ಮನೋರಂಜನೆ

ಕೆಲವೇ ಕೆಲವು ತಿಂಗಳುಗಳ ಅಂತರದಲ್ಲಿ ಭಾರತೀಯ ಚಿತ್ರರಂಗ ಕಳೆದುಕೊಂಡ ನಟ-ನಟಿಯರೆಷ್ಟು ಗೊತ್ತೇ…?

Pinterest LinkedIn Tumblr

ಮಹಾಮಾರಿ ಕೊರೋನಾ ವೈರಸ್​ನಿಂದಾಗಿ ದೇಶವೇ ನಡುಗಿ ಹೋಗಿದೆ. ಅನೇಕ ಜನರನ್ನು ಕೋವಿಡ್​ ಮಹಾಮಾರಿ ಬಲಿ ತೆಗೆದುಕೊಂಡಿದೆ. ಇಂತಹ ಸಂದರ್ಭ ಒಂದೆಡೇಯಾದರೆ ಇತ್ತ ಭಾರತೀಯ ಚಿತ್ರರಂಗದಲ್ಲಿ ಘಟಾನುಘಟಿ ನಟರು ಸಾವನಪ್ಪುತ್ತಿದ್ದಾರೆ.

ಬಾಲಿವುಡ್​ ಪ್ರತಿಭಾನ್ವಿತ ನಟ ಸುಶಾಂತ್​ ಸಿಂಗ್​ ರಜಪೂತ್​ ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಮಾಡುವ ಮೂಲಕ ಸಾವನಪ್ಪಿದ್ದಾರೆ. ಸಾಕಷ್ಟು ಸಿನಿಮಾದಲ್ಲಿ ಸುಶಾಂತ್​ ಸಿಂಗ್ ನಟಿಸಿದ್ದರು. ಬಾಲಿವುಡ್​ನಲ್ಲಿ ಧೋನಿ ಕುರಿತಾಗಿ ಮೂಡಿಬಂದಿರುವ ಧೋನಿ; ದಿ ಅನ್​ ಟೋಲ್ಡ್​ ಸ್ಟೋರಿ ಸಿನಿಮಾದಲ್ಲಿ ನಟಿಸಿ ಅನೇಕ ಮೆಚ್ಚುಗೆಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಭಾರಿ ನೋವುಂಟು ಮಾಡಿದೆ.

ಸುಶಾಂತ್​ ಸಿಂಗ್​ ಸಾವಿಗೆ ಶರಣಾಗುವ ಮೂಲಕ ಕಳೆದೆರಡು ತಿಂಗಳಿನಲ್ಲಿ ಬಾಲಿವುಡ್​ ಖ್ಯಾತ ನಟ ಇರ್ಫಾನ್​​ ಖಾನ್​, ರಿಷಿ ಕಪೂರ್​​, ವಾಜಿದ್​ ಖಾನ್​ ಸಾವನ್ನಪ್ಪಿದ್ದಾರೆ. ‘ರಜನಿಗಂಧ’ ಸೇರಿದಂತೆ ಹಲವಾರು ಕ್ಲಾಸಿಕ್​ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಬಸು ಚಟರ್ಜಿ ಜೂನ್​​ 4 ರಂದು ನಿಧನರಾಗಿದರು. ಖ್ಯಾತ ಗೀತೆ ರಚನೆಗಾರ ಯೊಗೇಶ್​ ಕೌರ್​​​ ಮೇ 29ರಂದು ಸಾವನ್ನಪ್ಪಿದ್ದರು. ಹೀಗೆ ಕಳೆದೆರಡು ತಿಂಗಳಿನಿಂದ ಕಲಾವಿದರ ಸಾವು ಬಾಲಿವುಡ್​ ಚಿತ್ರರಂಗಕ್ಕೆ ದೊಡ್ಡ ಶಾಕ್​​ ನೀಡಿದೆ.

“ಕ್ರೈಂ ಪೆಟ್ರೋಲ್” ನಟಿ ಪ್ರೇಕ್ಷ ಮೆಹ್ತಾ ಇಂದೋರಿನ ತನ್ನ ಮನೆಯಲ್ಲಿ ಮೇ 25 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ತಮಿಳ್ ನಟ ಡಾ. ಸೇತುರಾಮನ್ ಹೃದಯಾಘಾತದಿಂದ ಇತ್ತೀಚೆಗೆ ಸಾವನ್ನಪ್ಪಿದ್ದಾರೆ. ಬಾಲಿವುಡ್ ಚೆಲುವೆ, 1950-60ರ ದಶಕದಲ್ಲಿ ಸ್ಟಾರ್ ನಟಿಯಾಗಿ ಖ್ಯಾತಿ ಪಡೆದಿದ್ದ ನಿಮ್ಮಿ(88ವರ್ಷ) ದೀರ್ಘಕಾಲದ ಅನಾರೋಗ್ಯದಿಂದ ಇತ್ತೀಚಿಗೆ ವಿಧಿವಶರಾಗಿದ್ದಾರೆ.

ಕಲಾವಿದರನ್ನು ಕಳೆದುಕೊಂಡ ದುಃಖದಲ್ಲಿ ಸ್ಯಾಂಡಲ್​ವುಡ್​!

2020ನೇ ವರ್ಷ ಎಲ್ಲರಿಗೂ ಕಂಟಕವನ್ನು ತಂದೊಡ್ಡಿದೆ. ಕೊರೋನಾದಿಂದ ಈಗಾಗಲೇ ಅನೇಕ ಸಾವು-ನೋವು ಸಂಭವಿಸಿದೆ. ಮತ್ತೊಂದೆಡೆ ಸ್ಯಾಂಡಲ್​ವುಡ್​ ಕಲಾವಿದರ ಸಾವು ಕೂಡ ಕನ್ನಡ ಚಿತ್ರರಂಗಕ್ಕೆ ಭಾರೀ ಬೇಸರವನ್ನು ತರಿಸಿದೆ.

ಜೂನ್​ 7 ರಂದು ‘ವಾಯುಪುತ್ರ’ ಸಿನಿಮಾ ಖ್ಯಾತಿಯ ನಟ ಚಿರಂಜೀವಿ ಸರ್ಜಾ ನಿಧನರಾದರು. ಇವರ ದಿಢೀರ್​ ಸಾವಿಗೆ ಸ್ಯಾಂಡಲ್​ವುಡ್​​ ತುಂಬಲಾರದ ನಷ್ಟವಾಗಿದೆ. 35ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ನಟನ ಬಗ್ಗೆ ಅನೇಕರು ಬೇಸರ ಹೊರಹಾಕಿದ್ದರು.

ಅದಕ್ಕೂ ಮೊದಲು ಹಾಸ್ಯ ನಟ ಬುಲೆಟ್​ ಪ್ರಕಾಶ್​ ವಿಧಿವಶರಾಗಿದ್ದರು. ಮೇ 13ರಂದು ಮತ್ತೊಬ್ಬ ಹಾಸ್ಯ ನಟ ಮೈಕಲ್​ ಮಧು ನಿಧನರಾದರು. ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್’ ರಿಯಾಲಿಟಿ ಶೋ ವಿಜೇತೆ ಮೆಬಿನಾ ಮೈಕಲ್​​ ಮೇ 26 ರಂದು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದರು.

Comments are closed.