ಮನೋರಂಜನೆ

ನಟಿ ಪಾಯಲ್ ಘೋಷ್’ಗೆ ಕೊರೋನಾ ಇರುವುದು ನಿಜವೇ…? ಈ ಬಗ್ಗೆ ಆಕೆ ಹೇಳಿದ್ದೇನು..?

Pinterest LinkedIn Tumblr

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಪಾಯಲ್ ಘೋಷ್ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಹೋಗಿದ್ದಾರೆ. ಇದನ್ನು ನೋಡಿದವರು ಪಾಯಲ್‌ಗೆ ಕೊರೊನಾ ಸೋಂಕು ಬಂದಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ.

ಆದರೆ ಕೂಡಲೆ ಪ್ರತಿಕ್ರಿಯಿಸಿರುವ ನಟಿ ಪಾಯಲ್ ತನ್ನ ಆರೋಗ್ಯ ಕುರಿತು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಫುಲ್‍ಸ್ಟಾಪ್ ಇಟ್ಟಿದ್ದಾರೆ.

“ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ಮೊದಲು ತಲೆನೋವು ಪ್ರಾರಂಭವಾಯಿತು. ಬಳಿಕ ಜ್ವರ ಶುರುವಾಯಿತು. ಆದರೆ ತುಂಬಾ ಎಚ್ಚರಿಕೆ ವಹಿಸಿದೆ. ಇದು ಕೊರೊನಾ ಅಲ್ಲ ಅಂತ ನನಗೆ ಖಚಿತವಾಗಿ ಗೊತ್ತಿತ್ತು. ಕೊನೆಗೆ ಪರೀಕ್ಷೆ ಮಾಡಿಸಿದಾಗ ಮಲೇರಿಯಾ ಎಂದು ಗೊತ್ತಾಯಿತು. ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಕಾಡುತ್ತಿರುವ ಕೊರೊನಾ ವೈರಸ್ ಸಹ ಶೀಘ್ರದಲ್ಲೇ ಅಂತ್ಯವಾಗಲಿದೆ ಎಂಬ ನಂಬಿಕೆ ಇದೆ. ಶೀಘ್ರದಲ್ಲೇ ನಾವೆಲ್ಲರೂ ಮತ್ತೆ ಸಾಧಾರಣ ಜೀವನ ಪ್ರಾರಂಭಿಸುತ್ತೇವೆ ಎಂಬುದು ನನ್ನ ನಂಬಿಕೆ ಎಂದಿದ್ದಾರೆ ಪಾಯಲ್. ಕನ್ನಡದ ವರ್ಷಧಾರೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಪಾಯಲ್. ಅಷ್ಟೇ ಅಲ್ಲದೆ ತೆಲುಗು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

Comments are closed.