
ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಪ್ರಿಯಾಂಕಾ ಚೋಪ್ರ ಧರಿಸಿದ್ದ ಗ್ಲಾಮರಸ್ ಗೌನ್ ಒಂದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ನಟಿಯ ಡ್ರೆಸ್ ಚಾಯ್ಸ್ ವಿರುದ್ಧ ಅನೇಕ ಜನರು ಟೀಕೆ ಮಾಡಿದ್ದರು. ಈ ಬಗ್ಗೆ ಪ್ರಿಯಾಂಕಾ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಅವರ ತಾಯಿ ಮಧು ಚೋಪ್ರಾ ಮಾತ್ರ ಟ್ರೋಲಿಗರು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನನ್ನ ಮಗಳು ಪ್ರಿಯಾಂಕಾ ಅವಳದೇ ರೀತಿಯಲ್ಲಿ ಜೀವನ ನಡೆಸುತ್ತಿದ್ದಾಳೆ. ಅದು ಅವಳ ದೇಹ. ಆಕೆ ತಾನು ಬಯಸಿದ್ದನ್ನು ಮಾಡಬಹುದು ಮತ್ತು ಅವಳು ಸುಂದರವಾಗಿಯೂ ಇದ್ದಾಳೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವಿವಾದದಿಂದ ನನಗೆ ಸಂತೋಷವಾಗಿದೆ. ಯಾಕೆಂದರೆ ಇದರಿಂದ ಪ್ರಿಯಾಂಕಾ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾಳೆ. ಆಕೆ ತನ್ನ ವೈಯಕ್ತಿಕ ಆಯ್ಕೆಗಳಿಂದ ಯಾರಿಗೂ ಹಾನಿಯುಂಟು ಮಾಡುತ್ತಿಲ್ಲ. ತನಗೆ ಸರಿಯೆಂದು ಅನಿಸಿದ್ದನ್ನೇ ಮಾಡುತ್ತಿದ್ದಾಳೆ. ಇಂಥ ಧೋರಣೆಯನ್ನು ಎಲ್ಲರೂ ಅನುಕರಿಸಬೇಕಿದೆ ಎಂದು ಹೇಳಿರುವ ಮಧು ಚೋಪ್ರಾ, ಟ್ರೋಲ್‌ಗಳಿಗೆ ನಾನು ಅಂಥ ಮಹತ್ವ ನೀಡುವುದಿಲ್ಲ. ಯಾಕೆಂದರೆ ತಮ್ಮ ಜೀವನದಲ್ಲಿಸಂತೋಷವಾಗಿರದ ಜನರೇ ಕಂಪ್ಯೂಟರ್ ಹಿಂದೆ ಕುಳಿತುಕೊಂಡು ಇಂಥ ಟ್ರೋಲ್‌ಗಳನ್ನು ಮಾಡಿ ಗಮನ ಸೆಳೆಯಲು ಯತ್ನಿಸುತ್ತಾರೆ ಎಂದಿದ್ದಾರೆ.
ಪ್ರಿಯಾಂಕಾ ಅಂದು ಧರಿಸಿದ್ದ ಗೌನ್ ತುಂಬಾ ಚೆನ್ನಾಗಿತ್ತು. ಅದನ್ನು ಧರಿಸುವ ಮೊದಲು ಆಕೆ ಅದರ ಸ್ಯಾಂಪಲನ್ನು ನನಗೆ ತೋರಿಸಿದ್ದಾಳೆ. ಅದನ್ನು ಆಕೆ ಚೆನ್ನಾಗಿಯೇ ಧರಿಸಿದ್ದಳು ಎಂದು ಮಧು ಚೋಪ್ರಾ ವಿವರಿಸಿದ್ದಾರೆ. ಅದೇ ರೀತಿ ಈ ಡ್ರೆಸ್‌ಗೆ ನೆಗೆಟಿವ್ ಕಾಮೆಂಟ್ ಮಾಡಿದ್ದ ಫ್ಯಾಷನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್‌ಗೂ ಅವರು ಟ್ವಿಟ್ಟರ್‌ನಲ್ಲಿಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
Comments are closed.