ಮನೋರಂಜನೆ

ನಮ್ಮಿಬ್ಬರೊಂದಿಗೆ ಹಾಸಿಗೆ ಹಂಚಿಕೊಂಡರೆ ಸಿನಿಮಾದಲ್ಲಿ ಚಾನ್ಸ್

Pinterest LinkedIn Tumblr


ಇತ್ತೀಚೆಗೆ ಕಾಸ್ಟಿಂಗ್​​ ಕೌಚ್​ ವಿಚಾರ ಭಾರೀ ಸದ್ದು ಮಾಡುತ್ತಿದೆ. ತಮ್ಮ ವೃತ್ತಿ ಜೀವನದಲ್ಲಿ ಉಂಟಾದ ಕಹಿ ನೆನಪುಗಳ ಬಗ್ಗೆ ಅನೇಕ ನಟಿಯರು ಮೌನ ಮುರಿದಿದ್ದಾರೆ. ಈಗ ಮತ್ತೋರ್ವ ನಟಿ ಕೋರ್ಟ್​ನಲ್ಲಿ ಇಂತಹ ಆರೋಪ ಮಾಡಿದ್ದಾರೆ. ತಮ್ಮ ಜೊತೆ ಮಲಗಿದರೆ ಸಿನಿಮಾ ಚಾನ್ಸ್​​ ನೀಡುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ನಟಿಯೋರ್ವಳು ಆರೋಪ ಮಾಡಿದ್ದಾರೆ.

ಇದು ನಡೆದಿದ್ದು ಹಾಲಿವುಡ್​ ಚಿತ್ರರಂಗದಲ್ಲಿ. ಮಾಜಿ ನಟಿಯೋರ್ವಳು ಕೋರ್ಟ್​ನಲ್ಲಿ ಹೀಗೊಂದು ಆರೋಪ ಮಾಡಿದ್ದಾರೆ. ನಿರ್ಮಾಪಕರೊಬ್ಬರು ಕಾಸ್ಟಿಂಗ್​ ಕೌಚ್​ ಮಾಡಿರುವುದಾಗಿ ಮಾಜಿ ನಟಿ ಆರೋಪಿಸಿದ್ದಾರೆ. ಹಾರ್ವೇ ವೈನ್​ಸ್ಟೈನ್​ (67) ಕಾಸ್ಟಿಂಗ್​ ಕೌಚ್​ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಇವರು ನಿನ್ನೆ ಕೋರ್ಟ್​ ಮುಂದೆ ಹಾಜರಾಗಿದ್ದು, ಸಂತ್ರಸ್ತೆ ತಮಗಾದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.

“2004ರಲ್ಲಿ ಹಾರ್ವೇ ನನ್ನನ್ನು ಹೋಟೆಲ್​ ಒಂದಕ್ಕೆ ಕರೆದಿದ್ದರು. ಈ ವೇಳೆ ರೂಮ್​ ಪ್ರವೇಶಿಸುತ್ತಿದ್ದಂತೆ ಅವರು ಬಾಗಿಲು ಹಾಕಿದ್ದರು. ನಂತರ ಏಕಾಏಕಿ ನನ್ನ ಸ್ಕರ್ಟ್​ ಎತ್ತಿ ಗುಪ್ತಾಂಗಕ್ಕೆ ಕೈ ಹಾಕಿದ್ದರು. ನನಗೆ ಒಮ್ಮೆ ಶಾಕ್​ ಆಗಿತ್ತು. ನಂತರ ನಾನು ವಿರೋಧ ವ್ಯಕ್ತಪಡಿಸಿದಾಗ ಈ ರೀತಿ ಮತ್ತೆ ಆಗುವುದಿಲ್ಲ. ಈ ಬಗ್ಗೆ ಯಾರಿಗೂ ಹೇಳಬೇಡ ಎಂದು ಅವರು ಕೋರಿದ್ದರು,” ಎಂದಿದ್ದಾರೆ ಸಂತ್ರಸ್ತೆ.

ಮತ್ತೊಮ್ಮೆ ಹಾರ್ವೇ ಸಹಾಯಕ ಸಿನಿಮಾ ವಿಚಾರ ಮಾತನಾಡುವ ಬಗ್ಗೆ ಹೋಟೆಲ್​ಗೆ ಸಂತ್ರಸ್ತೆಯನ್ನು ಕರೆಸಿಕೊಂಡಿದ್ದನಂತೆ. “ನೀನು ಹಾರ್ವೇ ಹಾಗೂ ನನ್ನ ಜೊತೆ ಒಟ್ಟಿಗೆ ಸೆಕ್ಸ್​ ಮಾಡಲು ಒಪ್ಪಿದರೆ ನಾನು ನಿಮಗೆ ಮೂರು ಚಿತ್ರಗಳಲ್ಲಿ ನಟಿಸಲು ಚಾನ್ಸ್​ ನೀಡುತ್ತೇನೆ ಎಂದಿದ್ದರು. ಆದರೆ, ನಾನು ಇದಕ್ಕೆ ಒಪ್ಪಿರಲಿಲ್ಲ. ಹಾಗೆಯೇ ಹೊರ ನಡೆದೆ” ಎಂದು ಮಾಜಿ ನಟಿ ಹೇಳಿಕೊಂಡಿದ್ದಾರೆ.

ಆದಾಗ್ಯೂ ಹಾರ್ವೇ ಇವರನ್ನು ಬಿಟ್ಟಿರಲಿಲ್ಲ. ಒಂದು ದಿನ ತಮ್ಮ ಕಚೇರಿಗೆ ಆಕೆಯನ್ನು ಕರೆಸಿಕೊಂಡಿದ್ದನಂತೆ. ಈ ವೇಳೆ ಹಾರ್ವೇ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದ. ಈ ಬಗ್ಗೆ ಆಕೆ ಕೋರ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

Comments are closed.