ಮನೋರಂಜನೆ

ವಿಚ್ಛೇದನದ ಹಿಂದಿನ ರಾತ್ರಿ ‘ಸಿದ್ಧವಾಗಿದ್ದೀಯಾ’ ಅಂತ ಕೇಳಿದ್ದರು: ಮಲೈಕಾ ಅರೋರಾ

Pinterest LinkedIn Tumblr


ಅರ್ಬಾಜ್ ಖಾನ್ ಜೊತೆಗೆ ವಿಚ್ಛೇದನ ಪಡೆದ ಸಮಯದಲ್ಲಿ ತಾನು ತುಂಬಾ ಕಠಿಣ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ ಬಾಲಿವುಡ್ ನಟಿ ಮಲೈಕಾ ಅರೋರಾ. ಕರೀನಾ ಕಪೂರ್ ಟಾಕ್ ಶೋಗೆ ಅತಿಥಿಯಾಗಿ ಆಗಮಿಸಿದ್ದ ಅವರು ತನ್ನ ವಿಚ್ಛೇದನ ಕುರಿತಂತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ನಾನು ವಿಚ್ಛೇದನ ಪಡೆಯುವುದು ಸೂಕ್ತ ಅಲ್ಲ ಎಂದು ಪ್ರತಿಯೊಬ್ಬರೂ ಎಚ್ಚರಿಸಿದ್ದರು. ಅದೇ ರೀತಿ ನನ್ನ ನಿರ್ಧಾರಕ್ಕೆ ಯಾರೂ ಬೆಂಬಲ ಸೂಚಿಸಲಿಲ್ಲ ಕೂಡ. ಹಾಗಾಗಿ ನೀವು ವಿಚ್ಛೇದನ ಪಡೆಯದಿರುವುದೇ ಉತ್ತಮ ಎಂಬ ಸಲಹೆ, ಸೂಚನೆಗಳನ್ನು ನೀಡಿದ್ದರು. ವಿಚ್ಛೇದನ ಪಡೆಯುವುದಕ್ಕೂ ಹಿಂದಿನ ದಿನ ರಾತ್ರಿ ಸಹ ನನ್ನ ಕುಟುಂಬದ ಸದಸ್ಯರು “ನೀನು ಡೈವೋರ್ಸ್‌ಗೆ ಸಿದ್ಧವಾಗಿದ್ದೀಯಾ?” ಎಂದು ಕೇಳಿದ್ದರು ಎಂದಿದ್ದಾರೆ.

“ನಾವು ತೆಗೆದುಕೊಳ್ಳುವ ಒಂದು ನಿರ್ಧಾರ ನಮ್ಮ ಜೀವನವನ್ನು ಸರಾಗವಾಗಿ ಸಾಗಲು ಬಿಡಲ್ಲ. ಕೊನೆಗೆ ಕೆಲವರ ನಿಂದನೆಗೂ ಗುರಿಯಾಗಬೇಕಾದ ಪರಿಸ್ಥಿತಿಗೂ ಕಾರಣವಾಗುತ್ತದೆ. ಆದರೆ ನನಗಾಗಿ ನಮ್ಮ ಸುತ್ತಲೂ ಇರುವವರಿಗಾಗಿ ಇದೇ ಸರಿಯಾದದ್ದು ಎಂದು ಭಾವಿಸುವ ನಾನು, ಅರ್ಬಾಜ್ ಸೇರಿ ಈ ನಿರ್ಧಾರ ತೆಗೆದುಕೊಂಡೆವು” ಎಂದು ಹೇಳಿದ್ದಾರೆ.

ಅದೇ ರೀತಿ ನಿಮ್ಮ ಮಗ ಅರ್ಹಾನ್ ಈ ನಿರ್ಧಾರವನ್ನು ಹೇಗೆ ಒಪ್ಪಿದ ಎಂದು ಕೇಳಿದ್ದಕ್ಕೆ, “ಯಾವ ತಾಯಿಯಾದರೂ ತನ್ನ ಮಕ್ಕಳಿಗೆ ಸಂತೋಷಕರವಾದ ವಾತಾವರಣ ನೀಡಬೇಕೆಂದು ಬಯಸುತ್ತಾಳೆ. ನನ್ನ ಮುಂದಿದ್ದ ಸಮಸ್ಯೆಗಳಿಂದ ಆ ಸಮಯದಲ್ಲಿ ಅರ್ಹಾನ್ ಸಹ ನನ್ನ ನಿರ್ಧಾರವನ್ನು ಒಪ್ಪಿಕೊಂಡ.

“ಒಂದು ದಿನ ಅರ್ಹಾನ್ ನನ್ನ ಬಳಿ ಬಂದು ಅಮ್ಮಾ ನಿನಗೆ ಯಾವುದು ಸಂತೋಷ ನೀಡುತ್ತದೋ ಅದನ್ನೇ ಮಾಡಿ. ಯಾಕೆಂದರೆ ನಾನು ನಿನ್ನನು ಸಂತೋಷದಿಂದ ನೋಡಬೇಕೆಂದಿದ್ದೇನೆ” ಎಂದು ಹೇಳಿರುವುದನ್ನು ನೆನಪಿಸಿಕೊಂಡಿದ್ದಾರೆ.

ಮಲೈಕಾ ಅರೋರಾ, ಅರ್ಬಾಜ್ ಖಾನ್ 1998ರಲ್ಲಿ ಮದುವೆಯಾದರು. ಆದರೆ ಭಿನ್ನಾಭಿಪ್ರಾಯಗಳ ಕಾರಣ ವಿಚ್ಛೇದನ ಪಡೆಯಲು ನಿರ್ಧರಿಸಿದರು. ಕೌಟುಂಬಿಕ ನ್ಯಾಯಾಲಯದಲ್ಲಿ 2017ರ ಮೇನಲ್ಲಿ ಇವರಿಬ್ಬರೂ ವಿಚ್ಛೇದನದ ಮೂಲಕ ದೂರ ಸರಿದರು.

ಸದ್ಯಕ್ಕೆ ಮಲೈಕಾ ಬಾಲಿವುಡ್ ಹೀರೋ ಅರ್ಜುನ್ ಕಪೂರ್ ಜೊತೆಗೆ ಡೇಟಿಂಗ್‍ನಲ್ಲಿದ್ದಾರೆ. ಅರ್ಬಾಜ್ ಖಾನ್ ಇಟಾಲಿಯನ್ ಮಾಡೆಲ್ ಜಾರ್ಜಿಯಾ ಆಂಡ್ರಿಯಾನಿ ಜೊತೆಗೆ ರಿಲೇಷನ್‍ಶಿಪ್‍ನಲ್ಲಿರುವುದಾಗಿ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

Comments are closed.