ಮನೋರಂಜನೆ

ತೆಲುಗಿನ ಪ್ರಸಿದ್ಧ ನಟನಿಗೆ ರಶ್ಮಿಕಾ ಮಂದಣ್ಣ ಅದೃಷ್ಟ ದೇವತೆ

Pinterest LinkedIn Tumblr


ಟಾಲಿವುಡ್ ಹೀರೋ ನಿತಿನ್‌ಗೆ ಕಂಗಣಭಾಗ್ಯ ಕೂಡಿಬಂದಿದೆ. ಶೀಘ್ರದಲ್ಲೇ ಹಸಮಣೆ ಏರುತ್ತಿದ್ದಾರೆ ಈ ನಟ. ಸುಮಾರು ಎಂಟು ವರ್ಷಗಳ ಕಾಲ ಶಾಲಿನಿ ಎಂಬ ಯುವತಿಯನ್ನು ಪ್ರೀತಿಸುತ್ತಿರುವ ನಿತಿನ್ ಕೊನೆಗೂ ಮನೆ ಮಂದಿಯನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳುತ್ತಿದ್ದಾರೆ.

ನಿತಿನ್ ಮನೆಯಲ್ಲಿ ನಿಶ್ಚಿತಾರ್ಥ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಮದುವೆ ಕೆಲಸಗಳು ಶುರುವಾಗಿವೆ, ಮ್ಯೂಸಿಕ್ ಸಹ ಶುರುವಾಗಿದೆ ನಿಮ್ಮೆಲ್ಲರ ಆಶೀರ್ವಾದ ಬೇಕು” ಎಂದಿದ್ದಾರೆ. ಏಪ್ರಿಲ್ 15ರಂದು ದುಬೈನ ಪಲಾಜೋ ವರ್ಸಾಚೆ ಹೋಟೆಲ್‌ನಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ.

2012ರಲ್ಲಿ ಶಾಲಿನಿಯನ್ನು ನಿತಿನ್ ಭೇಟಿಯಾದರಂತೆ. ಆದರೆ ಆಗ ಇಬ್ಬರ ನಡುವೆ ಸ್ನೇಹ ಸಂಬಂಧ ಮಾತ್ರ ಇತ್ತು ಎಂದಿದ್ದಾರೆ. ಎರಡು ವರ್ಷಗಳ ಹಿಂದೆ ಸ್ನೇಹ ಸಂಬಂಧ ಪ್ರೀತಿಯಾಗಿ ಬದಲಾಯಿತಂತೆ. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದ ಕಾರಣ ಜೀವನ ಹಂಚಿಕೊಳ್ಳಲು ನಿರ್ಧರಿಸಿದ್ದಾಗಿ ಹೇಳಿಕೊಂಡಿದೆ ಈ ಜೋಡಿ.
ರಶ್ಮಿಕಾ ಮಂದಣ್ಣ ನಟನೆಯ ಸಿನಿಮಾದ ಹಾಡಿನಲ್ಲೂ ‘ಐಟಿ’ ದಾಳಿ! ಆ ಟಾಲಿವುಡ್‌ ಹೀರೋ ಹೀಗ್ಯಾಕೆ ಹೇಳಿದ್ರು?

ಸದ್ಯಕ್ಕೆ ನಿತಿನ್ ತೆಲುಗಿನ ‘ಭೀಷ್ಮ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹೀರೋಯಿನ್ ಕನ್ನಡತಿ ರಶ್ಮಿಕಾ ಮಂದಣ್ಣ. ವೆಂಕಿ ಕುಡುಮಲ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಭಾರಿ ನಿರೀಕ್ಷೆಗಳನ್ನು ಮೂಡಿಸಿರುವ ಸಿನಿಮಾ ಇದು.

ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸಹ ಟ್ವೀಟ್ ಮಾಡಿದ್ದು, “ಅಭಿನಂದನೆಗಳು ನಿತಿನ್ ಸಾರ್, ನೋಡಿ ನಾನು ನಿಮಗೆ ಎಷ್ಟು ಲಕ್ಕಿ ಅಂತ. ನೀವು ಮದುವೆಯಾಗುತ್ತಿದ್ದೀರಾ. ನನಗಂತೂ ತುಂಬಾ ಖುಷಿಯಾಗುತ್ತಿದೆ” ಎಂದಿದ್ದಾರೆ ರಶ್ಮಿಕಾ.

Comments are closed.