ಮನೋರಂಜನೆ

ನಾಯಕ ನಟನೊಂದಿಗೂ ಕಾಂಪ್ರೊಮೈಸ್ ಆಗು ಎಂದ ನಿರ್ಮಾಪಕನಿಗೆ ಈ ನಟಿ ಹೇಳಿದ್ದೇನು?

Pinterest LinkedIn Tumblr


ಕಳೆದ ಕೆಲ ತಿಂಗಳುಗಳ ಹಿಂದೆ ಭಾರಿ ಸದ್ದು ಮಾಡಿದ್ದ ಮೀಟೂ ಅಭಿಯಾನ ಮತ್ತೆ ಮುಂದುವರೆದಿದ್ದು, ಈ ಭಾರಿ ನಟಿ ಶೃತಿ ಮರಾಠೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೇ ‘ಕಾಂಪ್ರಮೈಸ್’, ‘ಒನ್ ನೈಟ್’ ಪದ ಬಳಕೆ ಮಾಡಿದ್ದ ನಿರ್ಮಾಪಕನ ತಲೆ ತಿರುಗುವಂತೆ ಉತ್ತರ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ನಟಿ ಶೃತಿ ಮರಾಠೆ ಹ್ಯೂಮನ್ಸ್ ಆಫ್ ಬಾಂಬೇ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ಚಿತ್ರವೊಂದರ ನಿಮಿತ್ತ ನಾನು ನಿರ್ಮಾಪಕರೊಂದಿಗೆ ಮಾತನಾಡುತ್ತಿದ್ದೆ. ಆರಂಭದಲ್ಲಿ ಇಬ್ಬರ ಮಾತು ಸಿನಿಮಾ ಕುರಿತಾಗಿಯೇ ಇತ್ತು, ಆದರೆ ಬಳಿಕ ಇದ್ದಕ್ಕಿದ್ದ ಹಾಗೆ ನಿರ್ಮಾಪಕರು ‘ಕಾಂಪ್ರಮೈಸ್’, ‘ಒನ್ ನೈಟ್’ ನಂತಹ ಪದ ಬಳಕೆ ಆರಂಭಿಸಿದರು. ಆಗ ನನಗೆ ಇವರ ಬಯಕೆ ಏನು ಎಂಬುದು ತಿಳಿಯಿತು. ಅಲ್ಲದೆ ಈ ಚಿತ್ರ ನಾನು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ.

ಅಂತೆಯೇ ಆ ನಿರ್ಮಾಪಕನಿಗೆ ತಿರುಗೇಟು ನೀಡುವ ಉದ್ದೇಶದಿಂದ ಆತನ ಕುರಿತು, ಈ ಚಿತ್ರದ ನಾಯಕಿಯಾದ ನಾನು ನಿರ್ಮಾಪಕರಾದ ನಿಮ್ಮೊಂದಿಗೆ ಮಲಗಬೇಕು.. ಸರಿ ಹಾಗಾದರೇ ಚಿತ್ರದ ನಾಯಕ ನಟ ಯಾರೋಂದಿಗೆ ಮಲಗಬೇಕು ಎಂದು ತಿರುಗೇಟು ನೀಡಿದ್ದೆ. ನಾನು ನೀಡಿದ ಉತ್ತರಕ್ಕೆ ಅರೆ ಕ್ಷಣ ನಿರ್ಮಾಪಕ ಸ್ಥಬ್ಧವಾಗಿದ್ದ. ಅಂದು ನಾನು ಬೇಕಿದ್ದರೆ ಏನೂ ಹೇಳದೆ ಬರ ಬಹುದಿತ್ತು.

ಆದರೆ ನಾನು ನನ್ನ ಪರವಾಗಿ ಅಲ್ಲ ಎಲ್ಲ ಶೋಷಿತ ಹೆಣ್ಣು ಮಕ್ಕಳ ಪರ ನಿಂತಿದ್ದೆ. ಅಂದು ನನ್ನ ಸ್ನೇಹಿತರೊಂದಿಗೆ ಈ ವಿಚಾರ ಹಂಚಿಕೊಂಡಿದ್ದೆ. ಎಲ್ಲರೂ ಈ ಚಿತ್ರದಿಂದ ಹೊರ ಬರುವಂತೆ ಸಲಹೆ ನೀಡಿದರು. ಹೀಗಾಗಿ ಆ ಚಿತ್ರದಿಂದ ನಾನು ಹೊರ ಬಂದಿದ್ದೆ ಎಂದು ಹೇಳಿದರು.

ಅಂತೆಯೇ ದಕ್ಷಿಣ ಭಾರತದ ಚಿತ್ರವೊಂದರಲ್ಲಿ ನಾನು ಬಿಕಿನಿ ಧರಿಸಿ ನಟಿಸಿದ್ದೆ. ಇದನ್ನು ಹಲವರು ಟೀಕಿಸಿದ್ದರು. ಚಿತ್ರರಂಗದಲ್ಲಿ ನಾಯಕ ನಟರಿಗೆ ಎಲ್ಲ ರೀತಿಯ ಸಮಾಧಾನಕರ ವಾತಾವರಣವಿರುತ್ತದೆ. ಆದರೆ ನಟಿಯರಿಗೆ ಇದೇ ರೀತಿಯ ವಾತಾವರಣ ಇರುವುದಿಲ್ಲ. ಸಾಕಷ್ಚು ಪರಿಶ್ರಮ, ಸವಾಲುಗಳ ಎದುರಿಸಬೇಕು. ಚಿತ್ರಕ್ಕಾಗಿ ಬಿಕಿನಿ ಧರಿಸಬೇಕು ಎಂದು ಮರುಮಾತಿಲ್ಲದೇ ಒಪ್ಪಿಕೊಂಡಿದ್ದೆ. ಕಾರಣ ಕೇವಲ ಚಿತ್ರದ ಅವಕಾಶಕ್ಕಾಗಿ.

ಆದರೆ ಅಂದು ನನ್ನ ಚಿತ್ರಗಳನ್ನು ಮುಂದಿಟ್ಟುಕೊಂಡು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. ಇಂತಹ ಕೃತ್ಯಗಳಿಂದ ಓರ್ವ ನಟಿಯ ವೈಯುಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಯಾರು ಆಲೋಚನೆ ಕೂಡ ಮಾಡುವುದಿಲ್ಲ ಎಂದು ಶೃತಿ ಹೇಳಿದ್ದಾರೆ.

Comments are closed.