ಮನೋರಂಜನೆ

ನಟ ಚಿರಂಜೀವಿ ಸರ್ಜಾ ಇನ್ನು ಸ್ವಲ್ಪ ಸಮಯ ಕಳೆದಿದ್ದರೇ ತಂದೆಯಾಗುತ್ತಿದ್ದರು ! ಪತ್ನಿ ಮೇಘನಾ ಈಗ 4 ತಿಂಗಳ ಗರ್ಭಿಣಿ….!

Pinterest LinkedIn Tumblr

ಬೆಂಗಳೂರು: ಅಕಾಲಿಕ ಮರಣಕ್ಕೆ ತುತ್ತಾದ ನಟ ಚಿರಂಜೀವಿ ಸರ್ಜಾ ಇನ್ನು ಸ್ವಲ್ಪ ಸಮಯ ಕಳೆದಿದ್ದರೇ ತಂದೆಯಾಗುತ್ತಿದ್ದರು. ನಟಿ ಹಾಗೂ ಪತ್ನಿ ಮೇಘನಾ ರಾಜ್ ಈಗ 4 ತಿಂಗಳ ಗರ್ಭಿಣಿ.

10 ವರ್ಷಗಳ ಕಾಲ ಸ್ನೇಹಿತರಾಗಿದ್ದ ಚಿರು- ಮೇಘನಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಬೆಸ್ಟ್​ ಫ್ರೆಂಡ್ಸ್​ ಆಗಿದ್ದ ಅವರಿಬ್ಬರೂ ಒಟ್ಟಿಗೇ ಜೀವನ ನಡೆಸಬೇಕೆಂದು ನಿರ್ಧರಿಸಿ 2 ವರ್ಷಗಳ ಹಿಂದೆ ಸಪ್ತಪದಿ ತುಳಿದಿದ್ದರು.

ಇನ್ನು 5 ತಿಂಗಳಲ್ಲಿ ಮೇಘನಾ ರಾಜ್ ಕಂದಮ್ಮನಿಗೆ ಜನ್ಮ ನೀಡುವವರಿದ್ದರು ಎಂಬ ಸಂಗತಿ ಬಯಲಾಗಿದೆ. ಈ ಸಿಹಿಸುದ್ದಿಯನ್ನು ಎಲ್ಲರೆದುರು ಹೇಳುವ ಮೊದಲೇ ಚಿರಂಜೀವಿ ಸರ್ಜಾ ಕಣ್ಮುಚ್ಚಿದ್ದಾರೆ. ಅಪ್ಪನಾಗುವ ಸಂಭ್ರಮವನ್ನು ಅನುಭವಿಸುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ.

Comments are closed.