ಮನೋರಂಜನೆ

ಬಾಲಿವುಡ್ ನಟ ಸುಶಾಂತ್ ಜೊತೆಗಿನ ಚಿತ್ರಗಳನ್ನು ಡಿಲೀಟ್​ ಮಾಡಿದ ನಟಿ..!

Pinterest LinkedIn Tumblr


ಸುಶಾಂತ್​ ಹಾಗೂ ರಿಯಾ ಚಕ್ರವರ್ತಿ ಇಬ್ಬರು ಒಳ್ಳೆಯ ಸ್ನೇಹಿತರು. ಸುಶಾಂತ್ ನೇಣಿಗೆ ಶರಣಾಗುವ ಮುನ್ನ ರಿಯಾಗೆ ಕರೆ ಮಾಡಿದ್ದರು. ಆದರೆ ಅವರು ಅಂದು ಕರೆ ರಿಶಸೀವ್​ ಮಾಡಿರಲಿಲ್ಲ. ಇದೇ ವಿಷಯವಾಗಿ ಇಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೀಗಿರುವಾಗಲೇ ರಿಯಾ ಹಾಗೂ ಮಹೇಶ್ ಭಟ್​ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ರಿಯಾ ಹಾಗೂ ಸುಶಾಂತ್ ಬಹಳ ಸಮಯದಿಂದ ಡೇಟ್​ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಅಲ್ಲದೆ ಇವರಿಬ್ಬರು ಜೊತೆಗೆ ಸುತ್ತಾಡಿದ ಹಲವಾರು ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು ಅನ್ನೋ ಸುದ್ದಿ ಸಹ ಬಿ-ಟೌನ್​ನಲ್ಲಿ ಓಡಾಡುತ್ತಿತ್ತು. ಆದರೆ ಸುಶಾಂತ್ ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿದ್ದ ನಟನ ಫೋಟೋಗಳನ್ನು ಡಿಲೀಟ್​ ಮಾಡಿದ್ದಾರೆ.

ರಿಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡ ಸುಶಾಂತ್​ ಅವರ ಫೋಟೋಗಳನ್ನು ಡಿಲೀಟ್​ ಮಾಡಿದ್ದು ಏಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನವೇ ರಿಯಾ ಇನ್​ಸ್ಟಾಗ್ರಾಂನಲ್ಲಿ ತಮ್ಮ ಒಂದು ವಿಡಿಯೋವನ್ನು ಹಂಚಿಕೊಂಡಿದ್ದು, ಶೂಟಿಂಗ್​ ದಿನಗಳನ್ನು ಮಿಸ್​ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದಾರೆ.

ಅಲ್ಲದೆ ರಿಯಾ ‘ಜಲೇಬಿ’ ಸಿನಿಮಾ ಚಿತ್ರೀಕರಣದ ವೇಳೆ ಮಹೇಶ್​ ಭಟ್​ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನೂ ಡಿಲೀಟ್ ಮಾಡಿದ್ದಾರೆ. ಅಲ್ಲದೆ ರಿಯಾ ಹಾಗೂ ಸುಶಾಂತ್​ ನಡುವಿನ ಸಂಬಂಧ ಮಹೇಶ್​ ಭಟ್​ಗೆ ಇಷ್ಟವಿರಲಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ತನ್ನ ಬುದ್ಧ ಎಂದು ರಿಯಾ ಮಹೇಶ್​ ಭಟ್​ ಜೊತೆ ತೆಗೆಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ತಂದೆ ಮಗಳ ಸಂಬಂಧ ತೋರುವ ಚಿತ್ರ ಎಂದು ಹೇಳುತ್ತಿದ್ದ ರಿಯಾ, ಅದನ್ನು ಈಗ ಏಕೆ ಡಿಲೀಟ್​ ಮಾಡಿದ್ದಾರೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಸುಶಾಂತ್​ ಆತ್ಮಹತ್ಯೆಗೂ ಮಹೇಶ್ ಭಟ್​ ಹಾಗೂ ರಿಯಾ ಚಕ್ರವರ್ತಿಗೂ ಸಂಬಂಧವಿದೆ. ಈ ಕುರಿತಾಗಿ ತನಿಖೆ ನಡೆಯಬೇಕು ಎಂದೂ ಆಗ್ರಹಿಸುತ್ತಿದ್ದಾರೆ.

Comments are closed.