ಮನೋರಂಜನೆ

ಪುತ್ರನೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಿರುವ ನಟಿ ಸಿಮ್ರನ್​..!

Pinterest LinkedIn Tumblr


ಒಂದು ಕಾಲದಲ್ಲಿ ಟಾಲಿವುಡ್​ನಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮಿಂಚಿದ್ದ ನಟಿ ಸಿಮ್ರನ್​ ವಿವಾಹವಾದ ನಂತರ ನಿಧಾನವಾಗಿ ಸಿನಿಮಾದಿಂದ ದೂರವಾಗಿದ್ದರು. ನಂತರ ಆಗಾಗ ತಮಿಳು ಹಾಗೂ ತೆಲುಗಿನಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸಿಮ್ರನ್​ ಈಗ ಟಿಕ್​ಟಾಕ್​ನಲ್ಲೂ ಧೂಳೆಬ್ಬಿಸುತ್ತಿದ್ದಾರೆ.

ಬಳುಕುವ ಬಳ್ಳಿ ಎಂದೇ ಖ್ಯಾತರಾಗಿದ್ದ ಸಿಮ್ರನ್​ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ತೆಲುಗು-ತಮಿಳಿನಲ್ಲಿ ಹಿಟ್​ ಆದಂತೆ ಬಾಲಿವುಡ್​ನಲ್ಲಿ ಅವಕಾಶಗಳು ಸಿಗಲಿಲ್ಲ. ಪೆಟ್ಟಾದಲ್ಲಿ ಸಿಮ್ರನ್ ರಜಿನಿಕಾಂತ್​ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಇಂತಹ ನಟಿ ಈಗ ಅಭಿಮಾನಿಗಳನ್ನು ರಂಜಿಸುವ ಕೆಲಸವನ್ನು ಮತ್ತೆ ಆರಂಭಿಸಿದ್ದಾರೆ. ಅದೂ ಕೂಡ ಟಿಕ್​ಟಾಕ್​ನಲ್ಲಿ. ಹೌದು, ತಮ್ಮ ಮಗನೊಂದಿಗೆ ಸೇರಿ ಟಿಕ್​ಟಾಕ್​ ವಿಡಿಯೋಗಳನ್ನು ಮಾಡುತ್ತಿದ್ದಾರೆ.

ಸದ್ಯ ಸಿಮ್ರನ್​ ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ. ತಮಿಳಿನಲ್ಲಿ ರಾಕೆಟರಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಇಸ್ರೊ ವಿಜ್ಞಾನಿ​ ನಂಬಿ ನಾರಾಯಣ್​ ಅವರ ಬಯೋಪಿಕ್​ ಆಗಿದ್ದು, ಇದರಲ್ಲಿ ಮಾಧವನ್​ ನಾಯಕನಾಗಿದ್ದಾರೆ.

Comments are closed.