ಮನೋರಂಜನೆ

ಸಲ್ಮಾನ್ ಖಾನ್ ಹಾಗು ಅವರ ಸಹೋದರರಿಂದ ತನಗೆ ನಿರಂತರ ಬೆದರಿಕೆ: ನಿರ್ದೇಶಕ ಅಭಿನವ್ ಕಶ್ಯಪ್ ಆರೋಪ

Pinterest LinkedIn Tumblr

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ 2010ರಲ್ಲಿ ತೆರೆ ಕಂಡ ‘ದಬಾಂಗ್’ ನಂತರ ಸಲ್ಮಾನ್ ಖಾನ್ ಕುಟುಂಬ ತನ್ನ ವೃತ್ತಿ ಜೀವನವನ್ನು ಹಾಳುಮಾಡಿದೆ ಎಂದು ನಿರ್ದೇಶಕ ಅಭಿನವ್ ಕಶ್ಯಪ್ ಫೇಸ್ ಬುಕ್ ಪೋಸ್ಟ್ ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ನಿರಂತರ ಬೆದರಿಕೆಯಿಂದ ಮಾನಸಿಕವಾಗಿ ತೀವ್ರ ಯಾತನೆ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ.

ಹತ್ತು ವರ್ಷ ಹಿಂದೆ ದಬಾಂಗ್ ಚಿತ್ರ ನಿರ್ಮಾಣದಿಂದ ಹೊರಬರಲು ಅರ್ಬಾಜ್ ಖಾನ್, ಸೊಹೈಲ್ ಖಾನ್ ಹಾಗೂ ಅವರ ಕುಟುಂಬ ಕಾರಣ, ನಿರಂತರವಾಗಿ ಬೆದರಿಕೆಯೊಡ್ಡುವ ಮೂಲಕ ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿನವ್ ಕಶ್ಯಪ್ ಹೇಳಿದ್ದಾರೆ.

ಶ್ರೀ ಅಷ್ಟ ವಿನಾಯಕ ಫಿಲಂಸ್ ನೊಂದಿಗೆ ಎರಡನೇ ಚಿತ್ರ ಮಾಡಲು ಅದರ ಮುಖ್ಯಸ್ಥ ರಾಜ್ ಮೆಹ್ತಾ ಸಹಿ ಕೂಡಾ ಹಾಕಿದ್ದೆ.ಆದರೆ, ನನ್ನೊಂದಿಗೆ ಚಿತ್ರ ಮಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅರ್ಬಾಜ್ ಖಾನ್ ರಾಜ್ ಮೆಹ್ತಾ ಅವರಿಗೆ ಬೆದರಿಕೆ ಹಾಕಿದ್ದರಿಂದ ಪಡೆಯಲಾಗಿದ್ದ ಹಣವನ್ನು ಹಿಂತಿರುಗಿಸಬೇಕಾಯಿತು. ವಯಾಕಾಮ್ ಪಿಕ್ಚರ್ ಸಂಸ್ಥೆಯವರು ಕೂಡಾ ಇದೇ ರೀತಿ ಮಾಡಿದರು ಎಂದು ಅವರು ಬರೆದುಕೊಂಡಿದ್ದಾರೆ.

ತನ್ನೊಂದಿಗೆ ಚಿತ್ರ ಮಾಡದಂತೆ ವಯಾಕಾಮ್ ಸಿಇಒ ವಿಕ್ರಮ್ ಮಲ್ಹೋತ್ರಾ ಅವರಿಗೆ ಸೂಹೈಲ್ ಖಾನ್ ಬೆದರಿಸಿದ್ದರಿಂದ ಸಹಿಯಾದ ಬಳಿಕ ಪಡೆದುಕೊಂಡಿದ್ದ 7 ಕೋಟಿಯನ್ನು ಬಡ್ಡಿ ಸಮೇತ ಹಿಂತಿರುಗಿಸಬೇಕಾಯಿತು. ತದನಂತರ ಬೆಶರಾಮ್ ಚಿತ್ರದ ಮೂಲಕ ರಿಲಯನ್ಸ್ ಎಂಟರ್ ಟೈನ್ ಮೆಂಟ್ ನವರು ತಮ್ಮನ್ನು ರಕ್ಷಿಸಿದರು. ಸಲ್ಮಾನ್ ಖಾನ್ ಕುಟುಂಬದಿಂದ ತಮ್ಮೆಲ್ಲಾ ಪ್ರಾಜೆಕ್ಟ್ ಗಳು ಹಾಳಾಗುತ್ತಿರುವುದಲ್ಲದೆ, ನನ್ನ ಕುಟುಂಬದ ಮಹಿಳೆಯರಿಗೆ ಜೀವ ಹಾಗೂ ಅತ್ಯಾಚಾರದ ಬೆದರಿಕೆಯನ್ನು ಪದೇ ಪದೇ ನೀಡಲಾಗುತ್ತಿದೆ. 2017ರಲ್ಲಿ ಪೊಲೀಸ್ ಠಾಣೆಗೆ ಹೋದರು ದೂರು ದಾಖಲಿಸಿಕೊಳ್ಳಲಿಲ್ಲ. ಆದರೆ, ತಿಳುವಳಿಕೆ ನೀಡುವ ದೂರು ದಾಖಲಿಸಿ ಕಳುಹಿಸಿದ್ದರು ಎಂದು ಅವರು ಹೇಳಿದ್ದಾರೆ.

ಬಾಲಿವುಡ್ ನಲ್ಲಿ ಘಟನೆ ಹಾಗೂ ಕೆಲಸದ ಕೊರತೆಯಿಂದ ಮುಗ್ದರು ಸಾವಿಗೀಡಾಗಬಾರದು. #metoo #BoycottSalmanKhan ನಲ್ಲಿ ಈ ವಿಚಾರವನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವಂತೆ ಅವರು ತೊಂದರೆಯಿಂದ ಬಳಲುತ್ತಿರುವ ನಟರು, ಕಲಾವಿದರು ಹಂಚಿಕೊಳ್ಳುವ ವಿಶ್ವಾಸದಲ್ಲಿ ಇರುವುದಾಗಿ ಅಭಿನವ್ ಕಶ್ಯಪ್ ಹೇಳಿದ್ದಾರೆ.

Comments are closed.