
ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗೆಯೇ ಅವರು ಜಿಮ್‍ಗೆ ಹೋಗುವ ವೇಳೆ ಸೆರೆ ಹಿಡಿಯಲಾಗಿದ್ದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.
ಮಲೈಕಾ ಅವರ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಲೈಕಾ ಕಾರಿನಿಂದ ಇಳಿದು ಜಿಮ್‍ಗೆ ಬೇಗ ಬೇಗ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಛಾಯಗ್ರಾಹಕರು ಅವರ ಫೋಟೋವನ್ನು ಕ್ಲಿಕ್ಕಿಸುತ್ತಿರುತ್ತಾರೆ. ಈ ವೇಳೆ ಮಲೈಕಾ ಹಿಂದೆ ತಿರುಗಿ ಫೋಟೋಗ್ರಾಫರ್ ಗಳಿಗೆ ಮಾಸ್ಕ್ ಧರಿಸಿ ಎಂದು ಸನ್ನೆ ಮಾಡುತ್ತಾರೆ.
ಸದ್ಯ ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್‍ಗೆ ಇಬ್ಬರು ಬಲಿಯಾಗಿದ್ದಾರೆ. ಹೀಗಿರುವಾಗ ಮಲೈಕಾ ಫೋಟೋಗ್ರಾಫರ್ ಗಳಿಗೆ ಮಾಸ್ಕ್ ಧರಿಸಿ ಎಂದು ಸನ್ನೆ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಮಲೈಕಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ತಮ್ಮ ಪ್ರಿಯಕರ, ನಟ ಅರ್ಜುನ್ ಕಪೂರ್ ಅವರ ಕೈ ಹಿಡಿದುಕೊಂಡು ಹೋಗುತ್ತಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
Comments are closed.