ಮನೋರಂಜನೆ

ಟಿಕ್‌ ಟಾಕ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿಗೆ ಕಿರಿಕಿರಿ!

Pinterest LinkedIn Tumblr


ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಸೆಲೆಬ್ರಿಟಿಗಳಿಗೆ ಕಿರಿಕಿರಿ ಉಂಟು ಮಾಡುವ ಪ್ರಸಂಗಗಳು ಸಾಕಷ್ಟು ಹೆಚ್ಚಾಗುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಹಂಚಿಕೊಳ್ಳುವ ಫೋಟೋಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಆ ಫೋಟೋಗಳನ್ನು ಬೇರೆ ಥರ ಎಡಿಟ್ ಮಾಡಿ, ಅದನ್ನು ವಾಟ್ಸಪ್‌ಗಳಲ್ಲಿ ಹಂಚಿಕೊಳ್ಳುವುದು ಜಾಸ್ತಿ ಆಗುತ್ತಿದೆ. ಇದೀಗ ಅಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಆ ಸೆಲೆಬ್ರಿಟಿ ಇಷ್ಟಕ್ಕೆ ಸುಮ್ಮನಾಗಿಲ್ಲ. ಇಂತಹ ಕೃತ್ಯ ಎಸಗುವವರ ವಿರುದ್ಧ ದೂರು ನೀಡಿದ್ದಾರೆ. ಏನಿದು ಪ್ರಕರಣ ಇಲ್ಲಿದೆ ಮಾಹಿತಿ.

ನಟಿ ಭೂಮಿಕಾಗೆ ಟಿಕ್‌ಟಾಕ್‌ನಲ್ಲಿ ಕಿರಿಕಿರಿ
‘ಆಪ್ತಮಿತ್ರ’, ‘ಅತಂತ್ರ’, ‘ಹಲೋ ಮಾಮ’ ಸೇರಿದಂತೆ 15 ಕ್ಕೂ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಭೂಮಿಕಾಗೆ ಟಿಕ್‌ ಟಾಕ್‌ನಲ್ಲಿ ಕೆಲವರು ಅಸಂಬದ್ಧ ಕಾಮೆಂಟ್‌ಗಳಿಂದ ಕಿರಿಕಿರಿ ಉಂಟು ಮಾಡಿದ್ದಾರೆ. ಟಿಕ್‌ ಟಾಕ್ ಟ್ರೋಲಿಗರ ಹಾವಳಿಯಿಂದ ನೊಂದಿರುವ ನಟಿ ಭೂಮಿಕಾ, ಪೊಲೀಸರಿಗೆ ದೂರು ನೀಡಿದ್ದಾರೆ. ‘ನಾನು ಅಪ್‌ಲೋಡ್ ಮಾಡಿದ್ದ ಒಂದು ವಿಡಿಯೋ ಕೆಲವರು ತುಂಬ ಕೆಟ್ಟದಾಗಿ ಟ್ರೋಲ್ ಮಾಡಿದ್ದಾರೆ. ಈ ರೀತಿ ತುಂಬ ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ದೂರು ನೀಡಿದ್ದೇನೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ತಪ್ಪು ಮಾಡಿದವರನ್ನು ಸುಮ್ಮನೆ ಬಿಡಲ್ಲ’ ಎಂದು ಹೇಳಿದ್ದಾರೆ ಭೂಮಿಕಾ. ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

‘ಮಾರ್ಚ್ 1ರಂದು ನಾನು ಮಾಡಿದ್ದ ವಿಡಿಯೋವೊಂದನ್ನು ಡಿಲಿಟ್‌ ಮಾಡು ಎಂದು ತುಂಬ ಕೆಟ್ಟದಾಗಿ ಕಾಮೆಂಟ್ ಹಾಕಿದ್ದರು. ಆನಂತರ ತುಂಬ ಕೆಟ್ಟದಾಗಿ ಅದಕ್ಕೆ ಟ್ರೋಲ್ ಮಾಡಿದ್ದಾರೆ. ಆದ್ದರಿಂದ ಯಾರ್ ಯಾರು ಆ ರೀತಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೋ, ಅವರ ವಿರುದ್ಧ ದೂರು ದಾಖಲಿಸಿದ್ದೇನೆ. ವಕೀಲರ ಮಾರ್ಗದರ್ಶನದಲ್ಲಿ ಈ ದೂರು ದಾಖಲಾಗಿದ್ದು, ಇದಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಕಲೆಹಾಕಿ, ದೂರಿನೊಂದಿಗೆ ನೀಡಿದ್ದೇನೆ’ ಎಂದು ಮಾಹಿತಿ ಅವರು ನೀಡಿದ್ದಾರೆ.

‘ಇಷ್ಟೆಲ್ಲ ಆದರೂ ನನ್ನ ಕೈಯಲಿ ಏನೂ ಮಾಡೋಕೆ ಆಗಲ್ಲ ಅಂತ ತುಂಬ ಜನ ಟ್ರೋಲ್ ಮಾಡಿದ್ದರು. ಪೊಲೀಸರಿಗೆ ದೂರು ನೀಡುವ ಮೂಲಕ ಅವರಿಗೆಲ್ಲ ಸರಿಯಾಗಿ ಉತ್ತರ ನೀಡಿದ್ದೇನೆ. ಸೈಬರ್ ಕ್ರೈಮ್‌ಗೆ ಎಲ್ಲ ದಾಖಲೆಗಳನ್ನು ನೀಡಿದ್ದೇನೆ. ನನ್ನನ್ನು ಟ್ರೋಲ್ ಮಾಡಿದವರು ಶೀಘ್ರದಲ್ಲೇ ಅದಕ್ಕೆ ಸರಿಯಾದ ಪ್ರತಿಕ್ರಿಯೆ ಪಡೆಯಲಿದ್ದಾರೆ. ಕಾನೂನು ತುಂಬ ಸ್ಟ್ರಾಂಗ್ ಆಗಿದೆ’ ಎಂದಿದ್ದಾರೆ ಭೂಮಿಕಾ.

Comments are closed.