ಮಂಡ್ಯ: ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ ಎಂದು ಗಾಯಕ ಚಂದನ್ ಪತ್ನಿ ನಿವೇದಿತಾ ಗೌಡ ಪ್ರತಿಕ್ರಿಯಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿವೇದಿತಾ ಗೌಡ, ನಮ್ಮ ಪ್ರವಾಸ ಚೆನ್ನಾಗಿತ್ತು. ಏಕೆಂದರೆ ನಾವು ಹೋಗಿದ್ದಾಗ ಅಲ್ಲಿ ಯಾವುದೇ ಆತಂಕದ ವಾತವರಣ ಇರಲಿಲ್ಲ. ನಾವು ತುಂಬಾ ಚೆನ್ನಾಗಿ ಕಾಲ ಕಳೆದಿದ್ದೇವೆ. ಯಾವಾಗ ಪ್ಯಾರಿಸ್ ಲಾಕ್‍ಡೌನ್ ಆಯ್ತೋ ನಾವು ಒಂದು ನಿರ್ಧಾರಕ್ಕೆ ಬಂದೇವು. ಎಲ್ಲಾ ದೇಶಗಳಿಗೆ ಕೊರೊನಾ ಹರಡುತ್ತಿತ್ತು. ಅಲ್ಲಿಯೂ ಹೋಗುವುದಕ್ಕೆ ಆಗಲ್ಲ. ಭಾರತಕ್ಕೆ ವಾಪಸ್ ಹೋಗೋಣ ಅಂತ ನಿರ್ಧರಿಸಿದ್ದೇವು ಎಂದು ನಿವೇದಿತಾ ತಿಳಿಸಿದರು.
ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ. ನಮಗೆ ನಮ್ಮ ಆರೋಗ್ಯ ಮುಖ್ಯ ಹೀಗಾಗಿ ಯಾವುದೇ ಬೇಸರವಿಲ್ಲ. ಕೊರೊನಾ ಭೀತಿ ಕಳೆದ ಮೇಲೆ ನಾವು ಮತ್ತೆ ಹೋಗಬಹುದು. ಅದರ ಬಗ್ಗೆ ನಮಗೆ ಚಿಂತೆ ಇಲ್ಲ. ಮೊದಲು ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಕೊರೊನಾ ಬೇರೆ ದೇಶಗಳಲ್ಲಿ ಹರಡುತ್ತಿತ್ತು. ಯೂರೋಪ್‍ನಲ್ಲಿ ಕೊರೊನಾ ಹರಡಿಲ್ಲ. ಇಟಲಿ ಶಟ್‍ಡೌನ್ ಆಗಿತ್ತು ಎಂಬ ಸುದ್ದಿ ನಮಗೆ ತಿಳಿದುತ್ತು. ನಾವು ಹೋಗಿದ್ದ ಜಾಗಗಳು ತುಂಬಾ ಸೇಫ್ ಆಗಿತ್ತು. ಅಲ್ಲಿ ಯಾವುದೇ ಕೊರೊನಾ ಆತಂಕ ಇರಲಿಲ್ಲ. ಈಗ ಇಡೀ ವಿಶ್ವದಲ್ಲಿ ಕೊರೊನಾದ ಸ್ಥಿತಿ ಹೇಗೆ ಇದೆಯೋ ಅಲ್ಲಿ ಹಾಗೇ ಇರಲಿಲ್ಲ. ಆದರೆ ಈಗ ನಾವು ಅಲ್ಲಿ ಏನಾದರೂ ಇದ್ದಿದ್ದರೇ ತುಂಬಾ ಡೇಂಜರ್ ಆಗುತ್ತಿತ್ತು. ಸರಿಯಾದ ಸಮಯಕ್ಕೆ ನಾವು ಭಾರತಕ್ಕೆ ಹಿಂದಿರುಗಿದ್ದೇವೆ ಎಂದು ನಿವೇದಿತಾ ಹೇಳಿದರು.
Comments are closed.