ಮನೋರಂಜನೆ

ಸಿಹಿ ಸುದ್ಧಿ ನೀಡಿದ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಗೊಂಬೆ ನೇಹಾ ಗೌಡ!

Pinterest LinkedIn Tumblr


‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನಟಿಸಿದ್ದ ನೇಹಾ ಕಂಡರೆ ಹಲವು ಪ್ರೇಕ್ಷಕರಿಗೆ ಅಚ್ಚುಮೆಚ್ಚು. ಆರು ವರ್ಷಗಳಿಂದ ಅಧಿಕ ಸಮಯ ಈ ಧಾರಾವಾಹಿ ಪ್ರಸಾರವಾಗಿತ್ತು. ‘ಲಕ್ಷ್ಮೀ ಬಾರಮ್ಮ’ ಸೀರಿಯಲ್ ಆರಂಭವಾಗಿ ಮುಗಿಯುವವರೆಗೂ ನೇಹಾ ಇದರಲ್ಲಿ ನಟಿಸಿದ್ದರು. ಕೆಲದಿನಗಳ ಹಿಂದೆ ಈ ಧಾರಾವಾಹಿ ಪ್ರಸಾರ ಅಂತ್ಯವಾಗಿತ್ತು. ಇದಾದನಂತರದಲ್ಲಿ ಗೊಂಬೆ ನೇಹಾ ಗೌಡ ಏನು ಮಾಡುತ್ತಿದ್ದಾರೆ? ಎಂಬ ಕುತೂಹಲ ನಿಮಗಿರಬಹುದು.

ನೇಹಾ ಗೌಡ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಈ ಬಗ್ಗೆ ಮಾತನಾಡಿರುವ ನೇಹಾ “ಎಡೆಬಿಡದೆ ಏಳು ವರ್ಷಗಳ ಕಾಲ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದೇನೆ. ಎರಡು ವರ್ಷಗಳ ಹಿಂದೆ ನನ್ನ ಮದುವೆಗಾಗಿ ಶಾರ್ಟ್ ಬ್ರೇಕ್ ತೆಗೆದುಕೊಂಡಿದ್ದೆ. ಧಾರಾವಾಹಿ ಮುಗಿಯಿತು ಎಂದು ಗೊತ್ತಾದಾಗ ನನಗಾಗಿ ಒಂದಿಷ್ಟು ಸಮಯ ಸಿಗುತ್ತದೆ ಎಂದು ಖುಷಿಪಟ್ಟೆ. ದಿನ ಕಳೆದಂತೆ ಟಿವಿ ಶೋನ ದಿನಚರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ನನಗೆ ಕೆಲ ಪ್ರಾಜೆಕ್ಟ್‌ಗಳ ಆಫರ್ ಬರುತ್ತಿವೆ. ಅದರಲ್ಲಿ ‘ಮೂರುಗಂಟು’ ಸೀರಿಯಲ್‌ನಲ್ಲಿ ಅತಿಥಿ ಪಾತ್ರ ಮಾಡುವ ಆಫರ್ ಬಂದಾಗ, ನನಗೆ ಇದು ಪರ್ಫೆಕ್ಟ್‌ ಎಂದೆನಿಸಿತು. 10 ದಿನಗಳ ಶೂಟಿಂಗ್‌ ಇದೆ. ಈ ಧಾರಾವಾಹಿಯಲ್ಲಿ ನಾನು ಸ್ವಯಂವರವೊಂದರ ನಿರೂಪಕಿ ಪಾತ್ರ ಮಾಡುತ್ತಿದ್ದೇನೆ. ಇದೊಂದು ಸ್ವಯಂವರವಾಗಿರತ್ತೆ. ನನಗೆ ನಿರೂಪಣೆ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ‘ಮೂರುಗಂಟು’ ಧಾರಾವಾಹಿ ನನ್ನ ಬಹುದಿನದ ಆಸೆಯನ್ನು ಈಡೇರಿಸಿದೆ” ಎಂದಿದ್ದಾರೆ.

ಮುಂದಿನ ಪ್ರಾಜೆಕ್ಟ್‌ ಬಗ್ಗೆ ಮಾತನಾಡಿರುವ ನೇಹಾ “ನನಗೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಮಾಡುವಾಸೆಯಿದೆ. ಆದರೆ ಕೆಲವರು ನನಗೆ ಮದುವೆಯಾಗಿರೋದರಿಂದ ನಾನು ಇನ್ಮುಂದೆ ನಟಿಸೋದಿಲ್ಲ, ಮನೆಯಲ್ಲಿರುತ್ತೇನೆ ಎಂದುಕೊಂಡಿದ್ದರು. ಆದರೆ ಇದೆಲ್ಲ ಸುಳ್ಳು. ನಾನು ನಟನೆಯನ್ನು ಬಿಟ್ಟು ಇರೋದಿಲ್ಲ” ಎಂದು ಹೇಳಿದ್ದಾರೆ.

Comments are closed.