ಮನೋರಂಜನೆ

ಸಂದರ್ಶನದಲ್ಲಿ ವಿಚ್ಛೇದನ ಪಡೆದ ಕುರಿತು ಖಾಸಗಿ ಜೀವನದ ಹಲವು ವಿಷಯ ಹಂಚಿಕೊಂಡ ದಿಯಾ ಮಿರ್ಜಾ

Pinterest LinkedIn Tumblr


ಮುಂಬೈ: ಬಾಲಿವುಡ್ ನಟಿ ದಿಯಾ ಮಿರ್ಜಾ ಸಂದರ್ಶನದಲ್ಲಿ ತಮ್ಮ ವಿಚ್ಛೇದನ ಪಡೆದ ಬಗ್ಗೆ ಹೇಳಿದ್ದಾರೆ. ಈ ಸಂದರ್ಶನದಲ್ಲಿ ಖಾಸಗಿ ಜೀವನದ ಬಗ್ಗೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ದಿಯಾ ಹಂಚಿಕೊಂಡಿದ್ದಾರೆ.

ನನಗೆ ನಾಲ್ಕೂವರೆ ವರ್ಷ, ಅಮ್ಮನಿಗೆ 34 ವರ್ಷ. ಆವಾಗ ಅಪ್ಪ-ಅಮ್ಮ ವಿಚ್ಛೇದನ ಪಡೆದು ಬೇರೆಯಾಗಿದ್ದರು. ವಿಚ್ಛೇದನದ ಬಳಿಕ ಬದುಕು ಹೇಗಿರುತ್ತೆ ಎಂಬುದರ ಅರಿವು ನನಗಿತ್ತು. ಅಮ್ಮನ ಜೀವನದಲ್ಲಿ ನಡೆದಂತೆ ನಾನು ಸಹ ನನ್ನ 37ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆಯಬೇಕಾಯ್ತು. ಬಹುತೇಕ ದಂಪತಿ ಬೇರೆ ಆಗಲು ಹಿಂದೇಟು ಹಾಕುತ್ತಾರೆ. ಮುಂದಿನ ಜೀವನ ಹೇಗಿರುತ್ತೆ? ಸಮಾಜ ನಮ್ಮನ್ನು ಯಾವ ರೀತಿ ಸ್ವೀಕರಿಸುತ್ತೆ ಎಂಬ ಭಯ ಇರುತ್ತೆ. ನನ್ನ 37ನೇ ವಯಸ್ಸಿನಲ್ಲಿ ಇಂತಹದೊಂದು ದಿಟ್ಟ ನಿರ್ಧಾರಕ್ಕೆ ಬರಬೇಕಾಯ್ತು ಎಂದು ಹೇಳಿದರು.

ಕಳೆದ ವರ್ಷ ಆಗಸ್ಟ್ ನಲ್ಲಿ ಪತಿ ಸಾಹಿಲ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇನೆ ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಳ್ಳುವ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದರು. 11 ವರ್ಷಗಳ ಬಳಿಕ ನಾವಿಬ್ಬರು ಬೇರೆ ಆಗಬೇಕೆಂದು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಬ್ಬರು ಒಳ್ಳೆಯ ಸ್ನೇಹಿತರಾಗಿರಲು ಇಷ್ಟಪಡುತ್ತೇವೆ. ದೂರವಾದ ಬಳಿಕ ಒಬ್ಬರನ್ನೊಬ್ಬರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತೇವೆ. ಇಂದಿನಿಂದ ಇಬ್ಬರ ಜೀವನ ಹೊಸ ದಿಕ್ಕುಗಳತ್ತ ಸಾಗಲಿದ್ದು, ಇಷ್ಟು ದಿನ ಜೊತೆಯಾಗಿದ್ದಕ್ಕೆ ಒಬ್ಬರಿಗೊಬ್ಬರು ಆಭಾರಿಯಾಗಿದ್ದೇವೆ. ಇಷ್ಟು ನಮ್ಮ ಜೊತೆಗಿದ್ದ ಕುಟುಂಬ, ಸ್ನೇಹಿತರ ಬಳಗ ಮತ್ತು ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸಿ ಎಲ್ಲ ವಿಚಾರವನ್ನು ದಿಯಾ ತಿಳಿಸಿದ್ದರು.

2014ರಲ್ಲಿ ಮದುವೆ: 2014 ಅಕ್ಟೋಬರ್ 18ರಂದು ದಿಯಾ ಮಿರ್ಜಾ ಉದ್ಯಮಿ ಸಾಹಿಲ್ ಅವರನ್ನು ಮದುವೆ ಆಗಿದ್ದರು. ಆರ್ಯ ಸಂಪ್ರದಾಯದಂಯೆ ಮದುವೆ ದೆಹಲಿಯಲ್ಲಿ ನಡೆದಿತ್ತು. ಹೈದರಾಬಾದ್ ಸಂಪ್ರದಾಯದಂತೆ ದಿಯಾ ರೆಡಿಯಾಗಿ ಕಂಗೊಳಿಸಿದ್ದರು. ಸಾಹಿಲ್ ಮತ್ತು ದಿಯಾ ಮದುವೆ ಬಳಿಕ ಜೊತೆಯಾಗಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು. ವ್ಯವಹಾರದಲ್ಲಿ ಮನಸ್ತಾಪ ಉಂಟಾದ ಹಿನ್ನೆಲೆಯಲ್ಲಿ ಇಬ್ಬರು ಬೇರೆಯಾಗಲು ನಿರ್ಧರಿಸಿದ್ದರು ಎಂದು ವರದಿಗಳ ಪ್ರಕಟವಾಗಿವೆ.

ಮಂದಿನ ಸಿನಿಮಾ ಥಪ್ಪಡ್: ತಾಪ್ಸಿ ಪನ್ನು ನಟನೆಯ ‘ಥಪ್ಪಡ್’ ಸಿನಿಮಾದಲ್ಲ ಶಿವಾನಿ ಪಾತ್ರದಲ್ಲಿ ದಿಯಾ ಮಿರ್ಜಾ ನಟಿಸುತ್ತಿದ್ದಾರೆ. ಅನುವ್ ಸಿನ್ಹಾ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಫೆಬ್ರವರಿ 28ರಂದು ಬಿಡುಗಡೆಯಾಗಲಿದೆ.

Comments are closed.