ಮನೋರಂಜನೆ

ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟಿ

Pinterest LinkedIn Tumblr

ಬೆಳ್ಳಿ ಪರದೆಯಲ್ಲಿ ಮಿಂಚಬೇಕೆಂದು ಆಸೆಯಿಂದ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಉದಯೋನ್ಮುಖ ನಟಿಯೊಬ್ಬಳು ಕೊನೆಗೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

ಬುರ್ದ್ವಾನ್ ಮೂಲದ ಬೆಂಗಾಲಿಯ ಉದಯೋನ್ಮುಖ ನಟಿ 23 ಸುಬರ್ನಾ ಜಶ್ ತಮ್ಮ ಮನೆಯಲ್ಲಿನ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನೇಣು ಕುಣಿಕೆಯಲ್ಲಿದ್ದ ಸುಬರ್ನಾ ಅವರನ್ನು ಪೋಷಕರು ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸುಬರ್ನಾ ಅವರು ಕೊನೆಯಾದಾಗಿ ಮಾಯುರ್ ಪಂಕಿ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Comments are closed.