ಮನೋರಂಜನೆ

ವಿವಾಹ ಪೂರ್ವ ಸೆಕ್ಸ್ ತಪ್ಪಲ್ಲ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಕಿಯಾರಾ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು, ಮದುವೆಗೂ ಮೊದಲು ಸೆಕ್ಸ್ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವ್ಯಕ್ತಿಯ ಜೊತೆ ಮದುವೆಯಾಗಿ ಕೊನೆವರೆಗೂ ಜೊತೆಯಲ್ಲಿರುತ್ತೇನೆ ಎಂಬ ನಂಬಿಕೆ ನಿಮಗಿದ್ದರೆ, ನೀವು ದೈಹಿಕ ಸಂಬಂಧವನ್ನು ಹೊಂದಬಹುದು ಎಂದು ಹೇಳಿದ್ದಾರೆ.

ಇದೇ ವೇಳೆ ಕಿಯಾರಾ, ನಾನು ಯಾರನ್ನು ಪ್ರೀತಿಸುತ್ತಿಲ್ಲ. ಹಾಗೇನಾದರು ಇದ್ದರೆ ನಾನು ಎಲ್ಲರಿಗೂ ನೇರವಾಗಿಯೇ ಹೇಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಕಿಯಾರಾ ‘ಲಕ್ಷ್ಮಿ ಬಾಂಬ್’, ‘ಭೂಲ್‍ಭುಲಯ್ಯ-2’, ‘ಶೇರ್ ಷಾ’ ಹಾಗೂ ‘ಇಂದೂ ಕಿ ಜವಾನಿ’ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಕಿಯಾರಾ ಕೊನೆಯದಾಗಿ ‘ಕಬೀರ್ ಸಿಂಗ್’ ಹಾಗೂ ‘ಗುಡ್ ನ್ಯೂಸ್’ ಚಿತ್ರದಲ್ಲಿ ನಟಿಸಿದ್ದರು. ಇದೀಗ ಅವರು ಟಾಲಿವುಡ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಹೊಸ ಚಿತ್ರಕ್ಕೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಿಯಾರಾ ಅಡ್ವಾನಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಈ ಹಿಂದೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಿ- ಟೌನ್‍ನಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಕಿಯಾರಾ ನಾನು ಯಾರನ್ನು ಪ್ರೀತಿಸುತ್ತಿಲ್ಲ ಎಂದು ಹೇಳುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

Comments are closed.