ಮನೋರಂಜನೆ

ಜುರಾಸಿಕ್ ಪಾರ್ಕ್ ನಿರ್ದೇಶಕರ PORN STAR ಮಗಳ ಅರೆಸ್ಟ್

Pinterest LinkedIn Tumblr


ನವದೆಹಲಿ: ಹಾಲಿವುಡ್ ನ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ ಪುತ್ರಿ ಮಿಕೆಲಾ ಜಾರ್ಜ್ ಸ್ಪೀಲ್ಬರ್ಗ್, ಇತ್ತೀಚೆಗಷ್ಟೇ ಓರ್ವ ಪಾರ್ನ್ ಸ್ಟಾರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸುವುದಾಗಿ ಘೋಷಣೆ ಮಾಡಿದ್ದು, ಇದೀಗ ಮತ್ತೊಂದು ಕಾರಣಕ್ಕೆ ಹೆಡ್ಲೈನ್ ಸೃಷ್ಟಿಸಿದ್ದಾಳೆ. ಸದ್ಯ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆ ಪೊಲೀಸರು ಮಿಕೆಲಾ ಅವರನ್ನು ಬಂಧಿಸಿದ್ದಾರೆ.

ಎಸೆಷೋಬಿಜ್ ಡಾಟ್ ಕಾಮ್ ನಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ, ಮಿಕೆಲಾ ಶನಿವಾರ ಬೆಳಗ್ಗೆ ನೇಶವಿಲೇಯಲ್ಲಿ ಮಾನಸಿಕ ಕಿರುಕುಳ ನೀಡುವ ಅಪರಾಧವೊಂದನ್ನು ಮಾಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇಲ್ಲಿ ಮಿಕೆಲಾ ತನ್ನ ಪತಿ ಚಕ್ ಪೈನ್ ಕೋವ್ ಜೊತೆ ವಾಸವಾಗಿದ್ದು, ಚಕ್ ಓರ್ವ ವೃತ್ತಿಪರ ಡಾರ್ಟ್ ಆಟಗಾರರಾಗಿದ್ದಾರೆ.

ಇತ್ತೀಚೆಗಷ್ಟೇ ಮಿಕೆಲಾ ಅಡಲ್ಟ್ಸ್ ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿಜೀವನ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾಳೆ. ಅವಳ ಈ ನಿರ್ಣಯ ಕೈಗೊಂಡ ಕೇವಲ ಎರಡೇ ವಾರಗಳಲ್ಲಿ ಮಿಕೆಲಾ ಅವರು ಬಂಧನಕ್ಕೋಳಗಾಗಿ ಮತ್ತೆ ಸುದ್ದಿಯಾಗಿದ್ದಾಳೆ.

ಮಿಕೆಲಾ ತಾವು ಪಾರ್ನ್ ಇಂಡಸ್ಟ್ರಿ ಸೇರುವ ಕುರಿತು ಈ ಮೊದಲೇ ತನ್ನ ತಂದೆ-ತಾಯಿಯರ ಜೊತೆ ಚರ್ಚೆ ನಡೆಸಿರುವುದಾಗಿ ಹೇಳಿದ್ದರು ಎಂದು ಮೂಲಗಳು ಹೇಳಿವೆ. ಆದರೆ, ಓರ್ವ ಪೋಷಕರಾಗಿ ಮಿಕೆಲಾ ಅವರ ನಿರ್ಣಯಕ್ಕೆ ಸ್ಟೀವನ್ ಹಾಗೂ ಅವರ ಪತ್ನಿ ಕ್ಯಾಪ್ಷಾ ತಮ್ಮ ಅಸಹಮತಿಯನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸಾರ್ವಜನಿಕವಾಗಿ ಮಿಕೆಲಾ ಮಾಡಿರುವ ಈ ಘೋಷಣೆ ಅವರ ಇತರೆ ಮಕ್ಕಳ ಮೇಲೆ ನೇರ ಪರಿಣಾಮ ಬೀರಲಿದೆ ಎಂಬುದು ಅವರ ಅನಿಸಿಕೆಯಾಗಿತ್ತು. ಅಷ್ಟೇ ಅಲ್ಲ ನಿಶ್ಚಿತವಾಗಿ ತಾವು ತಮ್ಮ ಮಕ್ಕಳ ಬೆಳವಣಿಗೆ ಈ ರೀತಿ ಮಾಡಿಲ್ಲ ಎಂಬುದು ಅವರು ಹೇಳಿಕೊಂಡಿದ್ದಾರೆ.

Comments are closed.