿಂದಾಗಿ ಅವರೆಲ್ಲರಿಗೂ ಒಂದು ಕ್ಷಣ ಆತಂಕ ಆಗಿದ್ದು ನಿಜ. ಹಾಗಾಗಿ ಆ ಕರೆ ಮಾಡಿದ ಅನಾಮಿಕನ ಮೇಲೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ಆತ ಯಾರು ಎಂಬುದನ್ನು ಆದಷ್ಟು ಬೇಗ ಪತ್ತೆ ಹಚ್ಚುವಂತೆ ಸೋಶಿಯಲ್‌ ಮೀಡಿಯಾ ಮೂಲಕ ಪೊಲೀಸರಿಗೆ ಒತ್ತಾಯ ಹೇರಲಾಯಿತು.

ಆ ಅನಾಮಿಕ ವ್ಯಕ್ತಿಯ ಫೋನ್‌ ಕರೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದು 8ನೇ ತರಗತಿಯ ಬಾಲಕ! ಆತ ತಮಿಳುನಾಡಿನ ಕಡಲೂರು ಜಿಲ್ಲೆಯವನು. ಅಷ್ಟಕ್ಕೂ ಅವನ ಉದ್ದೇಶ ಏನಾಗಿತ್ತು? ಅಚ್ಚರಿ ಎಂದರೆ learning disability ಮಾನಸಿಕ ಸಮಸ್ಯೆಯಿಂದ ಆತ ಬಳಲುತ್ತಿದ್ದಾನೆ ಎಂಬುದು ಗೊತ್ತಾಗಿದೆ. ಆ ವಿದ್ಯಾರ್ಥಿಯ ಮೆಡಿಕಲ್‌ ರೆಕಾರ್ಡ್‌ಗಳನ್ನು ಪರಿಶೀಲಿಸಿದ ಬಳಿಕ ಅವನನ್ನು ಪೊಲೀಸರು ಬಿಟ್ಟು ಕಳಿಸಿದ್ದಾರೆ. ರಜನಿಕಾಂತ್‌ ಅವರಿಗೆ ವಿಡಿಯೋ ಮೂಲಕ ಆತನ ತಂದೆ ಕ್ಷಮೆ ಕೇಳಿದ್ದಾರೆ ಎಂಬ ಮಾಹಿತಿ ಹೇಳಿಬರುತ್ತಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ನಟ ರಜನಿಕಾಂತ್‌ ಅವರು ‘ಅಣ್ಣಾಥೆ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರ ಜೊತೆ ಖುಷ್ಬೂ, ಮೀನಾ, ನಯನತಾರಾ, ಕೀರ್ತಿ ಸುರೇಶ್‌ ತೆರೆಹಂಚಿಕೊಂಡಿದ್ದಾರೆ. ಗ್ರಾಮೀಣ ಸೊಗಡಿನ ಕಥೆ ಈ ಸಿನಿಮಾದಲ್ಲಿ ಇದೆ ಎನ್ನಲಾಗಿದ್ದು, ಕೊರೊನಾ ವೈರಸ್‌ ಹಾವಳಿ ಕಡಿಮೆ ಆದ ಬಳಿಕ ರಿಲೀಸ್‌ ಆಗಲಿದೆ.

Comments are closed.