ಮನೋರಂಜನೆ

ಕತ್ರಿನಾ ಕೈಫ್‌ ಮದುವೆಯಲ್ಲಿ ಅಮಿತಾಬ್ ಬಚ್ಚನ್ ಜೊತೆ ಶಿವರಾಜ್‌ ಕುಮಾರ್!

Pinterest LinkedIn Tumblr

ನಮ್ಮ ಕನ್ನಡದ ನಟ ಶಿವರಾಜ್‌ ಕುಮಾರ್‌ ಬಿಗ್‌ ಬಿ ಮನೆಗೆ ತೆರಳಿದ್ದಾರೆ. ಕಾರಣ ಕತ್ರಿನಾ ಕೈಫ್ ಮದುವೆ. ಇದರಲ್ಲಿ ಬಾಲಿವುಡ್ ಬಿಗ್ಬಿ ಹ್ಯಾಟ್ರಿಕ್ ಹೀರೋ ಶಿವಣ್ಣ, ನಾಗಾರ್ಜುನ, ಪ್ರಭು ಅವರನ್ನು ಭೇಟಿಯಾಗಿದ್ದಾರೆ. ಅಂದ ಹಾಗೆ ಇದೇನು ಎಂದು ಅಚ್ಚರಿಪಟ್ಟ ಕತ್ರಿನಾ ಕೈಫ್ ಅವರ ರಿಯಲ್ ಮದ್ವೆ ಅಲ್ಲ. ಜಸ್ಟ್ ರೀಲ್ ಮದ್ವೆ.

ಹೌದು, ಈ ಮದುವೆಯ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದ್ರಲ್ಲಿ ಕತ್ರಿನಾ ಜೊತೆ ಅಮಿತಾಬ್ ಬಚ್ಚನ್ ಮತ್ತು ಜಯಪ್ರದ ಸಹ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್, ಪ್ರಭು ಮತ್ತು ನಾಗಾರ್ಜುನ ಜೊತೆ ತೆಗೆದಿರುವ ಫೋಟೋವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ನನಗೆ ಮತ್ತು ಜಯಾಗೆ ಇದೊಂದು ಐತಿಹಾಸಿಕ ಕ್ಷಣ. ಭಾರತೀಯ ಸಿನಿಮಾ ಇಂಡಸ್ಟ್ರಿಯ ಮೂವರು ಲೆಜೆಂಡ್ಗಳ ಸೂಪರ್ಸ್ಟಾರ್ ಮಕ್ಕಳೊಂದಿಗೆ ಕೆಲಸ ಮಾಡುವ ಕ್ಷಣ ಎಂದು ಅವರೇ ಬರೆದುಕೊಂಡಿದ್ದಾರೆ.

ಜ್ಯೂವೆಲರಿ ಆ್ಯಡ್ ಒಂದರ ಶೂಟಿಂಗ್ನಲ್ಲಿ ನಿನ್ನೆ ಅಮಿತಾಭ್ ಬಚ್ಚನ್ ಮತ್ತು ಪತ್ನಿ ಜಯಾ ಬಚ್ಚನ್ ಜೊತೆಯಲ್ಲಿ ಸ್ಟೆಪ್ ಹಾಕಿ ಸುದ್ದಿಯಾಗಿದ್ರು. ಫೋಟೊದಲ್ಲಿ ಸ್ಯಾಂಡಲ್ವುಡ್ನ ಶಿವರಾಜ್ಕುಮಾರ್, ಟಾಲಿವುಡ್ನ ನಾಗಾರ್ಜುನ ಹಾಗೂ ತಮಿಳಿನ ನಟ ಶಿವಾಜಿ ಪ್ರಭು ಕಾಣಿಸಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಅಮಿತಾಭ್ ಬಚ್ಚನ್.. ಜ್ಯೂವೆಲರಿ ಆ್ಯಡ್ ಕನ್ನಡ, ತಮಿಳು ಮತ್ತು ತೆಲುಗು ಭಾಷೆಯಲ್ಲೂ ನಿರ್ಮಾಣವಾಗಿದೆ ಎನ್ನಲಾಗಿದೆ.

Comments are closed.