ಮನೋರಂಜನೆ

ರಿಜಿಸ್ಟರ್​​ ಆಫೀಸ್​ನಲ್ಲಿ ಸರಳ ಮದುವೆಯಾದ ನಟ ಚೇತನ್

Pinterest LinkedIn Tumblr


ಬೆಂಗಳೂರು: ಆ ದಿನಗಳು ಖ್ಯಾತಿಯ ಚೇತನ್ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು, ರಿಜಿಸ್ಟರ್ ಆಫೀಸಿನಲ್ಲಿ ಬಹುದಿನಗಳ ಗೆಳತಿ ಮೇಘಾಳೊಂದಿಗೆ ವಿವಾಹವಾಗಿದ್ದಾರೆ. ಸಾಂಪ್ರದಾಯಿಕ ಉಡುಗೆಯುಟ್ಟು ನಟ ಚೇತನ್ ಮತ್ತು ಮೇಘಾ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಚೇತನ್- ಮೇಘಾಳ ಸ್ನೇಹಿತರು ಸಂಬಂಧಿಕರು ಸಾಕ್ಷಿಯಾಗಿದ್ದರು.

ಚೇತನ್ ಬಾಳಿಗೆ ಬಾಳ ಚೇತನಳಾಗಿ ಬಂದರು ಮೇಘ..!
ರಿಜಿಸ್ಟರ್​​ ಆಫೀಸ್​ನಲ್ಲಿ ಚೇತನ್ ಮದುವೆ ಸರಳ ಸರಾಗ..
ಸಂವಿಧಾನ ಬದ್ಧವಾಗಿ ಜೊತೆಯಾದ್ರು ನವ ಜೋಡಿ..
ಚೇತನ್-ಮೇಘಾರಿಗೆ ಹರಿದು ಬಂತು ಶುಭಾಶಯಗಳ ನುಡಿ..
ಚೇತನ್ ಕುಮಾರ್.. ಚಿತ್ರರಂಗಕ್ಕೆ ಬಂದ ಮೇಲೆ ಆದಿನಗಳು ಚೇತನ್. ಈಗ ಚೇತನ್ ಅಹಿಂಸಾ. ಸಿನಿಮಾ ಮತ್ತು ಹೋರಾಟಗಳಿಂದ ಹೆಸರುವಾಸಿಯಾಗಿರುವವರು ಇವರು. ತನ್ನ ಇಚ್ಛೆಯನ್ನ ಅರೆಯುವ , ತನ್ನ ವಿಭಿನ್ನ ವಿಶಿಷ್ಟ ನಡೆನುಡಿಗಳನ್ನ ಕೊಂಡಾಡುವ , ತನ್ನಂತೆ ಸಾಮಾಜಿಕ ಕಳಕಳೆಯುವಳ ಹುಡುಗಿಯನ್ನೇ ಮದುವೆಯಾಗಿದ್ದಾರೆ.

ಚೇತನ್ ಅವರ ಮದುವೆ ಉತ್ತರ ಭಾರತ ಮೂಲದ ಮೇಘಾ ಅವರ ಜೊತೆಗೆ ಎಂದು ನಾವೇ ನಿಮಗೆ ಮೊದ ಮೊದಲು ಹೇಳಿದ್ವಿ. ಈಗ ಮದುವೆ ಮಂಟಪದ ತನಕ ಬಂದು ನಿಂತಿದೆ ನೋಡಿ ಆ ಜೋಡಿ. ಸವಿಂಧಾನದ ಬಗ್ಗೆ ಅಪಾರ ವಿಶ್ವಾಸ ಮತ್ತು ಭಕ್ತಿಯನ್ನು ಇಟ್ಟುಕೊಂಡಿರುವ ನಟ ಚೇತನ್ , ತಾವಂದುಕೊಂಡಂಗೆ ಸರಳವಾಗಿ ಸಬ್ ರಿಜಿಸ್ಟರ್ ಆಫೀಸ್​ನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

ಬೆಳಗ್ಗೆ 11.30ರ ಸುಮಾರಿಗೆ ಬಿಳಿ ಪಂಚೆ ಶರ್ಟ್ ಮತ್ತು ಹಸಿರು ಶಾಲು ತೊಟ್ಟು ಬಂದಿದ್ದರು ಚೇತನ್. ಅವರಂತೆ ಅವರ ಸತಿ ಕೂಡ ಕೆಂಪು ಬಣ್ಣದ ಕಂಚಿನ ಸೀರೆಯೂಟ್ಟು ಮೀರ ಮೀರ ಮಿಂಚುತ್ತ ಚೇತನ್ ಜೊತೆ ನಿಂತಿದ್ದರು ಮೇಘ. ತಂದೆ ತಾಯಿ – ಬಂಧು ಮಿತ್ರರೊಟ್ಟಿಗೆ ರಿಜಿಸ್ಟರ್ ಆಫೀಸರ್ ಮುಂದೆ ಹಾರ ಬದಲಾಯಿಸಿಕೊಂಡು ರಿಜಿಸ್ಟರ್​​ ಬುಕ್​ಗೆ ಸಿಹಿ ಮನಸಿನಿಂದ ಸಹಿ ಹಾಕಿ ಸಂತೋಷ ಪಟ್ಟರು.

Comments are closed.