ಮನೋರಂಜನೆ

ಈಜುಡುಗೆಯಲ್ಲಿ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಜಲಕ್ರೀಡೆ

Pinterest LinkedIn Tumblr


ಮಾಲ್ಡೀವ್ಸ್‌‍ನ ಮಹಾಸಮುದ್ರದಲ್ಲಿ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಜಲಕ್ರೀಡೆಯಾಡುತ್ತಾ ಸಂಭ್ರಮಿಸಿದ್ದಾರೆ. ಮಾಲ್ಡೀವ್ಸ್ ಪ್ರವಾಸದಲ್ಲಿರುವ ಪರಿಣೀತಿ ಚೋಪ್ರಾ ಕಪ್ಪು ಬಣ್ಣದ ಸ್ವಿಮ್ ಸೂಟ್ ಧರಿಸಿ, ಕಪ್ಪು ಕನ್ನಡಕ ಹಾಕಿಕೊಂಡು ನೀಲಿ ಬಣ್ಣದ ಸಮುದ್ರದಲ್ಲಿ ಜಲಕ್ರೀಡೆಯಾಡುತ್ತಾ ಖುಷಿಪಟ್ಟಿದ್ದಾರೆ.

ಈ ಬೆಡಗಿ ತನ್ನ ರಜಾ ದಿನಗಳನ್ನು ಹೆಚ್ಚಾಗಿ ಮಾಲ್ಡೀವ್ಸ್‌ನಲ್ಲಿ ಕಳೆಯುತ್ತಿರುತ್ತಾರೆ. ಮಹಾಸಮುದ್ರದಲ್ಲಿ ಉಯ್ಯಾಲೆ ಆಡುತ್ತಿರುವ ಚಿತ್ರವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. “ನಾನು ಖುಷಿಯಾಗಿದ್ದೇನೆ, ಮಾಲ್ಡೀವ್ಸ್ ನನ್ನ ಪಾಲಿಗೆ ಎರಡನೇ ಮನೆ ಇದ್ದಂತೆ… ಡೈವಿಂಗ್‌ನಿಂದಲೇ ಪರಿಪೂರ್ಣತೆ ಬರುತ್ತದೆ” ಎಂದಿದ್ದಾರೆ.

ಪರಿಣೀತಿ ಚೋಪ್ರಾ ಡಿಸೆಂಬರ್ ತಿಂಗಳಲ್ಲಿ ಆಸ್ಟ್ರಿಯಾ ಕಣಿವೆಗಳ ಜೊತೆಗೆ ಹಿಮಚ್ಛಾದಿತ ಬೆಟ್ಟಗಳಲ್ಲಿ ವಿಹರಿಸಿದ್ದಾರೆ. ದಟ್ಟವಾದ ಮಂಜಿನಲ್ಲಿ ಕಪ್ಪುಬಣ್ಣದ ಕೋಟು ಹಾಕಿಕೊಂಡು ಕ್ಯಾಮೆರಾದಲ್ಲಿ ಬಂಧಿಯಾಗಿದ್ದಾರೆ. ಅಷ್ಟೇ ಅಲ್ಲ ಕ್ಯಾಂಪ್‍ಫೈರ್ ಮಾಡಿಕೊಂಡು ಆಸ್ಟ್ರಿಯಾ ಕಣಿವೆ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ಪರಿಣೀತಿ ಚೋಪ್ರಾ ಜಬಾರಿಯಾ ಜೋಡಿ ಸಿನಿಮಾದಲ್ಲಿ ಕಾಣಿಸಿದ್ದಾರೆ. ಬ್ಯಾಡ್ಮಿಂಟನ್ ಸ್ಟಾರ್ ಸೈನಾ ಜೀವನ ಕಥೆಯಾಧಾರವಾಗಿ ತೆರೆಗೆ ತರುತ್ತಿರುವ ಬಯೋಪಿಕ್‌ನಲ್ಲಿ ಸೈನಾ ನೆಹ್ವಾಲ್ ಪಾತ್ರವನ್ನು ಪರಿಣೀತಿ ಪೋಷಿಸುತ್ತಿದ್ದಾರೆ. ದಿ ಗರ್ಲ್ ಆನ್ ದಿ ಟ್ರೈನ್ ಹಿಂದಿ ರೀಮೇಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಚ್ಛೇದಿತ ಮಹಿಳೆ ಕಳೆದುಹೋದ ವ್ಯಕ್ತಿಯೊಂದಿಗೆ ಜೀವನ ಹಂಚಿಕೊಳ್ಳುವ ಥ್ರಿಲ್ಲರ್ ಸಿನಿಮಾ ಕಥೆಯಲ್ಲೂ ಪರಿಣೀತಿ ಅಭಿನಯಿಸುತ್ತಿದ್ದಾರೆ.

Comments are closed.