
ಈ ಪೋಟೋದಲ್ಲಿರುವುದು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ನಟಿಯೊಬ್ಬರ ಪುತ್ರಿ. ಈಕೆ ಹೆಸರು ಅನನ್ಯ ರಾಮು. ರಾಮು ಎಂದರೆ ನಿರ್ಮಾಪಕ ರಾಮುನಾ ಎಂದು ನೀವು ಕೇಳಬಹುದು. ಹೌದು, ನಿರ್ಮಾಪಕ ರಾಮು ಹಾಗೂ ಕನಸಿನ ರಾಣಿ ಮಾಲಾಶ್ರೀ ದಂಪತಿ ಪುತ್ರಿಯೇ ಈ ಅನನ್ಯ.ಮಾಲಾಶ್ರೀ ಹಾಗೂ ರಾಮು ಮುದ್ದು ಮಗಳಾದ ಅನನ್ಯ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅನನ್ಯ ಹಂಚಿಕೊಂಡಿರುವ ಫೋಟೋಗಳು ವೈರಲ್ ಆಗಿದೆ. ಫೋಟೋ ನೋಡಿದವರು ಅನನ್ಯ ಸ್ಯಾಂಡಲ್ವುಡ್ನಲ್ಲಿ ಜ್ಯೂನಿಯರ್ ಕನಸಿನ ರಾಣಿ ಆಗುವುದರಲ್ಲಿ ಸಂದೇಹವೇ ಇಲ್ಲ ಎಂದಿದ್ದಾರೆ. ಏಕೆಂದರೆ ಮಾಲಾಶ್ರೀ ಪುತ್ರಿ ಅನನ್ಯ ನೋಡಲು ಬಹಳ ಸುಂದರವಾಗಿದ್ದಾರೆ.
ಮಾಲಾಶ್ರೀ 1989 ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಚಿತ್ರದಲ್ಲಿ ಅವರು ರಾಘವೇಂದ್ರ ರಾಜ್ಕುಮಾರ್ ಜೊತೆ ನಟಿಸಿದ್ದರು. ಮಾಲಾಶ್ರೀ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದದ್ದು ಪಾರ್ವತಮ್ಮ ರಾಜ್ಕುಮಾರ್ ಅವರು. ‘ನಂಜುಂಡಿ ಕಲ್ಯಾಣ’ ಬಿಡುಗಡೆಯಾಗಿದ್ಧೇ ತಡ ಮಾಲಾಶ್ರಿಗೆ ಒಂದಾದ ಮೇಲೊಂದು ಅವಕಾಶಗಳು ಹುಡುಕಿಕೊಂಡು ಬಂದವು. ಗಜಪತಿ ಗರ್ವಭಂಗ, ಪೊಲೀಸನ ಹೆಂಡ್ತಿ, ಕಿತ್ತೂರಿ ಹುಲಿ, ತವರುಮನೆ ಉಡುಗೊರೆ, ಬೆಳ್ಳಿ ಕಾಲುಂಗುರ, ರಾಣಿ ಮಹಾರಾಣಿಯಂತ ಚಿತ್ರಗಳು ಅವರಿಗೆ ಒಳ್ಳೆ ಹೆಸರು ತಂದುಕೊಟ್ಟವು.
ಆ ಸಮಯದಲ್ಲಿ ಮಾಲಾಶ್ರೀ ಹಾಗೂ ಸುನಿಲ್ ಜೋಡಿ ಬಹಳ ಕ್ಲಿಕ್ ಆಗಿತ್ತು. ‘ನಂಜುಂಡಿ ಕಲ್ಯಾಣ’ ಚಿತ್ರದ ‘ಒಳಗೆ ಸೇರಿದರೆ ಗುಂಡು…’ ಹಾಡು ಕೂಡಾ ಮಾಲಾಶ್ರೀಗೆ ಒಳ್ಳೆ ಹೆಸರು ತಂದುಕೊಟ್ಟಿತು. ನಿರ್ಮಾಪಕ ರಾಮು ಅವರನ್ನು ಪ್ರೀತಿಸಿ ಮದುವೆಯಾದ ಮಾಲಾಶ್ರೀಗೆ ಈಗ ಅನನ್ಯ ಹಾಗೂ ಆರ್ಯನ್ ಎಂಬ ಮುದ್ದಾದ ಮಕ್ಕಳಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ದುರ್ಗಾ ಈಗ ಮಾಲಾಶ್ರೀ ಆಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
Comments are closed.