ಮನೋರಂಜನೆ

ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್

Pinterest LinkedIn Tumblr


ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದ್ದು ಸಿನಿಮಾ ತಾರೆಗಳ ಪರಿಸ್ಥಿತಿಯೂ ಬಿಗಡಾಯಿಸಿದೆ. ಮನೆಗೆ ಕೆಲಸದವರು ಬರುತ್ತಿಲ್ಲ, ಕಸ ಮುಸುರೆ ತೊಳೆಯಲು ಯಾರೂ ಇಲ್ಲ. ಹಾಗಾಗಿ ಈಗ ಅವರವರ ಮನೆ ಕೆಲಸಗಳನ್ನು ಅವರೇ ಮಾಡಿಕೊಳ್ಳುವಂತಾಗಿದೆ. ನಟಿ ಕತ್ರಿಕಾ ಕೈಫ್ ಪರಿಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ.

ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವ ತಾರೆಗಳು ಈ ಸಂದರ್ಭದಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕತ್ರಿನಾ ಕೈಫ್ ಸಹ ಪಾತ್ರೆ ತೊಳೆಯುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಕೊರೊನಾ ಕಂಟಕದ ಹಿನ್ನೆಲೆಯಲ್ಲಿ ಮನೆ ಕೆಲಸದರೂ ಮನೆಯಲ್ಲೇ ಉಳಿದಿರುವ ಕಾರಣ ಕತ್ರಿನಾ ಪಾತ್ರೆ ತೊಳೆಯುವಂತಾಗಿದೆ.

ಬಿಳಿ ಬಣ್ಣದ ಶಾರ್ಟ್ಸ್ ತೊಟ್ಟಿದ್ದು ಟೀ-ಶರ್ಟ್ ಅದರ ಮೇಲೊಂದು ನಿಲುವಂಗಿ ಹಾಕಿಕೊಂಡು ಪಾತ್ರೆ ತೊಳೆಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸದ್ಯಕ್ಕೆ ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಗೆ ನಾಯಕಿಯಾಗಿ ಕತ್ರಿಕಾ ಕೈಫ್ ಅಭಿನಯಿಸುತ್ತಿದ್ದಾರೆ.

ಇದುವರೆ ಜಗತ್ತಿನಾದ್ಯಂತ 14000 ಮಂದಿ ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಲಾಕ್‌ಡೌನ್‍ಗೆ ಕರೆ ನೀಡಿದ್ದಾರೆ. ಮಾರ್ಚ್ 24ರ ಮಧ್ಯರಾತ್ರಿಯಿಂದ ಏಪ್ರಿಲ್ 15ರತನಕ ಇಡೀ ದೇಶವೇ ಲಾಕ್ ಡೌನ್ ಆಗಲಿದೆ ಎಂದು ಘೋಷಿಸಿದ್ದಾರೆ. ಮನೆಯಿಂದ ಯಾರೂ ಹೊರಗೆ ಬರಬೇಡಿ, ಮನೆಯಿಂದ ಹೊರಬಾರದಂತೆ ಲಕ್ಷ್ಮಣರೇಖೆ ಎಳೆದುಕೊಳ್ಳಿ. ಮೂರು ವಾರಗಳ ಕಾಲ ಯಾರೂ ಮನೆ ಬಿಟ್ಟು ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Comments are closed.