ಮನೋರಂಜನೆ

ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ….?

Pinterest LinkedIn Tumblr

ಮುಂಬಯಿ: ಬಾಲಿವುಡ್​​ನ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನ ತಮ್ಮ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಕೂಡ ಕಾಡಿದ್ದವು. ಆದರೆ, ಇವೆಲ್ಲದಕ್ಕೂ ಅವರ ಮರಣೋತ್ತರ ಪರೀಕ್ಷೆ ವರದಿ ಉತ್ತರ ನೀಡಿದೆ.

34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿನ್ನೆ ಬೆಳಗ್ಗೆ ಅವರ ಮನೆಯ ಕೆಲಸದವರು ಬಂದು ನೋಡಿದಾಗ ಈ ವಿಷಯ ಗೊತ್ತಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಕಳೆದ 6 ತಿಂಗಳಿನಿಂದ ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿತ್ತು. ಇನ್ನು ಇದು ಯಾರಾದರೂ ಮಾಡಿದ ಹತ್ಯೆ ಇರಬಹುದೇ ಎನ್ನುವ ಅನುಮಾನ ಕೂಡ ಕಾಡಿತ್ತು.

ಈಗ ಮರಣೋತ್ತರ ಪರೀಕ್ಷೆ ವರದಿ ಬಂದಿದೆ. ನೇಣು ಬಿಗಿದುಕೊಂಡ ಕಾರಣಕ್ಕೇ ಸುಶಾಂತ್ ಮರಣ ಹೊಂದಿದ್ದಾರೆ. ಅವರ ದೇಹದ ಮೇಲೆ ಯಾವುದೇ ಗಾಯದ ಕಲೆಗಳು ಇರಲಿಲ್ಲ. ಹೀಗಾಗಿ ಇದು ಆತ್ಮಹತ್ಯೆ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್​ನಲ್ಲಿ ಹೇಳಲಾಗಿದೆ.

ಸುಶಾಂತ್ ಸಿಂಗ್ ತಂದೆ ಹಾಗೂ ಕುಟುಂಬಸ್ಥರು ಪಾಟ್ನಾದಿಂದ ಇಂದು ಮುಂಬೈಗೆ ಆಗಮಿಸಿದ ನಂತರ ಅಂತ್ಯ ಸಂಸ್ಕಾರ ನಡೆಯಲಿದೆ, ಸುಶಾಂತ್ ಅವರ ಕೆಲವು ಅಂಗಾಂಗಗಳನ್ನು ಜೆಜೆ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪರೀಕ್ಷೆಗಾಗಿ ಕಾಯಲಾಗುತ್ತಿದೆ.

Comments are closed.