ಮನೋರಂಜನೆ

ಪ್ರಥಮ ಪತ್ರ ಕಂಡು ಸಂತಸಗೊಂಡ ಬಿಗ್ ಬಾಸ್ ವಿಜೇತ ಶೈನ್

Pinterest LinkedIn Tumblr


ಬೆಂಗಳೂರು: ಬಿಗ್ ಬಾಸ್-7ರ ವಿಜೇತ ಶೈನ್ ಶೆಟ್ಟಿ ತಮ್ಮ ಜೀವನದ ಮೊದಲ ಪತ್ರವನ್ನು ಕಂಡು ಖುಷಿಯಾಗಿದ್ದಾರೆ.

ಶೈನ್ ತಮ್ಮ ಇನ್‍ಸ್ಟಾದಲ್ಲಿ ಪತ್ರಗಳಿರುವ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ಅಭಿಮಾನಿ ಒಬ್ಬರು ಬರೆದ ನನ್ನ ಜೀವನದ ಮೊದಲನೇ ಪತ್ರ. ಅಂದು ಬಿಗ್ ಬಾಸ್ ಮನೆಗೆ ನನ್ನ ತಾಯಿ ಬರೆದ ಪತ್ರ ಎಷ್ಟು ಸಂತೋಷ ತಂದಿದೆಯೊ, ಇಂದು ನೀವು ಬರೆದ ಪತ್ರವೂ ಅಷ್ಟೇ ಸಂತಸ ತಂದಿದೆ. ಬರೆದ ತಮಗೂ, ವಿಳಾಸ ಸರಿ ಇಲ್ಲದಿದ್ದರೂ ಪತ್ರ ತಲುಪಿಸಿದ ಪೋಸ್ಟ್ ಮಾಸ್ಟರ್ ಮೇಡಂಗೂ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಅಭಿಮಾನಿ ಒಬ್ಬರು ಬರೆದ ನನ್ನ ‌ಜೀವನ‌ದ ಮೊದಲನೇ ಪತ್ರ …. ಅಂದು ಬಿಗ್ ಬಾಸ್ ಮನೆಗೆ ನನ್ನ ತಾಯಿ ಬರೆದ ಪತ್ರ ಎಷ್ಟು ಸಂತೋಷ ತಂದಿದೆಯೊ , ಇಂದು ನೀವು ಬರೆದ ಪತ್ರವೂ ಅಷ್ಟೇ ಸಂತಸ ತಂದಿದೆ. ಬರೆದ ತಮಗೂ, ವಿಳಾಸ ಸರಿ ಇಲ್ಲದಿದ್ದರೂ ಪತ್ರ ತಲುಪಿಸಿದ ಪೊಸ್ಟ್ ಮಾಸ್ಟರ್ ಮೇಡಂಗೂ ಧನ್ಯವಾದಗಳು.

ಇತ್ತೀಚೆಗೆ ಶೈನ್ ಭಾರತದ ಲೆಜೆಂಡ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರ ಜೊತೆ ಕಾಲಕಳೆದಿದ್ದರು. ಈ ಬಗ್ಗೆ ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಶೈನ್, “ನಾನು ಅನಿಲ್ ಕುಂಬ್ಳೆ ಸರ್ ಮನೆಗೆ ಭೇಟಿ ನೀಡಿದ್ದೆ. ವಾವ್ ಚೇತನಾ ಕುಂಬ್ಳೆ ಅವರು ಒಳ್ಳೆಯ ಆತಿಥ್ಯ ನೀಡಿದರು. ಕುಂಬ್ಳೆಯವರ ಜೊತೆ ಒಂದು ಒಳ್ಳೆಯ ಸಂಜೆಯನ್ನು ಕಳೆದ ನಾನು ಧನ್ಯ. ನಮ್ಮ ದೇಶದ ಹೆಮ್ಮ ಅನಿಲ್ ಕುಂಬ್ಳೆ ಅವರು ತುಂಬ ಸರಳ ವ್ಯಕ್ತಿ” ಎಂದು ಬರೆದುಕೊಂಡಿದ್ದರು.

ಸ್ವತಃ ಅನಿಲ್ ಕುಂಬ್ಳೆ ಅವರೇ ಶೈನ್ ಅವರಿಗೆ ಫೋನ್ ಮಾಡಿ ಆಹ್ವಾನ ನೀಡಿದ್ದರು ಎಂದು ಹೇಳಲಾಗುತ್ತಿದೆ. ಕುಂಬ್ಳೆ ಅವರ ಕುಟುಂಬ ಶೈನ್ ಶೆಟ್ಟಿ ಅವರ ಅಭಿಮಾನಿಗಳಾಗಿದ್ದು, ಅವರನ್ನು ಮಾತನಾಡಿಸಬೇಕು ಎಂದಿದ್ದರಂತೆ. ಆ ಕಾರಣಕ್ಕೆ ಕುಂಬ್ಳೆ ಅವರು ಶೈನ್ ಅವರಿಗೆ ಕಾಲ್ ಮಾಡಿ ಆಹ್ವಾನ ನೀಡಿದ್ದು, ಕುಂಬ್ಳೆ ಅವರ ಆಹ್ವಾನದ ಮೇರೆಗೆ ಶೈನ್ ಅವರ ಮನೆಗೆ ಹೋಗಿ ಬಂದಿದ್ದರು.

ಕೆಲವು ದಿನಗಳ ಹಿಂದೆ ಶೈನ್ ಅವರು ಬಿಗ್‍ಬಾಸ್‍ನಲ್ಲಿ ಸಹಸ್ಪರ್ಧಿಯಗಿದ್ದ ದೀಪಿಕಾ ದಾಸ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದರು. ದೀಪಿಕಾ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಿಗ್ ಬಾಸ್ ಮನೆಯ ಜೈ ಜಗದೀಶ್, ಅವರ ಪತ್ನಿ ವಿಜಯಲಕ್ಷ್ಮಿ, ಸುಜಾತ, ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ವಾಸುಕಿ, ಚಂದನಾ, ಹರೀಶ್ ರಾಜ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಬಿಗ್‍ಬಾಸ್ ನಂತರ ದೀಪಿಕಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರೂ ಮತ್ತೆ ಒಟ್ಟಾಗಿ ಸೇರಿ ಸಖತ್ ಆಗಿ ಎಂಜಾಯ್ ಮಾಡಿದ್ದರು.

Comments are closed.