ಕನ್ನಡ ಸಿನಿ ರಂಗದ ಹಾಸ್ಯ ನಟ ಮೈಕಲ್ ಮಧು ನಿಧನರಾಗಿದ್ದಾರೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಮೈಕಲ್ ಮಧು ವಿಧಿವಶರಾಗಿದ್ದು, ಮೈಕಲ್ ಮಧು ಮನೆಯಲ್ಲಿ ಕಾಲು ಜಾರಿ ಬಿದ್ದು ಅಸ್ವಸ್ಥರಾಗಿದ್ದ ಹಿನ್ನೆಲೆ ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು.
ಕನ್ನಡದ ಸೂಪರ್ ಹಿಟ್ ಸಿನಿಮಾ ಸೂರ್ಯವಂಶ, ಓಂ, ಶ್ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಮೈಕಲ್ ಮಧು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಶಿವರಾಜ್ ಕುಮಾರ್ ನಟನೆಯ ಓಂ ಚಿತ್ರದ ಮೂಲಕ ಮೈಕಲ್ ಮಧು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಕನ್ನಡ ಚಿತ್ರರಂಗ ಮತ್ತೋರ್ವ ಹಾಸ್ಯ ನಟನನ್ನು ಕಳೆದುಕೊಂಡಿದೆ.
Comments are closed.