ಮನೋರಂಜನೆ

ಜನಪ್ರಿಯ ಬಾಲಿವುಡ್​ ನಟ ಕಿರಣ್​​ ಕುಮಾರ್​ಗೆ ಕೊರೋನಾ ಪಾಸಿಟಿವ್​​!

Pinterest LinkedIn Tumblr


ಬಾಲಿವುಡ್​ ಹಿರಿಯ ನಟ ಕಿರಣ್​ ಕುಮಾರ್​ (74) ಅವರಿಗೆ ಕೊರೋನಾ ಸೋಂಕು ತಗುಲಿದ್ದು, ಈ ವಿಚಾರವನ್ನು ಸ್ವತಃ ಅವರೇ ಬಹಿರಂಗ ಪಡಿಸಿದ್ದಾರೆ.

ನಟ ಕಿರಣ್​ ಕುಮಾರ್​ ಮೇ 14 ರಂದು ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಯೊಂದಕ್ಕೆ ಹೋಗಿದ್ದರು. ಆ ಆಸ್ಪತ್ರೆಯಲ್ಲಿ ಕೋವಿಡ್​-19 ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಹಾಗಾಗಿ ಕೊರೋನಾ ಟೆಸ್ಟ್​​​​ ಮಾಡಿಸಿದಾಗ ಪಾಸಿಟಿವ್​ ಎಂದು ಬಂದಿದೆ. ಆದರೆ ಪರೀಕ್ಷಾ ವರದಿ ಬಂದ 10 ದಿನಗಳಾದರು ನನಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿಲ್ಲ. ಜ್ವರ, ಶೀತ, ಕೆಮ್ಮು ಇದಾವುದು ಕಾಣಿಸಿಕೊಂಡಿಲ್ಲ. ನಾನು ಮನೆಯಲ್ಲಿ ಇದ್ದೇನೆ ಮತ್ತು ಆರೋಗ್ಯವಾಗಿ ಇದ್ದೇನೆ ಎಂದು ಹೇಳಿದ್ದಾರೆ.

ನನ್ನ ಕುಟುಂಬಸ್ಥರು 2ನೇ ಮಹಡಿಯಲ್ಲಿ ಆರೋಗ್ಯವಾಗಿದ್ದಾರೆ. ನಾನು ಮನೆಯ ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದೇನೆ. ಸದ್ಯ ಸೆಲ್ಫ್​​ ಕ್ವಾರಂಟೈನ್​ನಲ್ಲಿದ್ದೇನೆ ಎಂದು ಹೇಳಿದ್ದಾರೆ.

ಮೇ 26ರಂದು ಅಥವಾ 27ಕ್ಕೆ ಆಸ್ಪತ್ರೆಗೆ ಹೋಗಲಿದ್ದೇನೆ. 2ನೇ ಬಾರಿಗೆ ಕೊರೋನಾ ಟೆಸ್ಟ್​ ಮಾಡಿಸಿಕೊಳ್ಳಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

Comments are closed.